ಟ್ವಿಟರ್ ಕಂಪನಿಯು ತನ್ನ ಎಲ್ಲ ಪ್ರಮುಖ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಿದ್ದು, ಇದು ತತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಉದ್ಯೋಗಿಗಳಿಗೆ ತಿಳಿಸಿದೆ.
ಇದನ್ನು ಓದಿರಿ: ಟ್ವಿಟರ್: ಇನ್ಮುಂದೆ ಬ್ಲೂಟಿಕ್‌ಗೂ ಕೊಡ್ಬೇಕಾ ದುಡ್ಡು ?
ಟ್ವಿಟರ್ ಕಚೇರಿಗಳನ್ನು ಇಂದಿನಿಂದಲೇ ಜಾರಿಗೆ ಬರುವಂತೆ ಮುಚ್ಚಲಾಗುತ್ತಿದ್ದು, ಕಚೇರಿಗಳು ಪುನಃ ನವೆಂಬರ್ 21ಕ್ಕೆ ಪುನರಾರಂಭವಾಗುವ ಸಾಧ್ಯತೆ ಇದೆ
ಎಂದು ಟ್ವಿಟರ್ ಸಿಬ್ಬಂದಿಗೆ ತಿಳಿಸಲಾಗಿದೆ. ಆದರೆ, ಯಾವ ಕಾರಣಕ್ಕೆ ಕಚೇರಿಗಳನ್ನು ಮುಚ್ಚಲಾಗುತ್ತಿದೆ ಎನ್ನುವುದಕ್ಕೆ ಟ್ವಿಟರ್ ಸಕಾರಣ ನೀಡಿಲ್ಲ.
ಟ್ವಿಟರ್‌ನ ನೂತನ ಮಾಲೀಕ ಎಲೊನ್ ಮಸ್ಕ್ ಅವರು ಹೆಚ್ಚು ಕಾರ್ಯಕ್ಷಮತೆಯೊಂದಿಗೆ ಹೆಚ್ಚು ಅವಧಿ ಕೆಲಸ ಮಾಡಿ ಇಲ್ಲವೇ
ಕೆಲಸಕ್ಕೆ ರಾಜೀನಾಮೆ ನೀಡಿ ಎಂದು ನಿರ್ದೇಶನ ನೀಡಿದ ಒಂದು ದಿನದ ನಂತರ, ಟ್ವಿಟರ್‌ನ ಸಾಲು ಸಾಲು ಉದ್ಯೋಗಿಗಳು ರಾಜೀನಾಮೆ ನೀಡಿದ್ದು, ಟ್ವಿಟರ್ ಕಾರ್ಯನಿರ್ವಹಣೆಗೆ ತೊಡಕುಂಟಾಗಿದೆ.
ಈಚೆಗೆ ಎಲಾನ್ ಮಸ್ಕ್ ಅವರು ಟ್ವಿಟರ್ ಸಿಬ್ಬಂದಿಗೆ ಸುದೀರ್ಘ ಅವಧಿಗೆ ಕಾರ್ಯಕ್ಷಮತೆಯೊಂದಿಗೆ ಕಾರ್ಯನಿರ್ವಹಿಸಬೇಕು. ಇಲ್ಲಿದ್ದಿದ್ದರೆ ಕಂಪನಿ ತೊರೆಯಬಹುದು ಎಂದು ಹೇಳಿದ್ದರು.
TWITTER ದೂರುವುದಿದ್ದರೆ ದೂರಿ; ತಿಂಗಳಿಗೆ ಎಂಟು ಡಾಲರ್ ಕೊಡಿ ಎಂದ ಎಲಾನ್ ಮಸ್ಕ್!
ಸಿಬ್ಬಂದಿಗೆ ಇಮೇಲ್‌ನಲ್ಲಿ, ಸಂಸ್ಥೆಯ ಹೊಸ ಮಾಲೀಕರು ಕಾರ್ಮಿಕರು ಉಳಿಯಲು ಬಯಸಿದರೆ ಪ್ರತಿಜ್ಞೆಗೆ ಒಪ್ಪಿಕೊಳ್ಳಬೇಕು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ನವೆಂಬರ್ 17ರ ಗುರುವಾರದೊಳಗೆ ನೂತನ ಒಪ್ಪಂದಕ್ಕೆ ಸಹಿ ಹಾಕದವರಿಗೆ ಮೂರು ತಿಂಗಳ ಕಾಲ ವೇತನದಲ್ಲಿ ನಿರ್ದಿಷ್ಟ ಮೊತ್ತವನ್ನು ಕಡಿತ ಮಾಡುವುದಾಗಿ ಎಲಾನ್ ಮಸ್ಕ್ ಅವರು ನಿರ್ದೇಶನ ನೀಡಿದ್ದರು.
ಈ ತಿಂಗಳ ಆರಂಭದಲ್ಲಿ ಕಂಪನಿಯು ಸುಮಾರು ಶೇಕಡವಾರು 50 ಉದ್ಯೋಗಿಗಳನ್ನು ಕಡಿತಗೊಳಿಸುತ್ತಿದೆ ಎಂದು ಹೇಳಿದೆ.
ಮಸ್ಕ್ ಅವರ ಹೊಸ ನಿಯಮಗಳನ್ನು ಅಂಗೀಕರಿಸದ ಕಾರಣ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಈಗ ರಾಜೀನಾಮೆ ನೀಡಿದ್ದಾರೆ ಎಂದು ಹೇಳಾಗುತ್ತಿರುವ ನಡುವೆಯೇ ಟ್ವಿಟರ್ ತನ್ನ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಿರುವುದಾಗಿ ವರದಿ ಆಗಿದೆ.
ಚಂದ್ರಯಾನ-3 ಮಿಷನ್ ಶೀಘ್ರದಲ್ಲೇ ಕಕ್ಷೆಗೆ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್
ಉದ್ಯೋಗಿಗಳು ತಾವು ಸಂಸ್ಥೆಯನ್ನು ತೊರೆಯುತ್ತಿರುವುದನ್ನು ತೋರಿಸಲು #LoveWhereYouWorked ಎಂಬ ಹ್ಯಾಶ್‌ಟ್ಯಾಗ್ ಮತ್ತು ಸೆಲ್ಯೂಟಿಂಗ್ ಎಮೋಜಿಯನ್ನು ಬಳಸಿಕೊಂಡು ಟ್ವೀಟ್ ಮಾಡುತ್ತಿದ್ದಾರೆ.
ಕಂಪನಿಯಲ್ಲಿನ ಪ್ರಕ್ಷುಬ್ಧತೆಯ ಹೊರತಾಗಿಯೂ, ಮಸ್ಕ್ ಅವರು ಶುಕ್ರವಾರ ಟ್ವೀಟ್ ಮಾಡಿದ್ದಾರೆ ನಾವು ಟ್ವಿಟರ್ ಬಳಕೆಯಲ್ಲಿ ಮತ್ತೊಂದು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದೇವೆ ಎಂದಿದ್ದಾರೆ.
ಮಸ್ಕ್ ಅವರು ಟ್ವಿಟರ್ ಖರೀದಿಸುವ ಮುನ್ನ ಕಂಪನಿಯ ಅಂದಾಜು 7,500 ಸಿಬ್ಬಂದಿಯನ್ನು ಹೊಂದಿತ್ತು.
ಸಂಸ್ಥೆಯು ಸಾವಿರಾರು ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಂಡಿದೆ ಎಂದು ವರದಿಯಾಗಿದೆ. ಅವರಲ್ಲಿ ಹೆಚ್ಚಿನವರನ್ನು ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ದೀರ್ಘಾವಧಿ ಕೆಲಸ ಮಾಡಲು ತಯಾರಿ ನಡೆಸಿದ್ದರೂ ರಾಜೀನಾಮೆ ನೀಡಿದ್ದೇವೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಟ್ವಿಟರ್‌ನ ಕಚೇರಿಗಳನ್ನು ಮುಚ್ಚಲಾಗಿದೆ ಎಂಬ ಸಂದೇಶವನ್ನು ಕಳುಹಿಸಿದ ನಂತರ ಟ್ವಿಟರ್ ಮುಚ್ಚುವ ಅಂಚಿನಲ್ಲಿದೆ ಎಂಬ ಕಳವಳದ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಮಸ್ಕ್ ಟ್ವೀಟ್ ಮಾಡಿದ್ದಾರೆ.
“ಅತ್ಯುತ್ತಮ ಜನರು ಉಳಿದುಕೊಂಡಿದ್ದಾರೆ, ಹಾಗಾಗಿ ನಾನು ಹೆಚ್ಚು ಚಿಂತಿಸುವುದಿಲ್ಲ” ಎಂದಿದ್ದಾರೆ.