ಭತ್ತದ ಬೆಳೆಯನ್ನು ನೇರ ನಾಟಿ ವಿಧಾನದ ಮೂಲಕ ಮಾಡಿದ ಕೃಷಿಕರಿಗೆ ಬಂಪರ್ ನ್ಯೂಸ್ ಲಭ್ಯವಾಗಿದ್ದು, ಸರ್ಕಾರ ಈ ರೈತರಿನ್ನು ಪ್ರೋತ್ಸಾಹಿಸುವ ನಿಟ್ಟಿಬಲ್ಲಿ ಬರೋಬ್ಬರಿ 4 ಸಾವಿರ ರೂಪಾಯಿ ಸಹಾಯಧನ ನೀಡುವುದಾಗಿ ಘೋಷಿಸಿದೆ.
ಹೌದು ನೇರ ವಿಧಾನದ ಮೂಲಕ ಭತ್ತವನ್ನು ನಾಟಿ ಮಾಡುವ ಮೂಲಕ ಭತ್ತ ಬೆಳೆದ ಕೃಷಿಕರಿಗೆ ಹರಿಯಾಣ ಸರ್ಕಾರ 4 ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದೆ. ಇತ್ತೀಚಿಗೆ ಸಾಮಾನ್ಯವಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು ತೀವ್ರ ಆತಂಕ ಮೂಡಿಸಿದೆ. ಸದ್ಯ ನೀರನ್ನು ಉಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರವಾಗಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿವೆ. ಹಾಗೂ ಹೊಸ ಹೊಸ ವಿಧಾನಗಳನ್ನು ರೈತರಿಗೆ ಪರಿಚಯಿಸುತ್ತಿವೆ. ಈ ನಿಟ್ಟಿನಲ್ಲಿ ನೇರ ಬಿತ್ತನೆ ಮಾಡುವ ರೈತನ್ನು ಪ್ರೋತ್ಸಾಹಿಸಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
saffron farming ; ʼಕೇಸರಿʼ ಕಾಸ್ಟ್ಲಿ ಯಾಕೆ..? ಅದರ ಕೃಷಿ ಪ್ರಕ್ರಿಯೆ ಹೇಗೆ..?
ಶ್ರೀಗಂಧ ಬೆಳೆದು 6 ಲಕ್ಷ ರೂಪಾಯಿ ಗಳಿಸಬಹುದು..ಮಾರುಕಟ್ಟೆಯಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್
ಪ್ರಸ್ತುತ ಮುಂಗಾರು ಋತುವಿನಲ್ಲಿ ಸರ್ಕಾರವು ಭತ್ತದ ನೇರ ಬಿತ್ತನೆ ವಿಧಾನವನ್ನು ಉತ್ತೇಜಿಸುತ್ತಿದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈಗಾಗಲೇ ಮುಂಗಾರು ಹಂಗಾಮಿನ ಸಿದ್ಧತೆಗಳು ಜೋರಾಗಿ ಆರಂಭವಾಗಿದೆ. ಆದರೆ, ಇದೆಲ್ಲದರ ನಡುವೆಯೂ ಹಲವು ರಾಜ್ಯಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಆತಂಕಕಾರಿ ವಿಷಯವಾಗಿಯೇ ಉಳಿದಿದೆ.
ಈ ಎಲ್ಲಾ ಪರಿಸ್ಥಿತಿಗಳನ್ನು ಪರಿಗಣಿಸಿ ಹರಿಯಾಣ ಸರ್ಕಾರವು ಭತ್ತದ ನೇರ ಬಿತ್ತನೆಗೆ ರೈತರಿಗೆ ಎಕರೆಗೆ 4000 ರೂ ನೀಡುತ್ತ್ತಿದೆ. ಈ ಹಿಂದೆ, ಪಂಜಾಬ್ ಸರ್ಕಾರವು ಕೂಡ ನೇರ ಭತ್ತದ ಬಿತ್ತನೆಗೆ ರೈತರಿಗೆ ಎಕರೆಗೆ 1500 ರೂ. ನೀಡಿದ್ದು ಇಲ್ಲಿ ಗಮನಾರ್ಹವಾದ ವಿಷಯ.
ಸದ್ಯ ಹರಿಯಾಣ ರಾಜ್ಯದಲ್ಲಿ ಭತ್ತ ಬೆಳೆಯುವ ಒಟ್ಟು ವಿಸ್ತೀರ್ಣ ಸುಮಾರು 13 ಲಕ್ಷ ಹೆಕ್ಟೇರ್. ನೇರ ಬಿತ್ತನೆಯ ಆಧಾರದ ಮೇಲೆ ಭತ್ತದ ಕೃಷಿಯನ್ನು ಗರಿಷ್ಠಗೊಳಿಸಲು ಗುರಿ ಅನ್ನು ಹರಿಯಾಣ ಸರ್ಕಾರ ಹೊಂದಿದೆ .
ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!
ಮೇ ತಿಂಗಳಲ್ಲಿ ಬಿತ್ತನೆ ಮಾಡಬೇಕಾದ ಬೆಳೆಗಳು! ಇದರಿಂದ ರೈತರಿಗಾಗಲಿದೆ ಹೆಚ್ಚಿನ ಲಾಭ
ಸಾಮಾನ್ಯ ಭತ್ತದ ನಾಟಿಗೆ ಹೋಲಿಸಿದರೆ ನೇರ ಬಿತ್ತನೆಯಿಂದ ಶೇ.25-30ರಷ್ಟು ನೀರನ್ನು ಉಳಿಸಬಹುದು ಎನ್ನುತ್ತಾರೆ ಕೃಷಿ ತಜ್ಞರು. ಹರಿಯಾಣ ಸರ್ಕಾರವು ಭತ್ತದ ನೇರ ಬಿತ್ತನೆಗೆ ಈ ಹಿಂದೆಯೂ ಸಹಾಯಧನವನ್ನು ನೀಡಿದೆ. ಮೊದಲು ಈ ಮೊತ್ತ ಸುಮಾರು ರೂ. 5000 ಇತ್ತು ಆದರೆ, ಈಗ ಅದನ್ನು ಎಕರೆಗೆ 4000 ರೂಪಾಯಿಗೆ ಇಳಿಸಲಾಗಿದೆ.
ಸಬ್ಸಿಡಿಗಾಗಿ ಅರ್ಜಿ ಸಲ್ಲಿಸಿದ ನಂತರ, ಮೊತ್ತವನ್ನು ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಕೃಷಿ ಅಧಿಕಾರಿ ಮತ್ತು ಪಟ್ವಾರಿ ಅವರು ಫಲಾನುಭವಿ ರೈತರ ನೇರ ಬಿತ್ತನೆ ಕ್ಷೇತ್ರವನ್ನು ಸಹ ಪರಿಶೀಲಿಸುತ್ತಾರೆ.
ಭತ್ತದ ನೇರ ಬಿತ್ತನೆ ಎಂದರೇನು..?
ಎರಡು ವಿಧಾನಗಳನ್ನು ಬಳಸಿ ಭತ್ತವನ್ನು ಬಿತ್ತಬಹುದು. ಮೊದಲ ವಿಧಾನವು ಜಮೀನನ್ನು ಸಿದ್ಧಪಡಿಸುವುದನ್ನು ಒಳಗೊಂಡಿರುತ್ತದೆ. ನರ್ಸರಿ ಪದ್ಧತಿಯಲ್ಲಿ ಭತ್ತ ಬಿತ್ತನೆ ಮಾಡುವುದರಿಂದ ಹೊಲಗಳಲ್ಲಿ ನೀರಿನ ಅವಶ್ಯಕತೆ ಹೆಚ್ಚುತ್ತದೆ. ಮತ್ತೊಂದೆಡೆ, ನೇರ ಬಿತ್ತನೆ ವಿಧಾನವನ್ನು ಬಳಸಿಕೊಂಡು, ರೈತರು ನೇರವಾಗಿ ಹೊಲದಲ್ಲಿ ಸಿಂಪರಣೆ ಅಥವಾ ಡ್ರಿಲ್ ಬಳಸಿ ಭತ್ತದ ಬೀಜಗಳನ್ನು ಬಿತ್ತಬಹುದು. ಈ ವಿಧಾನವು ರೈತರ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ ಮತ್ತು ಕೃಷಿ ವೆಚ್ಚವನ್ನು ಕಡಿಮೆ ಮಾಡುತ್ತದೆ.
Bitter Gourd :ಹೈಬ್ರೀಡ್ ಹಾಗಲಕಾಯಿ ಕೃಷಿ ಹೇಗೆ..ಇಲ್ಲಿದೆ ಸಿಂಪಲ್ ಟಿಪ್ಸ್