ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಬಿತ್ತಿಂದಂತಹ ಮುಂಗಾರಿನ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದ್ದು, ಅವುಗಳ ನಿರ್ವಹಣೆಗಾಗಿ ರೈತರು ಮುಂದಿನ ಕ್ರಮವನ್ನು ಅನುಸರಿಸಲು ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯಿಂದ ವಿನಂತಿಸಲಾಗಿದೆ.
1) ಹೊಲದಲ್ಲಿ ನಿಂತಿರುವ ನೀರನ್ನು ಹೊರಹಾಕಲು ಏರ್ಪಾಡು ಮಾಡುವುದು.
2) 'ಹೊಲದಲ್ಲಿ ಅಲ್ಲಲ್ಲಿ ಬಸಿಗಾಲುವೆಗಳನ್ನು ಮಾಡಿ ಮಣ್ಣಿನಲ್ಲಿ ಇರುವ ಹೆಚ್ಚಾದ ನೀರನ್ನು ಬಸಿದು ಹೋಗುವಂತೆ ನೋಡಿಕೊಳ್ಳುವುದು.
3) ಬೆಳೆಗಳ ಚೈತನ್ಯಕ್ಕೆ ಆಯಾ ಬೆಳೆಗಳಿಗೆ ಶಿಫಾರಸ್ಸಿನಂತೆ ಸಾರಜನಕವನ್ನು ಮೇಲು ಗೊಬ್ಬರವಾಗಿ ನೀಡುವುದು.
4) ಸತತ ಮಳೆಯಿಂದ ಬೆಳೆಗಳಲ್ಲಿ ಕಳೆಯ ಪ್ರಮಾಣ ಹೆಚ್ಚಾಗಿರುವ ಕಾರಣ ಆಯಾ ಬೆಳೆಗಳಿಗೆ ಸಂಬಂಧಿತ ಕಳೆನಾಶಕಗಳನ್ನು ಸಿಂಪರಣೆ ಮಾಡಿ ಕಳೆಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡುವುದು.
5) ಸತತ ಮಳೆಯಿಂದ ಶೇಂಗಾ ಬೆಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿರುವುದರಿಂದ ಶೇ. 0.8 ಕಬ್ಬಿಣದ ಸಲ್ವೇಟ್ ಮತ್ತು ಶೇ. 0.5 ರ ಸತುವಿನ ಸಲ್ವೇಟ್ ದ್ರಾವಣವನ್ನು 15 ದಿವಸದ ಅಂತರದಲ್ಲಿ ಎರಡು ಸಲ ಸಿಂಪಡಿಸಬೇಕು. ಪ್ರತಿ ಲೀಟರ್ ನೀರಿಗೆ 5 ಗ್ರಾಂ 15:0:45 ಲಘು ಪೋಷಕಾಂಶ ಸಿಂಪರಣೆ ಕೈಗೊಳ್ಳುವುದು.
6) ಹೆಚ್ಚಿನ ಮಳೆಯಿಂದ ಗೋವಿನ ಜೋಳದಲ್ಲಿ ಅಲ್ಲಲ್ಲಿ ಕಾಂಡ ಕೊಳೆರೋಗ ಕಂಡು ಬಂದಿದ್ದು ಇದರ ನಿರ್ವಹಣೆಗಾಗಿ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಮತ್ತು 0.5 ಗ್ರಾಂ ಸ್ಪೆಷ್ಟೋಮೈಸಿನ್ ಸಟ್ ಬೆರೆಸಿದ ದ್ರಾವಣ ಬೇರು ತೊಯ್ಯುವಂತೆ ಮಣ್ಣಿಗೆ ಹಾಕಬೇಕು.
7)ಗೋವಿನ ಜೋಳದಲ್ಲಿ ಶೇ. 20-25 ರಷ್ಟು ಫಾಲ್ ಸೈನಿಕ ಹುಳುವಿನ ಬಾಧೆ ಕಂಡು ಬಂದಿದ್ದು, ಕೂಡಲೇ ನಿರ್ವಹಣೆಗೆ 0.2 ಗ್ರಾಂ ಇಮಾಮಕ್ಟಿನ್ ಬೆಂಯೇಟ್ ಅಥವಾ 0.2 ಮಿ.ಲಿ. ಸೈನೋಸ್ಯಾಡ್ ಅಥವಾ 0.4 ಮಿ.ಲಿ. ಕ್ಲೋರಾಂಟ್ರಿನಿಲಿಪೋಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಯಲ್ಲಿ ಬೀಳುವ ಹಾಗೆ ಸಿಂಪಡಿಸಬೇಕು. ಸಿಂಪರಣೆಯನ್ನು ಸಾಯಂಕಾಲದ ಸಮಯದಲ್ಲಿ ಕೈಗೊಳ್ಳುವುದು ಉತ್ತಮ.
ಪ್ರತಿ ಲೀಟರ್ ನೀರಿಗೆ 19:19:19 ನೀರಿನಲ್ಲಿ ಕರಗುವ ಗೊಬ್ಬರವನ್ನು 5 ಗ್ರಾಂ ನಂತೆ ಬೆರೆಸಿ ಸಿಂಪಡಿಸಬೇಕು. ರಸ ಹೀರುವ ಕೀಟಗಳ ನಿರ್ವಹಣೆಗಾಗಿ 0.25 ಗ್ರಾಂ ಅಸಿಟಾಮಾಪೀಡ್ ಅಥವಾ 0.25 ಗ್ರಾಂn ಥೈಯೋಮಿಥೋಗ್ರಾಮ್ ಅಥವಾ 0.2 ಮಿಲೀ ಪ್ಲೋನಿಕಮೈನಡ್ ಕೀಟನಾಶಕವನ್ನು ಸಿಂಪಡಿಸುವುದು.
8) ಸೂರ್ಯಕಾಂತಿ ಬೆಳೆಯುವ ರೈತರು ಅಗಸ್ಟ್ 15 ನೇ ತಾರೀಖಿನ ನಂತರ ಬಿತ್ತನೆ ಕೈಗೊಳ್ಳಬಹುದು ಹೊಲದ ಸುತ್ತಲು ಕನಿಷ್ಠ 4 ರಿಂದ 5 ಸಾಲು ಎತ್ತರವಾಗಿ ಬೆಳೆಯುವ ಜೋಳ, ಸಜ್ಜೆ, ಗೋವಿನ ಜೋಳವನ್ನು ದಟ್ಟವಾಗಿ ಬಿತ್ತಬೇಕು. ಹೊಲದ ಸುತ್ತಮುತ್ತಲು ಪ್ರಾರ್ಥನಿಯಂ ಮತ್ತು ಇತರೆ ಕಳೆಗಳಿಂದ ಮುಕ್ತವಾಗಿರಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಬಹುದು.
Share your comments