ವಾಟ್ಸಪ್ ಮೆಸೆಜಿಂಗ್ ಅಪ್ಲಿಕೇಶನ್ ಯಾರಿಗೆ ತಾನೆ ಗೊತ್ತಿಲ್ಲ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಪ್ರತಿಯೊಬ್ಬರು ಬಳಸುವ ಅಪ್ಲಿಕೇಶನ್ ವಾಟ್ಸಪ್. ಇದೀಗ ಇದರಲ್ಲಿ ಪರ್ಸನಲ್ ಚಾಟ್‌ನ್ನು ಲಾಕ್ ಮಾಡುವ ಹೊಸ ಅಪ್ಡೇಟ್ ಬರುತ್ತಿದೆ.
ಸರ್ಕಾರಿ ನೌಕರರಿಗೆ 3 ತಿಂಗಳ ಬಾಕಿ ಡಿಎ ನೀಡುವುದಾಗಿ ಘೋಷಣೆ; ಈ ತಿಂಗಳೊಳಗೆ ಬರಲಿದೆ ಹಣ!
ಹೌದು, ತಂತ್ರಜ್ಞಾನ ಈಗಾಗಲೇ ನಮ್ಮ ಊಹೆಗೂ ಮೀರಿ ಬೆಳವಣಿಗೆ ಕಂಡಿದೆ. ಇದರಿಂದಾಗಿಯೇ ಇಂದು ನಾವೆಲ್ಲ ಕುಳಿತ ಸ್ಥಳದಿಂದಲೇ ದೂರದ ಅಲ್ಲೆಲ್ಲೋ ಇರುವ ಆತ್ಮೀಯರೊಂದಿಗೆ ವಿಡಿಯೋದ ಮೂಲಕ ಪರಸ್ಪರ ಒಬ್ಬರನ್ನು ಮತ್ತೊಬ್ಬರು ನೋಡುತ್ತ ಮಾತನಾಡುವಷ್ಟು ಮುಂದುವರೆದಿದ್ದೇವೆ.
ಇಂತಹ ಸಾಕಷ್ಟು ಹೊಸ ಹೊಸ ಅವಿಷ್ಕಾರಗಳು ತಂತ್ರಜ್ಞಾನ ಲೋಕದಲ್ಲಿ ಸಾಮಾನ್ಯ. ಇದೀಗ ಎಲ್ಲರ ಮೆಚ್ಚಿನ ಮೆಸೆಜಿಂಗ್ ಆಪ್ ವಾಟ್ಸಪ್‌ನಲ್ಲಿ ಹೊಸ ಅಪ್ಡೇಟ್ ಒಂದನ್ನು ಮಾಡಲಾಗುತ್ತಿದೆ.
ಇದಿರಿಂದ ಇನ್ಮುಂದೆ ನೀವು ನಿಮ್ಮ ತೀರ ಆತ್ಮೀಯರೊಂದಿಗಿನ ಮಾತುಕತೆಗಳನ್ನು ಲಾಕ್ ಮಾಡಿಟ್ಟುಕೊಳ್ಳಬಹುದು. ಈ ಮೂಲಕ ನಿಮ್ಮ ಪ್ರೈವೆಸಿಯನ್ನು ಕಾಯ್ದುಕೊಳ್ಳಬಹುದು.
ಬೇಸಿಗೆಯಲ್ಲಿ ಜಾನುವಾರುಗಳ ನಿರ್ವಹಣಾ ಕ್ರಮ.. ಇದರಿಂದ ರೈತರಿಗಿದೆ ಲಾಭ!
ಜನರ ನಡುವೆ ಇದ್ದಾಗ ಕೆಲವೊಂದು ಬಾರಿ ನಿಮ್ಮ ವ್ಯಯಕ್ತಿಕ ಮೊಬೈಲ್ ಬೇರೆ ಯಾರದೋ ಕೈಗೆ ಕೊಡಲು ಹಿಂಜರಿಯುವುದು ಮಾಡಿರುತ್ತೀರಿ. ಕಾರಣ ನಮ್ಮ ಮೆಸೆಜ್‌ಗಳು.
ತೀರ ಖಾಸಗಿ ಮಾತುಕತೆಗಳನ್ನು ಯಾರಾದರೂ ಓದಿದರೇ! ಎನ್ನುವ ಭಯದಿಂದ ಮೊಬೈಲ್ ಯಾರ ಕೈಗೂ ಕೊಡುವುದೆ ಇಲ್ಲ. ಇಂತಹ ಸಮಸ್ಯೆಯನ್ನ ದೂರ ಮಾಡಲು ವಾಟ್ಸಪ್ ಹೊಸ ಅಪ್ಡೇಟ್‌ನ್ನು ಮಾಡುತ್ತಿದೆ.
ಪರ್ಸನಲ್ ಚಾಟ್‌ನ್ನು ಲಾಕ್ ಮಾಡುವ ಆಯ್ಕೆ!
ವಾಟ್ಸಾಪ್ ಇತ್ತೀಚೆಗೆ ಹೊಸ ಹೊಸ ಫೀಚರ್ಸ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಸುದ್ದಿಯಲ್ಲಿದೆ. ಹೊಸ ಫೀಚರ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ, ಬಳಕೆದಾರರ ಗೌಪ್ಯತೆ ಹಾಗೂ ಬಳಕೆಯ ವಿಧಾನವನ್ನು ಸುಧಾರಿಸುವುದರತ್ತ ಗಮನಹರಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಗುಲ್ಲೆಬ್ಬಿಸಿದ ಹೊಸ ನಮೂನೆಯ ʼಕಡ್ಡಿ ಇಡ್ಲಿʼ ! ಫಿದಾ ಆದ ನೆಟ್ಟಿಗರು..
ವಾಟ್ಸಾಪ್ ಹೊಸ ಟೂಲ್ಸ್ ಹಾಗೂ ಅಪ್ಡೇಟ್‌ಗಳನ್ನು ಆಗಾಗ ಬಿಡುಗಡೆ ಮಾಡುತ್ತಿದೆ. ಇದೀಗ ವಾಟ್ಸಾಪ್ ಬಳಕೆದಾರರು ತಮ್ಮ ಖಾಸಗಿ ಚಾಟ್‌ಗಳನ್ನು ಆ್ಯಪ್‌ನಲ್ಲಿಯೇ ಲಾಕ್ ಮಾಡುವ ಫೀಚರ್‌ನೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ಪಾಸ್‌ಕೋಡ್, ಫಿಂಗರ್‌ಪ್ರಿಂಟ್ ಅನಿವಾರ್ಯ
ನಿಮ್ಮ ವಾಟ್ಸಪ್ ಪರ್ಸನಲ್ ಚಾಟ್ ಓಪನ್ ಮಾಡಲು ಪಾಸ್‌ಕೋಡ್, ಫಿಂಗರ್‌ಪ್ರಿಂಟ್ ಅನಿವಾರ್ಯವಾಗಿದೆ. ಯಾರಾದರೂ ನಿಮ್ಮ ಲಾಕ್ ಮಾಡಿದ ಚಾಟ್‌ಗಳನ್ನು ತೆರೆಯಲು ಪ್ರಯತ್ನಿಸಿದರೆ ಇದು ಅವರಿಗೆ ಸಾಧ್ಯವಾಗುವುದಿಲ್ಲ.
ಈ ಚಾಟ್‌ಗಳನ್ನು ಓಪನ್ ಮಾಡುವುದಕ್ಕೆ ನೀವು ಸೆಟ್ ಮಾಡಿಟ್ಟ ಪಾಸ್‌ಕೋಡ್ ಅಥವಾ ಫಿಂಗರ್‌ಪ್ರಿಂಟ್ ಅನ್ನು ನಮೂದಿಸಲೇಬೇಕು.
ಇನ್ನೂ ಪರೀಕ್ಷಾ ವಿಧಾನದಲ್ಲಿರುವ ಅಪ್ಡೇಟ್:
ವಾಟ್ಸಾಪ್ ಚಾಟ್‌ಗಳಿಗಾಗಿ ಲಾಕ್ ಚಾಟ್ ವೈಶಿಷ್ಟ್ಯವನ್ನು ಪ್ರಸ್ತುತ ಆ್ಯಂಡ್ರಾಯ್ಡ್ ಬೀಟಾಗಾಗಿ ಪರೀಕ್ಷಿಸಲಾಗುತ್ತಿದೆ. ಒಮ್ಮೆ ಈ ವೈಶಿಷ್ಟ್ಯವು ಸಾರ್ವಜನಿಕರಿಗೆ ನಿಧಾನವಾಗಿ ಹೊರತರಲು ಪ್ರಾರಂಭಿಸಿದ ನಂತರ, ಇದನ್ನು ಐಒಎಸ್ ಬಳಕೆದಾರರಿಗೆ ಸಹ ಪ್ರಾರಂಭಿಸಲಾಗುತ್ತದೆ ಎನ್ನಲಾಗುತ್ತಿದೆ.