News

ಈ ಜಿಲ್ಲೆಯಲ್ಲಿ ಗ್ರಾಮಲೆಕ್ಕಿಗರ ನೇರ ನೇಮಕಾತಿ.. ಇಂದೇ ಅರ್ಜಿ ಸಲ್ಲಿಸಿ

29 April, 2022 11:56 AM IST By: Maltesh
Villege Accountant recruitment 2022

ಬೀದರ ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳ ಪೈಕಿ ಸ್ಥಳಿಯ (HK) ವೃಂದದಲ್ಲಿ - (46) ಹುದ್ದೆಗಳು ಮತ್ತು ಸ್ಥಳಿಯೇತರ (Non-HK) ವೃಂದದಲ್ಲಿ - (11) ಹುದ್ದೆಗಳು ಒಟ್ಟು (57) ಹುದ್ದೆಗಳನ್ನು 2021-22 ನೇ ಸಾಲಿನಲ್ಲಿ ಪರಿಷ್ಕೃತ ನಿಯಮಗಳಂತೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು, ವರ್ಗಿಕರಣ ಮತ್ತು ಮೀಸಲಾತಿ ಅನ್ವಯ ಕರ್ನಾಟಕ ನಾಗರೀಕ ಸೇವೆಗಳು ನಿಯಮ 2 ರ ಮತ್ತು 2009 ರ ಅನ್ವಯ ಹಾಗೂ ಹೈದ್ರಾಬಾದ-ಕರ್ನಾಟಕ ನೇಮಕಾತಿಯಲ್ಲಿ ಮೀಸಲಾತಿ ಆದೇಶ 2013 ರಲ್ಲಿ ನಿರ್ದೇಶಿಸಿದಂತೆ 371(ಜೆ) ರಡಿ ಸ್ಥಳೀಯ ವೃಂದದಲ್ಲಿ ನೇಮಕಾತಿಯನ್ನು ಮಾಡಲು ಪ್ರಾಧಿಕಾರವು ನಿಗಧಿಪಡಿಸಿರುವ ನಮೂನೆಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ ಲೈನ್ ಮೂಲಕ ಅಹ್ವಾನಿಸಲಾಗಿದೆ.

ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆ ಅಮೂಲ್‌ನಲ್ಲಿ ಭಾರೀ ನೇಮಕಾತಿ..ಪದವಿ ಹೊಂದಿದವರಿಗೆ ಭರ್ಜರಿ ಅವಕಾಶ

ಗ್ರಾಮಲೆಕ್ಕಿಗರ ಹುದ್ದೆಗೆ ನೇಮಕಾತಿ: 42,000 ಸಂಬಳ !

ಅರ್ಜಿಯನ್ನು ಸಲ್ಲಿಸುವ ವಿಧಾನ

ಅರ್ಜಿಯನ್ನು ಆನಲೈನ್ (Online) ಅಂತರ್ಜಾಲ (Internet) ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು, ಅರ್ಜಿಯನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಯ, ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅರ್ಜಿ ಶುಲ್ಕ

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1/ ಮಹಿಳೆ -100

ಸಾಮಾನ್ಯ/ಪ್ರವರ್ಗ - 2ಎ/2ಬಿ/3ಎ/3ಬಿ - 200,

ಆನ್-ಲೈನ್ (Online) ಮುಖಾಂತರ ಅರ್ಜಿ ಸಲ್ಲಿಸುವ ವಿಧಾನ

 ಅಭ್ಯರ್ಥಿಯು ಬೀದರ ಜಿಲ್ಲಾ ಕಂದಾಯ ಘಟಕದ ಅಧಿಕೃತ ವೆಬ್-ಸೈಟ್ (website) http://bidar-va.kar.nic.in ತೆರೆದು ಕಂಪ್ಯೂಟರ್ ಪರದೆಯ ಮೇಲೆ ಅರ್ಜಿಯನ್ನು ತುಂಬಬೇಕು ಹಾಗೂ ಇತ್ತೀಚಿನ ಭಾವ ಚಿತ್ರ ಸ್ಕ್ಯಾನ್ ಮಾಡಿ ಅಪಲೋಡ್ ಮಾಡಬೇಕು ನಂತರ ಅಭ್ಯರ್ಥಿಯು Submit Button ಅನ್ನು ಒತ್ತಿದರೆ ಅರ್ಜಿ ಸಂಖ್ಯೆ (Reference Number) ನೊಂದಿಗೆ (Acknowledgement slip) ಹಾಗೂ ದ್ವಿಪ್ರತಿ ಚಲನ್ ಕಂಪ್ಯೂಟರ್ ಪರದೆ ಮೇಲೆ ಸೃಷ್ಟಿಯಾಗುತ್ತದೆ.

ಕೇಂದ್ರದಿಂದ ಪ್ರತಿ ತಿಂಗಳು ರೈತರಿಗೆ 3000 ರೂ. ಪಿಂಚಣಿ! ಪಿಎಂ ಕಿಸಾನ್ ಮನ್‌ಧನ್‌ ಯೋಜನೆಯಲ್ಲಿದೆ ರೈತರಿಗೆ ಸಹಾಯ

ಮೀನುಗಾರರ ಆದಾಯ ಹೆಚ್ಚಿಸಲು Pm ಮತ್ಸ್ಯ ಸಂಪದ ಯೋಜನೆ! ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯಿರಿ!

ಅರ್ಜಿ ಶುಲ್ಕವನ್ನು ದಿನಾಂಕ: 11.04.2022 ರಿಂದ 16.05.2022 ರವರೆಗೆ ರಾತ್ರಿ 11-59 ವರೆಗೆ ಮಾತ್ರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (DC Office Road) ಬ್ಯಾಂಕನ ಖಾತೆ ಸಂಖ್ಯೆ: 37788624995 ಗೆ ಚಲನ್ ಮುಖಾಂತರ ಅಥವಾ ಅನಲೈನ ಮುಖಾಂತರ (Online Payment) ಕೈಪಿಡಿಯಲ್ಲಿ ತೋರಿಸಿದ ಹಾಗೆ ಶುಲ್ಕವನ್ನು ಪಾವತಿಸುವುದು.

ಶೈಕ್ಷಣಿಕ ವಿದ್ಯಾರ್ಹತೆ

ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ನಡೆಸುವ ದ್ವಿತೀಯ ಪಿ.ಯು.ಸಿ. (Pre-university Course) ಅಥವಾ ಸಿ.ಬಿ.ಎಸ್.ಇ. (Central Board Of Secondary education) New Delhi/ ಐ.ಸಿ.ಎಸ್.ಇ (Indian Certificate of Secondary education) New Delhi ನಡೆಸುವ 12 ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ಗ್ರಾಮಲೆಕ್ಕಿಗರ ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕ 11.04.2022 ಕ್ಕೆ ಮುಂಚಿತವಾಗಿ ತೇರ್ಗಡೆ ಹೊಂದಿ ಮೂಲ ಅಂಕಪಟ್ಟಿಯನ್ನು ಪಡೆದುಕೊಂಡಿರತಕ್ಕದ್ದ.  ಇತರೆ ಯಾವುದೇ ತತ್ಸಮಾನ  ವಿದ್ಯಾರ್ಹತೆ ಅಥವಾ ತತ್ಸಮಾನ ಅಲ್ಲದೆ ಯಾವುದೇ ವಿದ್ಯಾರ್ಹತೆ ಪರಿಗಣಿಸುವುದಿಲ್ಲವೆಂದು ಸ್ಪಷ್ಟಪಡಿಸಲಾಗಿದೆ. ಆದಾಗ್ಯೂ ಕೂಡ ಅರ್ಜಿ ಸಲ್ಲಿಸಿದಲ್ಲಿ ಅಂತಹ ಅರ್ಜಿಗಳನ್ನು ಮುನ್ಸೂಚನೆಯನ್ನು ನೀಡದೆ ತಿರಸ್ಕರಿಸಲಾಗುವುದು.

TCS ನೇಮಕಾತಿ.. ಪದವಿ ಹೊಂದಿದ Freshersಗೆ ಇಲ್ಲಿದೆ ಸುವರ್ಣಾವಕಾಶ

NDDB ನೇಮಕಾತಿ: ಮಾ. 1,82,200 ಸಂಬಳ!

ಗಣಕಯಂತ್ರ ವಿದ್ಯಾರ್ಹತೆ ಹೊಂದಿದ್ದು, Computer Fundamentals MS Windows, MS words, MS Excel, MS Access, Power Point & Internet ಬಗ್ಗೆ ಜ್ಞಾನ ಹೊಂದಿರುವ ಬಗ್ಗೆ ಸರ್ಕಾರದ ಪ್ರಮಾಣ ಪತ್ರವನ್ನು ಪಡೆದಿರತಕ್ಕದ್ದು.

ವೇತನ ಶ್ರೇಣಿ  : 21,000 – 41,200

ಆಯ್ಕೆ ಪ್ರಕ್ರಿಯೆ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು  ಪಿಯುಸಿ (PUC) ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.