ಕಳೆದ ಕೆಲವು ದಿನಗಳಲ್ಲಿ ಭಾರೀ ಏರಿಕೆ ಕಂಡು ಚಿನ್ನ ಪ್ರಿಯರ ನಿದ್ದೆಗೆಡಿಸಿದ್ದ ಚಿನ್ನದ ದರ ವಾರಾಂತ್ಯದಲ್ಲಿ ಕುಸಿತ ಕಂಡಿದೆ.
ಚಿನ್ನ ಮತ್ತು ಬೆಳ್ಳಿಯ ವಿವರ ಹಾಗೂ ಗೂಗಲ್ ಪೇನ ಮೂಲಕ ಚಿನ್ನ ಖರೀದಿಸುವ ವಿವರ ಇಲ್ಲಿದೆ…
Post Office Insurance ಪೋಸ್ಟ್ ಆಫೀಸ್ ಇನ್ಶೂರೆನ್ಸ್; ಕಡಿಮೆ ಪ್ರೀಮಿಯಂನಲ್ಲಿ 10 ಲಕ್ಷದವರೆಗೆ ಲಾಭ!
ಕಳೆದ 15 ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಏರಿಳಿತ ಕಂಡು ಬಂದಿದ್ದು, ಖರೀದಿದಾರರು ಗೊಂದಲಕ್ಕೆ ಸಿಲುಕಿದ್ದರು.
ಇದೀಗ ಹತ್ತು ಗ್ರಾಂ ಚಿನ್ನದ ದರದಲ್ಲಿ ಬರೋಬ್ಬರಿ ಐನೂರು ರೂಪಾಯಿ ಕುಸಿತವಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆಯು ಅಪಾರವಾಗಿದೆ. ಸಾಕಷ್ಟು ದೇಶಗಳು ವಿದೇಶಿ ವಿನಿಮಯ ರೂಪದಲ್ಲಿ ಚಿನ್ನದ ಸಂಗ್ರಹ ಹೊಂದಿರುವುದು ವಿಶೇಷವಾಗಿದೆ.
ಕೆಲ ದಿನಗಳ ಹಿಂದಷ್ಟೇ 24 ಕ್ಯಾರಟ್ ಚಿನ್ನದ ಬೆಲೆಯು ಅರವತ್ತು ಸಾವಿರದ ಗಡಿ ದಾಟಿತ್ತು. ಈಗಲೂ ಅಪರಂಜಿ ಚಿನ್ನವು ಹೆಚ್ಚು ಕಡಿಮೆ ಅದೇ ಮೊತ್ತದ ಸುತ್ತ ತನ್ನ ದರವನ್ನು ಕಾಯ್ದುಕೊಳ್ಳುತ್ತಿದೆ.
ಭಾರತದ ಮಾರುಕಟ್ಟೆಗಳಲ್ಲಿ ಚಿನ್ನ ಖರೀದಿ ಸಾಮಾನ್ಯವಾಗಿದ್ದು, ಚಿನ್ನ ಖರೀದಿಗೆ ವಿಶೇಷತೆ ಇದೆ.
ಸಂಚಾರ ನಿಯಮ ಉಲ್ಲಂಘನೆ; ದಂಡ ರಿಯಾಯಿತಿ: ಅವಧಿ ವಿಸ್ತರಿಸಲು ಸಂಚಾರ ಪೊಲೀಸರಿಂದಲೇ ಮನವಿ!
ಬೆಂಗಳೂರಿನಲ್ಲಿ ಶನಿವಾರ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ 52,450 ರೂಪಾಯಿ ದಾಖಲಾಗಿದೆ. ದೇಶದ ಉಳಿದ ಮಹಾನಗರಗಳಾದ ಚೆನ್ನೈನಲ್ಲಿ ಚಿನ್ನದ ಬೆಲೆ (ಹತ್ತು ಗ್ರಾಂ) 53,200 ರೂಪಾಯಿ, ಮುಂಬೈನಲ್ಲಿನ ಬೆಲೆ 52,400 ರೂಪಾಯಿ. ಕೊಲ್ಕತ್ತದಲ್ಲಿ ಬೆಲೆ 52,400 ರೂಪಾಯಿ ಆಗಿದೆ.
ದೇಶದ ರಾಜಧಾನಿಯಾದ ದೆಹಲಿಯಲ್ಲಿನ ಚಿನ್ನದ 52,450 ರೂಪಾಯಿ ಮುಟ್ಟಿದೆ.
ಮಾರುಕಟ್ಟೆಯಲ್ಲಿ ಬಂಗಾರದ ದರಗಳನ್ನು ಗಮನಿಸುವುದಾದರೆ, ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ -5,245 ರೂ. ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - 5,721 ರೂ. ಆಗಿದೆ.
ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - 41,960 ರೂ. ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - 45,768 ರೂ. ಆಗಿದೆ.
ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - 52,450 ರೂ. ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - 57,210 ರೂ. ಆಗಿದೆ.
ನೂರು ಗ್ರಾಂ (100GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - 5,24,500 ರೂ. ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - 5,72,100 ರೂ. ಆಗಿದೆ.
ಬೆಳ್ಳಿಯ ದರದಲ್ಲೂ ಅಲ್ಪ ಪ್ರಮಾಣದ ಏರಿಳಿತ ಕಂಡುಬಂದಿದೆ. ಚಿನ್ನದಂತೆ ಸಾಮಾನ್ಯವಾಗಿ ಬೆಳ್ಳಿ ದರದಲ್ಲೂ ವ್ಯತ್ಯಾಸ ಆಗುತ್ತಲೇ ಇರುತ್ತದೆ. ಭಾರತದ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ಬೆಳ್ಳಿ ಬೆಲೆ 71,350 ರೂ. ಆಗಿದೆ.
ಇನ್ನು ತಿಂಗಳಿನ ಅವಧಿಯಲ್ಲಿ ಬೆಳ್ಳಿಯ ಗರಿಷ್ಠ ಹಾಗೂ ಕನಿಷ್ಠ ಬೆಲೆಯನ್ನು ಗಮನಿಸುವುದಾದರೆ, ಕಳೆದ ತಿಂಗಳಿನಲ್ಲಿ ಬೆಳ್ಳಿಯ ಗರಿಷ್ಠ ಬೆಲೆ ಜನವರಿ 16 ರಂದು ಪ್ರತಿ ಕೆಜಿಗೆ 72,900 ರೂ. ತಲುಪಿತ್ತು ಹಾಗೂ ಕನಿಷ್ಠ ಬೆಲೆ ಜನವರಿ 6 ರಂದು 71,000ಕ್ಕೆ ರೂ. ಕುಸಿದಿತ್ತು.
ಬೆಂಗಳೂರಿನಲ್ಲಿ ಶನಿವಾರ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 735, ರೂ. 7,350 ಹಾಗೂ ರೂ. 73,500 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 73,500 ಆಗಿದ್ದರೆ
ದೆಹಲಿಯಲ್ಲಿ ರೂ. 71,350 ಮುಂಬೈನಲ್ಲಿ ರೂ. 71,350 ಹಾಗೂ ಕೊಲ್ಕತ್ತದಲ್ಲೂ ರೂ. 71,350 ಗಳಾಗಿದೆ.
ಇದನ್ನೂ ಓದಿರಿ: Gst ರಾಜ್ಯದಲ್ಲಿ ಜನವರಿಯಲ್ಲಿ ದಾಖಲೆಯ ತೆರಿಗೆ ಸಂಗ್ರಹ!, ಎಷ್ಟು ಇಲ್ಲಿದೆ ವಿವರ
ಗೂಗಲ್ ಪೇನ ಮೂಲಕ ಚಿನ್ನ ಖರೀದಿಸುವುದು ಹೇಗೆ ?
ಗೂಗಲ್ ಪೇನ ಮೂಲಕ ಚಿನ್ನ ಖರೀದಿಸುವುದು ಇದೀಗ ಸುಲಭವಾಗಿದೆ. ವಿಧಾನಗಳ ವಿವರ ಇಲ್ಲಿದೆ.
- ಮೊದಲನೇ ಹಂತ: ನಿಮ್ಮ ಪಿನ್ ನಮೂದಿಸಿ ಗೂಗಲ್ ಪೇ ಅಥವಾ ಜಿಪೇ ಆಪ್ ತೆರೆಯಿರಿ
- ಎರಡನೇ ಹಂತ: ಆದ್ಯತೆಯ ನಿಮ್ಮ ಪಾವತಿ ವಿಧಾನ ಆಯ್ಕೆಮಾಡಿ ಮತ್ತು ಪಾವತಿ ಮಾಡಿರಿ
- ನಾಲ್ಕನೇ ಹಂತ: ನೀವು ಎಷ್ಟು ರೂಪಾಯಿಯ ಚಿನ್ನವನ್ನು ಖರೀದಿ ಮಾಡಲು ಬಯಸುತ್ತೀರಿ ಎಂದು ಅದರಲ್ಲಿ ನಿಖರವಾಗಿ ನಮೂದಿಸಿ
- ಐದನೇ ಹಂತ: ಗೋಲ್ಡ್ ಲಾಕರ್ ಅನ್ನು ಕ್ಲಿಕ್ ಮಾಡಿ, Buy Gold ಮೇಲೆ ಕ್ಲಿಕ್ ಮಾಡಿ (ಇಲ್ಲಿ ನಿಮಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಖರೀದಿ ಬೆಲೆಯನ್ನು ತೆರಿಗೆ ಸಮೇತ ತೋರಿಸಲಾಗುತ್ತದೆ)
- ಇನ್ನು ಹುಡುಕಾಟ ವಿಭಾಗದಲ್ಲಿ (ಸರ್ಚ್) 'ಗೋಲ್ಡ್ ಲಾಕರ್' ಎಂದು ಬರೆಯಿರಿ.
- ಈ ರೀತಿ ಖರೀದಿಯಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ, ಬಳಕೆದಾರರು ಖರೀದಿಸಬೇಕಾದ ಕನಿಷ್ಠ ಚಿನ್ನದ ಮೊತ್ತವು 1 ಗ್ರಾಂ ಖರೀದಿಸಬೇಕಾಗಿದೆ.
Pension Scheme Latest Updates: ಪಿಂಚಣಿ ಯೋಜನೆ ಕೇಂದ್ರ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಸಿಹಿಸುದ್ದಿ!