News

Weather Report: ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಂಭವ - ಹವಾಮಾನ ಇಲಾಖೆ

05 April, 2023 10:53 AM IST By: Maltesh

ರಾಜ್ಯದ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿವೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆದಿದೆ.

ಕೊಳ್ಳೇಗಾಲದಲ್ಲಿ ೯ ಸೆಂಟಿ ಮೀಟರ್‌ನಷ್ಟು ಮಳೆಯಾಗಿದೆ. ಉಳಿದಂತೆ ಟಿ-ನರಸೀಪುರ ೨, ಚಾಮರಾಜನಗರ ಮತ್ತು ಬಂಡಿಪುರದಲ್ಲಿ ತಲಾ ೧ ಸೆಂಟಿ ಮೀಟರ್ ಮಳೆಯಾಗಿದೆ. ಕಲಬುರಗಿಯಲ್ಲಿ ಗರಿಷ್ಠ ೩೯.೨ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು.

ಸರ್ಕಾರಿ ನೌಕರರಿಗೆ 3 ತಿಂಗಳ ಬಾಕಿ ಡಿಎ ನೀಡುವುದಾಗಿ ಘೋಷಣೆ; ಈ ತಿಂಗಳೊಳಗೆ ಬರಲಿದೆ ಹಣ!

ಮುನ್ಸೂಚನೆಯಂತೆ ಮುಂದಿನ ೨೪ ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು ಮತ್ತು ಹಾಸನ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಂಭವ.

ಸಿಕ್ಕಿಂನಲ್ಲಿ ತಡರಾತ್ರಿ ಮತ್ತೊಂದು ಹಿಮಪಾತ

ಕರಾವಳಿ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ ಸಾಧ್ಯತೆ. ಬೆಂಗಳೂರು ಸುತ್ತಮುತ್ತ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಸಂಜೆ ಅಥವಾ ರಾತ್ರಿ ವೇಳೆಗೆ ಕಡೆ ಹಗುರವಾಗಿ ಮಳೆಯಾಗುವ ಸಾಧ್ಯತೆ ಸಂಭವ. ಗರಿಷ್ಠ ೩೨, ಕನಿಷ್ಠ ೨೨ ಡಿಗ್ರಿ ಸೆಲ್ಸಿಯಸ್ ತಾಪಮಾನ ನಿರೀಕ್ಷಿತ.

ಸಿಕ್ಕಿಂನಲ್ಲಿ, ಗ್ಯಾಂಗ್ಟಾಕ್-ನಾಟು ಲಾ ಜವಾಹರಲಾಲ್ ನೆಹರು ರಸ್ತೆಯ ೧೪ನೇ  ಮೈಲಿನಲ್ಲಿ ನಿನ್ನೆ ಸಂಜೆ ಮತ್ತೊಂದು ಹಿಮಪಾತವಾದ ವರದಿಯಾಗಿದೆ ಎಂದು ರಕ್ಷಣಾ ವಕ್ತಾರರು ಮಾಹಿತಿ ನೀಡಿದ್ದಾರೆ. ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಹಿಮವನ್ನು ತೆರವುಗೊಳಿಸುವವರೆಗೆ ಜವಾಹರಲಾಲ್ ನೆಹರು ರಸ್ತೆಯನ್ನು ಮುಚ್ಚಲಾಗಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ. ನಿನ್ನೆ ಮುಂಜಾನೆ ಪೂರ್ವ ಸಿಕ್ಕಿಂನ ಜನಪ್ರಿಯ ಪ್ರವಾಸಿ ತಾಣಗಳಾದ ಚಾಂಗು ಸರೋವರ ಮತ್ತು ನಾತು ಲಾವನ್ನು ಸಂಪರ್ಕಿಸುವ ರಸ್ತೆಯಲ್ಲಿ ಹಿಮಕುಸಿತದಿಂದ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದರು. 

SSLC ವಿದ್ಯಾರ್ಥಿಗಳಿಗೆ ಮತ್ತೆ ಸಿಹಿಸುದ್ದಿ: ಈ ವರ್ಷವೂ ಗ್ರೇಸ್ ಮಾರ್ಕ್ಸ್‌ ನೀಡಲು ತೀರ್ಮಾನ

ಭಾರತೀಯ ಸೇನೆ ಮತ್ತು ರಾಜ್ಯ ವಿಪತ್ತು ನಿರ್ವಹಣೆ ಮತ್ತು ಪೊಲೀಸ್ ತಂಡಗಳು ರಸ್ತೆಯಿಂದ ಹಿಮವನ್ನು ತೆರವುಗೊಳಿಸಿದ ನಂತರ ಹಿಮಪಾತವಾದ ಸ್ಥಳದಲ್ಲಿ ಸಿಕ್ಕಿಹಾಕಿಕೊಂಡಿದ್ದ ೩೫೦ ಪ್ರವಾಸಿಗರು ಮತ್ತು ೮೦ ವಾಹನಗಳನ್ನು ರಕ್ಷಿಸಿದರು. ಸಿಕ್ಕಿಂ ಮುಖ್ಯಮಂತ್ರಿ ಸಿಎಂ ಪಿ.ಎಸ್. ತಮಾಂಗ್  ಗ್ಯಾಂಗ್‌ಟಾಕ್ ಬಳಿಯ ಎಸ್‌ಟಿಎನ್‌ಎಂ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.