News

BJP ಫಸ್ಟ್‌ ಲಿಸ್ಟ್‌ ರಿಲೀಸ್‌ ಡೇಟ್‌ ಹೇಳಿದ ಸಚಿವ ಪ್ರಲ್ಹಾದ್‌ ಜೋಶಿ

31 March, 2023 4:45 PM IST By: Maltesh
BJP

ಕುಂದಾನಗರಿ ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಕಲ್ಲಿದ್ದಲು ಮತ್ತು ರಾಸಾಯನಿಕ ಖಾತೆ ಸಚಿವ ಪ್ರಲ್ಹಾದ್‌ ಜೋಶಿ ಅವರು, ಏಪ್ರೀಲ್‌ ಆರು ಅಥವಾ ಏಳನೇ ತಾರೀಖಿನಂದು ಲಿಸ್ಟ್‌ ರಿಲೀಸ್‌ , ಮಾಡಲಿದ್ದೇವೆ. ಆ ಕುರಿತು ತಯಾರಿಗಳು ಈಗಾಗಲೇ ನಡೆದಿವೆ ಎಂದು ಅವರು ತಿಳಿಸಿದರು.

ಏಕಾಏಕಿ 80 ಸಾವಿರ ರೇಷನ್‌ ಕಾರ್ಡ್‌ ಕ್ಯಾನ್ಸಲ್‌.. ಕಾರಣ ಏನು ಗೊತ್ತಾ..?

ಇನ್ನು ಮುಂದುವರೆದು ಮಾತನಾಡಿದ ಅವರು, ನಮ್ಮದು ಕೌಟುಂಬಿಕ ಪಾರ್ಟಿಯಲ್ಲ, ಸುಳ್ಳು ಭರವಸೆಗಳನ್ನು ನಾವು ನೀಡುವುದಿಲ್ಲ. ಸುಳ್ಳು ಭರವಸೆ ಸುಳ್ಳು ಗ್ಯಾರಂಟಿಗಳನ್ನು ಕೊಡುವುದರಲ್ಲಿ ಕಾಂಗ್ರೆಸ್‌ ಪರಿಣಿತವಾದ ಪಕ್ಷವಾಗಿದೆ ಎಂದು ಅವರು ಈ ವೇಳೆ ವಾಗ್ಧಾಳಿ ನಡೆಸಿದರು.

ಮೇ 10ಕ್ಕೆ ಚುನಾವಣೆ

ಮೇ 10ಕ್ಕೆ ಚುನಾವಣೆ ನಡೆಯಲಿದ್ದು, ಮೇ 13ಕ್ಕೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.   ಕರ್ನಾಟಕ ಸಾರ್ವತ್ರಿಕ ಚುನಾವಣೆ – 2023ರ ದಿನಾಂಕ ಘೋಷಣೆ ಹಾಗೂ ರೂಪುರೇಷಗಳನ್ನು ತಿಳಿಸುವ ಉದ್ದೇಶದಿಂದ ಚುನಾವಣಾ ಆಯೋಗವು ಬುಧವಾರ ಪತ್ರಿಕಾಗೋಷ್ಠಿಯನ್ನು ಕರೆದಿತ್ತು. ಕೇಂದ್ರ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೇ.10ಕ್ಕೆ ಚುನಾವಣೆ ನಡೆಯಲಿದ್ದು, ಮೇ.13ಕ್ಕೆ ಫಲಿತಾಂಶ ಹೊರಬೀಳಲಿದೆ.

ಬಂಗಾರ ಪ್ರಿಯರೇ ಇಲ್ನೋಡಿ.. ನಾಳೆಯಿಂದ ಈ ರೀತಿಯ ಚಿನ್ನಾಭರಣ ಖರೀದಿಗೆ ಅವಕಾಶವಿಲ್ಲ!

ರಾಜ್ಯದಲ್ಲಿ 2,62,42,562 ಪುರುಷ ಮತದಾರರಿದ್ದು , 2,59,26,319 ಮಹಿಳಾ ಮತದಾರರಿದ್ದಾರೆ.  4699 ತೃತೀಯ ಲಿಂಗಿ ಮತದಾರರಿದ್ದು ,ಒಟ್ಟಾರೆ ರಾಜ್ಯದಲ್ಲಿ 5 ಕೋಟಿ 21 ಲಕ್ಷ ಮತದಾರರಿದ್ದಾರೆ.   ಈ ಬಾರಿ ಮನೆಯಿಂದಲೇ ಮತದಾನವನ್ನು ಮಾಡುವ ಅವಕಾಶವನ್ನು ನೀಡಲಾಗಿದ್ದು ಈ ಅವಕಾಶ ಕೇವಲ 80 ವರ್ಷ ಮೇಲ್ಪಟ್ಟ ಹಿರಿಯರಿಗೆ ಮಾತ್ರ ಅನ್ವಯವಾಗಲಿದೆ.

ಸರ್ಕಾರದಿಂದ ಬಹುದೊಡ್ಡ ಘೋಷಣೆ: Ration Card ಇದ್ದವರಿಗೆ ಇನ್ಮುಂದೆ 150 kg ಅಕ್ಕಿ ಫ್ರೀ!

ಇನ್ನು ರಾಜ್ಯದಲ್ಲಿ ಒಟ್ಟು 58,282 ಮತಗಟ್ಟೆಗಳಿದ್ದು ,ಗ್ರಾಮೀಣ ಪ್ರದೇಶದಲ್ಲಿ 34,219 ಹಾಗು ನಗರ ಪ್ರದೇಶದಲ್ಲಿ 24,063 ಮತಗಟ್ಟೆಗಳಿವೆ . ಮತದಾನದ ಜಾಗೃತಿಗಾಗಿ ಚುನಾವಣಾ ಆಯೋಗವು ಯೋಜನೆ ಜಾರಿಗೆ ತರಲಾಗುತ್ತಿದ್ದು ಜೊತೆಗೆ ಇಂದಿನಿಂದ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಹೇಳಿದರು. 2024ರ ಲೋಕಸಭಾ ಚುನಾವಣೆಗೆ ಮುನ್ನುಡಿ ಎಂದೇ ಪರಿಗಣಿಸಲಾಗಿರುವ ಕರ್ನಾಟಕ ಸಾರ್ವತ್ರಿಕ ಚುನಾವಣೆಯ ದಿನಾಂಕವನ್ನು ಬುಧವಾರ ಚುನಾವಣಾ ಆಯೋಗವು ಪ್ರಕಟಿಸಿದೆ.