1. ಸುದ್ದಿಗಳು

ತಾಡಪತ್ರಿ ಖರೀದಿಗೆ ಶೇ. 90 ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನ

Tarpaulin

 ರಾಜ್ಯ ಸಾಂಬಾರು  ಪದಾರ್ಥಗಳ  ಅಭಿವೃದ್ಧಿ  ಮಂಡಳಿಯು ಸಾಂಬಾರು  ಬೆಳೆಗಳ ಕೊಯ್ಲೋತ್ತರ  ಚಟುವಟಿಕೆಗಳಿಗಾಗಿ  ಅನುಮೋದಿತ ಸಂಸ್ಥೆಗಳಿಂದ  ತಾಡಪತ್ರಿ ಖರೀದಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ.

ತಾಡಪತ್ರಿ ಖರೀದಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ. 50, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ 90 ರಷ್ಟು  ಸಹಾಯಧನ ನೀಡಲಾಗುವುದು.

ಆಸಕ್ತ ರೈತರು ನಿಗಧಿತ ನಮೂನೆಯಲ್ಲಿ ಜನವರಿ 31 ರೊಳಗೆ ಅರ್ಜಿ ಸಲ್ಲಿಸಬಹುದು.  ಕಳೆದ ವರ್ಷ ಸಹಾಯಧನ  ಪಡೆದ ರೈತರನ್ನು ಪರಿಗಣಿಸಲಾಗುವುದು. ಅವರೂ ಸಹ ಅರ್ಜಿ ಸಲ್ಲಿಸಬಹುದು.

ಅರ್ಜಿ ನಮೂನೆ ಹಾಗೂ ಇನ್ನಿತರ ಮಾಹಿತಿಗಾಗಿ ರೈತರು ಹುಬ್ಬಳ್ಳಿಯ  ವಿದ್ಯಾನಗರದಲ್ಲಿರುವ ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಥವಾ  ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಹುದು.

ಹೆಚ್ಚಿನ ಮಾಹಿತಿಗಾಗಿ 0836-2375030ಗೆ  ಕರೆ ಮಾಡಬಹುದು ಎಂದು ವ್ಯವಸ್ಥಾಪಕ ನಿರ್ದೇಶಕರು ಚಿದಾನಂದ ಪೂಜಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.