News

karnataka Election 2023: ಕರ್ನಾಟಕ ಚುನಾವಣೆಯ ಪ್ರಚಾರ ವಿಷಯವೇನು?

17 April, 2023 2:42 PM IST By: Hitesh
What is the campaign theme for Karnataka elections?

ಕರ್ನಾಟಕದ ಚುನಾವಣೆ ಈ ಬಾರಿ ಹಲವು ಕಾರಣಗಳಿಗೆ ಪ್ರಮುಖ್ಯತೆ ಪಡೆದುಕೊಂಡಿದೆ. ಪ್ರತಿ ಬಾರಿ ಚುನಾವಣೆ ನಡೆದಾಗಲೂ ಹಲವು ವಿಷಯಗಳು ಚರ್ಚೆಯ ಮುನ್ನೆಗೆ ಬರುತ್ತವೆ. ಈ ಬಾರಿ ಏನಿದೆ ?

ಈ ಬಾರಿಯ ಚುನಾವಣಾ ವಿಷಯು  ಅಭಿವೃದ್ಧಿಯ ಪರವಾದ ಅಂಶಗಳನ್ನು ಒಳಗೊಂಡಿದ್ದರೂ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ವಿಷಯಗಳು ಚರ್ಚೆ ಆಗುತ್ತಿಲ್ಲ.

ಕಾಂಗ್ರೆಸ್‌ ಚುನಾವಣೆ ವಿಷಯ

ಕಾಂಗ್ರೆಸ್‌ ಈ ಬಾರಿಯ ಚುನಾವಣೆಗೆ ಬಿಜೆಪಿಯ ಆಡಳಿತ ವಿರೋಧಿ ಅಲೆಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದು,

ಶೇ 40 ಪರ್ಸೆಂಟ್‌ ಕಮಿಷನ್‌ ಎನ್ನುವುದನ್ನು ಪ್ರಚಾರದ ಅಸ್ತ್ರವಾಗಿ ಬಳಸಿಕೊಂಡಿದೆ.  

ಬಿಜೆಪಿ ಕಿತ್ತಾಕಿ ಅಭಿವೃದ್ಧಿಪರ ಕಾಂಗ್ರೆಸ್‌ಗೆ ಮತವಾಕಿ ಎಂದು ಪ್ರಚಾರ ಮಾಡುತ್ತಿದೆ.

ಇದರ ನಡುವೆ ಪಿಎಸ್‌ಐ ಹಗರಣ, ಕೋವಿಡ್‌ ನಿರ್ವಹಣೆ ಲೋಪ, ಭ್ರಷ್ಟಾಚಾರ ಹಾಗೂ ಕೋಮುಸೌಹಾರ್ದತೆ

ಕಾಪಾಡದೆ ಇರುವುದು ಸೇರಿದಂತೆ ಹಲವು ಅಂಶಗಳನ್ನು ಪ್ರಚಾರ ಮಾಡುತ್ತಿದೆ. 

karnataka Election ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಕಾಂಗ್ರೆಸ್‌ಗೆ: ರಾಜಕೀಯ ಲೆಕ್ಕಾಚಾರವೇನು?

ಜಾತಿ ರಾಜಕೀಯ: ಈ ಬಾರಿಯೂ ಕರ್ನಾಟಕದಲ್ಲಿ ಜಾತಿ ರಾಜಕೀಯ ಹೆಚ್ಚು ಚರ್ಚೆಯ ಕಾವು ಪಡೆದುಕೊಂಡಿದೆ.

ಬಿಜೆಪಿಯು ಲಿಂಗಾಯತ ಸಮುದಾಯದ ಹಲವು ಪ್ರಮುಖ ಹಾಗೂ ಹಿರಿಯ ನಾಯಕರಿಗೆ ಟಿಕೆಟ್‌ ನೀಡದೆ ಇರುವುದು ಖುದ್ದು ಬಿಜೆಪಿಗರಲ್ಲೇ ಅಚ್ಚರಿಯನ್ನು ಮೂಡಿಸಿದೆ.

ಈಗಾಗಲೇ ಲಿಂಗಾಯತ ಸಮುದಾಯದ ಲಕ್ಷ್ಮಣ ಸವದಿ ಹಾಗೂ ಜಗದೀಶ ಶೆಟ್ಟರ್‌ ಅವರು ಕಾಂಗ್ರೆಸ್‌ ಸೇರ್ಪಡೆ ಆಗಿದ್ದಾರೆ.

ಅಲ್ಲದೇ ಬಿಜೆಪಿಯ ಹಿರಿಯ ನಾಯಕರಾದ ಯಡಿಯೂರಪ್ಪ ಅವರನ್ನು ಗೌರವದಿಂದ ನಡೆಸಿಕೊಂಡಿಲ್ಲ ಎನ್ನುವ ಆರೋಪವೂ ಬಿಜೆಪಿಯ ಮೇಲಿದ್ದು,

ಕಾಂಗ್ರೆಸ್‌ ಇದನ್ನೇ ಪ್ರಚಾರ ಮಾಡುತ್ತಿದೆ. ಇದು ಸಹ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

Karnataka Election 2023 ಕರ್ನಾಟಕ ಚುನಾವಣೆ: ಪ್ರಚಾರಕ್ಕೆ ತೆಲಂಗಾಣದಿಂದ ಬರ್ತಿದ್ದಾರೆ ಐವರು ನಾಯಕರು!

ಬಿಜೆಪಿ ಚುನಾವಣೆ ವಿಷಯ

ಬಿಜೆಪಿಯೇ ಭರವಸೆ ಎನ್ನುವ ಅಂಶವನ್ನು ಘೋಷಾವಾಕ್ಯವಾಗಿ ಇರಿಸಿಕೊಂಡಿರುವ ಬಿಜೆಪಿ ಚುನಾವಣೆಯಲ್ಲಿ ಮೋದಿ ಅವರನ್ನೇ ನೆಚ್ಚಿಕೊಂಡಿದೆ.

ಆಡಳಿತದಲ್ಲಿ ಸಾಧನೆ ಅಥವಾ ಜನಪರ ಯೋಜನೆಗಳನ್ನು ಇರಿಸಿಕೊಂಡು ಬಿಜೆಪಿ ಪ್ರಚಾರ ಮಾಡುತ್ತಿರುವುದು ಅಲ್ಲಲ್ಲಿ ಅಷ್ಟೇ ಕಾಣಿಸುತ್ತಿದೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಜ್ಯಕ್ಕೆ ಭವಿಷ್ಯವಿಲ್ಲ ಎಂದು ಬಿಂಬಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಇದೇ ಮಾದರಿಯಲ್ಲಿ ಪ್ರಚಾರವನ್ನು ಮಾಡುತ್ತಿದೆ.

What is the campaign theme for Karnataka elections?

ನಂದಿನಿಯೂ ಈ ಬಾರಿಯ ಚುನಾವಣೆ ವಿಷಯ!

ಅಮೂಲ್‌ ಹಾಗೂ ನಂದಿನಿಯೂ ಈ ಬಾರಿಯ ಚುನಾವಣೆಯ ವಿಷಯವಾಗಿದೆ. ಗೃಹ ಸಚಿವ ಅಮಿತ್‌ ಶಾ ಅವರು ನಂದಿನಿ

ಹಾಗೂ ಅಮೂಲ್‌ ಒಂದಾಗಿ ಸಾಗಬೇಕು ಎನ್ನುವುದನ್ನು ಕೆಲವು ದಿನಗಳ ಹೇಳಿದ ನಂತರದಲ್ಲಿ ರಾಜ್ಯದಲ್ಲಿ ಇದು ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದೆ.

ಕೋಲಾರಕ್ಕೆ ಬಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ನಂದಿನ ಉತ್ಪನ್ನಗಳನ್ನು ಸೇವಿಸಿ ನಂದಿನಿ ಈಸ್‌ ಬೆಸ್ಟ್‌,

ನಂದಿನಿ ಕರ್ನಾಟಕದ ಹೆಮ್ಮೆ ಎಂದಿದ್ದಾರೆ. ಇದಕ್ಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕೇರಳದಲ್ಲೂ

ನಂದಿನಿ ಮಾರಟಕ್ಕೆ ಅವಕಾಶ ಕಲ್ಪಿಸಿ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಇದೆಲ್ಲದರ ಹೊರತಾಗಿ

ಈ ಬಾರಿ ಬೆಲೆ ಏರಿಕೆಯೂ ಚುನಾವಣೆಯ ಪ್ರಮುಖ ವಿಷಯವಾಗಿದೆ.