1. ಸುದ್ದಿಗಳು

ಮೇ 10 ರಿಂದ 24ರವರೆಗೆ 'ಸಂಪೂರ್ಣ ಲಾಕ್ ಡೌನ್' ಘೋಷಿಸಿದ ತಮಿಳುನಾಡು ಸರ್ಕಾರ!

Ramlinganna
Ramlinganna
Lock down

ಕರ್ನಾಟಕ ರಾಜ್ಯದ ನಂತರ ತಮಿಳುನಾಡು ಸರ್ಕಾರವೂ ಸಹ ಮೇ 10 ರಿಂದ ಮೇ 24ರವರೆಗೆ ಸಂಪೂರ್ಣ ಲಾಕ್ಡೌನ್ ಘೋಷಿಸಿದೆ. ತಮಿಳುನಾಡಿನ ರಾಜ್ಯದಲ್ಲಿ ಕೊರೋನಾ ಪ್ರಕರಣ ಹರಡುವಿಕೆಯನ್ನು ತಡೆಯಲು 14 ದಿನಗಳ ಸಂಪೂರ್ಣ ಲಾಕ್ ಡೌನ್ ವಿಧಿಸಿದೆ.

ಮೇ 10ರಿಂದ ತರಕಾರಿ ಮಾಂಸ ಮತ್ತು ಮೀನು ಅಂಗಡಿಗಳು ಮತ್ತು ತಾತ್ಕಾಲಿಕ ಮಳಿಗೆಗಳು ಮಧ್ಯಾಹ್ನ 12 ರವರೆಗೆ ಮಾತ್ರ ತೆರೆದಿರುತ್ತವೆ. ಇತರ ಎಲ್ಲಾ ಅಂಗಡಿಗಳು ಮುಚ್ಚಿರುತ್ತವೆ.

ಯಾವುದಕ್ಕೆ ನಿರ್ಬಂಧ?:

ಅಗತ್ಯ ಸೇವೆಗಳಾದ ಸಚಿವಾಲಯ, ಆರೋಗ್ಯ, ಕಂದಾಯ, ವಿಪತ್ತು ನಿರ್ವಹಣೆ, ಪೊಲೀಸ್, ಗೃಹ ರಕ್ಷಕ, ಅಗ್ನಿಶಾಮಕ ಮತ್ತು ಸುರಕ್ಷತಾ ಸೇವೆ, ಕೈದಿ ಇಲಾಖೆ, ಜಿಲ್ಲಾಡಳಿತ, ಇಂಧನ, ಕುಡಿಯುವ ನೀರು, ಪೂರೈಕೆ ಖಜಾನೆಗಳನ್ನು ಹೊರತುಪಡಿಸಿ ಉಳಿದ ಯಾವ ಸರ್ಕಾರಿ ಕಚೇರಿಗಳು ತೆರೆದಿರುವುದಿಲ್ಲ.

ಉದ್ಯಾನ, ಕ್ಲಬ್, ಬಾರ್‌ಗಳಿಗೆ ಅವಕಾಶವಿಲ್ಲ ಮನರಂಜನಾ ಕ್ಲಬ್‌ಗಳು, ಬಾರ್‌ಗಳು, ಸಭಾಂಗಣಗಳು, ಮನರಂಜನೆ ಉದ್ಯಾನವನಗಳು, ಸಭಾಂಗಣಗಳು ಕಾರ್ಯನಿರ್ವಹಿಸುವಂತಿಲ್ಲ. ಕೊಯಂಬೆಡು ಸಗಟು ಮಾರುಕಟ್ಟೆಯಲ್ಲಿ ಬಾರ್ ಗಳು ಚಿಲ್ಲರೆ ಮಾರಾಟ ಮಧ್ಯಾಹ್ನದವರೆಗೆ ಮಾರಾಟ ಮಾಡಬಹುದಾಗಿದೆ. ಜಿಲ್ಲಾ ಮಟ್ಟದಲ್ಲಿ ಸಗಟು ಮಾರುಕಟ್ಟೆಯಲ್ಲಿ ಹಣ್ಣು-ತರಕಾರಿ ಮಾರಾಟಕ್ಕೂ ಈ ನಿರ್ಬಂಧ ಅನ್ವಯವಾಗುತ್ತದೆ.

ಎಲ್ಲಾ ಖಾಸಗಿ ಕಚೇರಿಗಳು, ಉದ್ಯಮಗಳು, ಐಟಿ, ಐಟಿ ಸಂಬಂಧಿ ಸೇವೆಗಳು, ವಿನಾಯ್ತಿ ಹೊಂದಿದ ಕೈಗಾರಿಕೆಗಳು ಹೊರತುಪಡಿಸಿ ಬೇರೆ ಕಾರ್ಖಾನೆಗಳು ಲಾಕ್ ಡೌನ್ ಸಮಯದಲ್ಲಿ ಕಾರ್ಯನಿರ್ವಹಿಸುವಂತಿಲ್ಲ, ಈ ಕಚೇರಿಗಳಲ್ಲಿ ಮನೆಯಿಂದ ಕೆಲಸ ಮಾಡುವ ವಿಧಾನ ಅನುಸರಿಸಬಹುದು. ಲಾಕ್ ಡೌನ್ ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಂಕ್ ಗಳು ತೆರೆದಿರುತ್ತವೆ.

ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ 12ರವರೆಗೆ ಅವಕಾಶ ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮ ನಿಯಮಿತದ ಎಲ್ಲಾ ಅಂಗಡಿಗಳು ಸಂಪೂರ್ಣವಾಗಿ ಬಂದ್ ಆಗಿದ್ದು ರೆಸ್ಟೋರೆಂಟ್, ಹೊಟೇಲ್, ಮೆಸ್ ಮತ್ತು ಟೀ ಅಂಗಡಿಗಳಿಂದ ಮಧ್ಯಾಹ್ನ 12 ಗಂಟೆಯವರೆಗೆ ಪಾರ್ಸೆಲ್ ಕೊಂಡೊಯ್ಯಲು ಮಾತ್ರ ಅವಕಾಶವಿರುತ್ತದೆ

ದಿನಸಿ ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗಳು, ತರಕಾರಿ ಮಳಿಗೆಗಳು, ಮಾಂಸ, ಮೀನು ಮಾರಾಟ ಮಾಡುವ ಹವಾ ನಿಯಂತ್ರಿತವಲ್ಲದ ಅಂಗಡಿಗಳಿಗೆ ಮಧ್ಯಾಹ್ನ 12 ಗಂಟೆಯವರೆಗೆ ತೆರೆದಿರಲು ಅವಕಾಶವಿರುತ್ತದೆ.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.