News

ಬೆಲೆ ಏರಿಕೆಯ ಕೊಂಬೆಗೆ ಸಿಲುಕಿದ ನಿಂಬೆ! KG ಗೆ 300 ರೂ, RBI ಎಚ್ಚರಿಕೆ

09 April, 2022 12:22 PM IST By: Kalmesh T
Substantial increase in the prices of essential commodities. 300 per kg of lemons

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಅಗತ್ಯ ವಸ್ತುಗಳ ಮೇಲೂ ಆಗಿದ್ದು, ದೇಶದ ವಿವಿಧ ಪ್ರದೇಶಗಳಲ್ಲಿ 1 ಕೆಜಿ ಹೀರೇಕಾಯಿ, ಬೆಂಡೆಕಾಯಿ ಹಾಗೂ ಹಾಗಲಕಾಯಿಗೆ ತಲಾ 100 ರೂಪಾಯಿ ದಾಟಿದೆ.

ಬೇಸಿಗೆ ಕಾಲದಲ್ಲಿ ವ್ಯಾಪಕ ಬೇಡಿಕೆ ಪಡೆದುಕೊಳ್ಳುವ ನಿಂಬೆಹಣ್ಣು ಕೆಜಿಗೆ 300 ರೂಪಾಯಿ ದಾಟಿದೆ. ಕಚ್ಚಾ ತೈಲದ ಬೆಲೆ ಹೀಗೆ ಮುಂದುವರಿದರೆ, ಮುಂದೆ ಬೆಲೆ ಇನ್ನಷ್ಟು ಏರಿಕೆಯಾಗಲಿದೆ ಎಂದು RBI ಎಚ್ಚರಿಸಿದೆ.

ಇದನ್ನು ಓದಿರಿ: 

ATM Card ಇಲ್ಲದೆ ಹಣ ಪಡೆಯಿರಿ: RBI ತರುತ್ತಿದೆ ಹೊಸ ಸೌಲಭ್ಯ !

Bank Of Baroda ನೇಮಕಾತಿ: ವಾ. 18,00,000 ಸಂಬಳ

ಕಳೆದ ಕೆಲವು ದಿನಗಳಿಂದ ಅಗತ್ಯ ವಸ್ತುಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಒಂದೆಡೆ ಪೆಟ್ರೋಲ್ (Petrol), ಡೀಸೆಲ್ (Diesel), ಗ್ಯಾಸ್ (Gas) ಬೆಲೆಯಲ್ಲಿ ಏರಿಕೆ, ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆಯ ಬೆನ್ನಲ್ಲಿಯೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವ ಕಾರಣ ಸಾಮಾನ್ಯ ಜನ ಎಲ್ಲಾ ಕಡೆಯಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಸರಕುಗಳ ಈ ಹಣದುಬ್ಬರ ಕಾರು, ಮನೆ, ಸಿಮೆಂಟ್ ಗೆ ಮಾತ್ರವೇ ಸೀಮಿತವಾಗಿಲ್ಲ. ತರಕಾರಿಯಿಂದ ಹಿಡಿದು ಇಂಧನದವರೆಗಿನ ಹಣದುಬ್ಬರದಿಂದ ಸಾಮಾನ್ಯ ಬವಣೆ ಪಡುವಂತಾಗಿದೆ. ಬೇಸಿಗೆಯಲ್ಲಿ ನಿಂಬೆ ಹಣ್ಣಿನ (Lemon) ಬೆಲೆ ಗಗನ ಮುಟ್ಟಿದ್ದು, ದೇಶದ ಬಹುತೇಕ ಕಡೆಗಳಲ್ಲಿ ಕೆಜಿಗೆ 300-400 ರೂಪಾಯಿ ವರೆಗೆ ತಲುಪಿದೆ.

Agriculture Income! ರೈತರೇ ನಿಮ್ಮ Income 10 ಲಕ್ಷ ಮೀರಿದರೆ? ಏನಾಗುತ್ತೆ?

Chicken And Fish: ಚಿಕನ್‌ & ಮೀನು ಯಾವುದು ಬೆಸ್ಟ್‌..!

ತರಕಾರಿಗಳು (Vegetable), ಲೋಹಗಳು (Metal) ಮತ್ತು ಹಾಲಿನಂತಹ (Milk) ಪ್ರಮುಖ ಸರಕುಗಳ ಬೆಲೆಗಳು ಹೆಚ್ಚಾಗಿರುವ ನಡುವೆ ಪ್ರಸ್ತುತ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ ಅಂತರರಾಷ್ಟ್ರೀಯ ತೈಲ ಬೆಲೆಗಳು ಏರಿಕೆ ಆಗಿರುವುದು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI)  ಶುಕ್ರವಾರ ಹೇಳಿದೆ.

ಪ್ರತಿ ಬ್ಯಾರೆಲ್‌ಗೆ  100 ಅಮೆರಿಕನ್ ಡಾಲರ್ ಬೇಸ್‌ಲೈನ್‌ಗಿಂತ 10 ಪ್ರತಿಶತದಷ್ಟು ಬೆಲೆ ಏರಿದೆ. ಇದು ಹೀಗೇ ಮುಂದುವರಿದಲ್ಲಿ ದೇಶೀಯ ಹಣದುಬ್ಬರವು ಇನ್ನೂ ಹೆಚ್ಚಾಗಬಹುದು ಎಂದು ಎಚ್ಚರಿಕೆ ನೀಡಿದೆ.

Sugar: ಬೇಡಿಕೆ ಹೆಚ್ಚಿಸಿಕೊಂಡು ಗ್ರಾಹಕರಿಗೆ ಬೆಲೆ ಏರಿಕೆಯಲ್ಲಿ ಕಹಿಯಾದ ಸಕ್ಕರೆ

6% ಬಡ್ಡಿ ದರದಲ್ಲಿ ಸ್ವಯಂ ಉದ್ಯೋಗಕ್ಕೆ ಸಾಲ ಪಡೆಯುವುದು ಹೇಗೆ..? ಯಾರು ಅರ್ಹರು..?

ಜೀರಿಗೆ, ಕೊತ್ತಂಬರಿ, ಮೆಣಸಿನಕಾಯಿ ತುಂಬಾ ದುಬಾರಿ: ಇತ್ತೀಚಿನ ದಿನಗಳಲ್ಲಿ ಜೀರಿಗೆ, ಕೊತ್ತಂಬರಿ ಸೊಪ್ಪು ಮತ್ತು ಮೆಣಸಿನಕಾಯಿ ದರದಲ್ಲಿ ಶೇ.40-60ರಷ್ಟು ಜಿಗಿತ ಕಂಡುಬಂದಿದೆ. ಅದೇ ಸಮಯದಲ್ಲಿ ಬೀನ್ಸ್ ಬೆಲೆ ಕೆಜಿಗೆ 120 ರೂ.ಗೆ ತಲುಪಿದೆ. ಕೆಲ ದಿನಗಳ ಹಿಂದಿನವರೆಗೆ ಕೆಜಿಗೆ 40 ರೂ.ನಂತೆ ಮಾರಾಟವಾಗುತ್ತಿದ್ದ ಹೂಕೋಸು ಬೆಲೆ ಇದೀಗ 80 ರೂ.ಗೆ ತಲುಪಿದೆ.

ದೇಶದ ವಿವಿಧ ಪ್ರದೇಶಗಳಲ್ಲಿ 1 ಕೆಜಿ ಹೀರೇಕಾಯಿ, ಬೆಂಡೆಕಾಯಿ ಹಾಗೂ ಹಾಗಲಕಾಯಿಗೆ ತಲಾ 100 ರೂಪಾಯಿ ದಾಟಿದೆ.  ಮೆಣಸಿನಕಾಯಿ ಕೆಜಿಗೆ 70 ರೂಪಾಯಿ ಆಗಿದ್ದರೆ, ಆಲೂಗೆಡ್ಡೆ, ಈರುಳ್ಳಿ ಬೆಲೆ ಇನ್ನೂ ನಿಯಂತ್ರಣದಲ್ಲಿದ್ದು, ಇದರಿಂದ ಜನಸಾಮಾನ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

PMAY: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಹೆಚ್ಚು ಉಪ್ಪು ನಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?