ಮೂರನೇ ಮಗುವಿಗೆ ಜನ್ಮ ನೀಡುವ ಉದ್ಯೋಗಿಗಳಿಗೆ ಈ ಕಂಪನಿ ನೀಡುತ್ತಿದೆ 11 ಲಕ್ಷ ರೂಪಾಯಿ ಬೋನಸ್ ಮತ್ತು ಸುದೀರ್ಘ ಒಂದು ವರ್ಷದ ರಜೆ. ಈ ಕುತೂಹಲಕಾರಿ ವಿಷಯವನ್ನು ಸಂಪೂರ್ಣವಾಗಿ ತಿಳಿಯಲು ಪೂರ್ತಿ ಲೇಖನ ಓದಿ ಮತ್ತು ಇದರ ಬಗ್ಗೆ ತಿಳಿಯಿರಿ.
ಇದನ್ನೂ ಓದಿರಿ: ರೈತರಿಗೆ ಸಿಹಿ ಸುದ್ದಿ: ಮಾರುಕಟ್ಟೆಯಲ್ಲಿ ಗೋಧಿಗೆ ಬಂಪರ್ ಬೆಲೆ: ರೈತರ ಮುಖದಲ್ಲಿ ನಗೆ!
Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…
ಹೌದು! ನೀವೆಲ್ಲ ಇದನ್ನೂ ನಂಬಲೆಬೇಕು. ಈ ಕಂಪನಿಯಲ್ಲಿನ ಉದ್ಯೋಗಿಗಳು ತಾವು ಮೂರನೇ ಮಗುವನ್ನು ಪಡೆಯುವ ಇಚ್ಛೆ ಹೊಂದಿದ್ದರೆ ಅವರಿಗಾಗಿ 11 ಲಕ್ಷ ರೂಪಾಯಿ ಬೋನಸ್ ಮತ್ತು ಸುದೀರ್ಘ ಒಂದು ವರ್ಷಗಳ ರಜೆಯನ್ನು ನೀಡುತ್ತದೆ.
ಚೈನಿಸ್ ಕಂಪನಿ ಆಫರ್ಸ್ ಕ್ಯಾಶ್ ಬೋನಸ್ (Chinese Company Offers Cash Bonus) ವರದಿಯ ಪ್ರಕಾರ ಬೀಜಿಂಗ್ ದಬೆನಾಂಗ್ ಟೆಕ್ನಾಲಜಿ ಗ್ರೂಪ್ ಮೂರನೇ ಮಗುವಿಗೆ ಜನ್ಮ ನೀಡಲು 90,000 ಯುವಾನ್ ನಗದು ಬೋನಸ್ ಅನ್ನು ನೀಡುತ್ತಿದೆ. ಅಂದರೆ ಇದು ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು 11.50 ಲಕ್ಷ ರೂಪಾಯಿವರೆಗೆ ಆಗುತ್ತದೆ.
ಸಾಧನೆ: 2022 ರಲ್ಲಿ 661.54 ಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆ!
ಚೀನಾ ತನ್ನ ಒಂದು ಮಗುವಿನ ನೀತಿಯನ್ನು 2016 ರಲ್ಲಿ ಅಧಿಕೃತವಾಗಿ ಕೊನೆಗೊಳಿಸಿದೆ. ದೇಶದ ಜನಸಂಖ್ಯೆಯನ್ನು ನಿಯಂತ್ರಿಸಲು ಈ ನೀತಿಯನ್ನು 1980 ರಲ್ಲಿ ಜಾರಿಗೆ ತರಲಾಗಿತ್ತು. ಈ ನಡುವೆ ಮೇ 2021 ರಲ್ಲಿ ಚೀನಾ ಮೂರು ಮಕ್ಕಳ ನೀತಿಯನ್ನು ಕೂಡ ಪರಿಚಯಿಸಿತ್ತು.
ಚೀನಾ ಸರ್ಕಾರವು ಹೆಚ್ಚು ಮಕ್ಕಳನ್ನು ಹೊಂದುವಂತೆ ತನ್ನ ಪ್ರಜೆಗಳನ್ನು ಪ್ರೋತ್ಸಾಹಿಸಿತ್ತು ಕೂಡ. ಇದಕ್ಕೆ ಸಂಬಂದಿಸಿದಂತೆ ಇತ್ತೀಚೆಗೆ ಚೀನಾದ ಕಂಪನಿಯೊಂದು ಮೂರನೇ ಮಗುವಿಗೆ ಜನ್ಮ ನೀಡುವ ಉದ್ಯೋಗಿಗಳಿಗೆ ಪ್ರೋತ್ಸಾಹ ಧನ ನೀಡುತ್ತಿರುವ ಕುರಿತು ವರದಿಯಾಗಿದೆ.
LPG ಸಿಲಿಂಡರ್‌ಗೆ ಹೆಚ್ಚಿನ ಬೆಲೆ ಕೇಳ್ತಿದ್ದಾರಾ..? ಹಾಗಾದ್ರೇ ಇಲ್ಲಿ ಕಂಪ್ಲೇಟ್ ಮಾಡಿ ಸಾಕು
3ನೇ ಮಗುವಿಗೆ ಜನ್ಮ ನೀಡಿದರೆ ಇಲ್ಲಿದೆ ಬೋನಸ್!
ವರದಿಗಳ ಪ್ರಕಾರ, ಬೀಜಿಂಗ್ ದಬೆನಾಂಗ್ ಟೆಕ್ನಾಲಜಿ ಗ್ರೂಪ್ ಮೂರನೇ ಮಗುವಿಗೆ ಜನ್ಮ ನೀಡಲು 90,000 ಯುವಾನ್ ನಗದು ಬೋನಸ್ ಅನ್ನು ನೀಡುತ್ತಿದೆ.
ಅಂದರೆ, ಸರಿಸುಮಾರು 11.50 ಲಕ್ಷ ರೂ. ವರದಿಯ ಪ್ರಕಾರ ನಗದು ಬೋನಸ್ ಹೊರತುಪಡಿಸಿ, ಕಂಪನಿಯು ಮಹಿಳಾ ಉದ್ಯೋಗಿಗಳಿಗೆ ಒಂದು ವರ್ಷ ಮತ್ತು ಪುರುಷ ಉದ್ಯೋಗಿಗಳಿಗೆ ಒಂಬತ್ತು ತಿಂಗಳು ರಜೆಯನ್ನು ಕೂಡಾ ನೀಡುತ್ತಿದೆ.
ಜರ್ಮನಿಯ ಪ್ರಮುಖ ಇಂಧನ ಕಂಪನಿಗಳೊಂದಿಗೆ ಕೇಂದ್ರ ವಿದ್ಯುತ್ ಸಚಿವರು ದುಂಡು ಮೇಜಿನ ಸಭೆ!