ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾದ ನಡುವೆ ಕಾರ್ಮೋಡದ ಸಮರ ನಡೆಯುತ್ತಲೇ ಇರುತ್ತದೆ.
ರಾಜ್ಯದ ವಿವಿಧೆಡೆ ಧಾರಾಕಾರ ಮಳೆ ಸಾಧ್ಯತೆ: ಎಂಟು ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್!
ಇದೀಗ ಮತ್ತೊಂದು ಸುತ್ತಿನ ಸಮರ ಈ ಎರಡು ದೇಶಗಳ ನಡುವೆ ಪ್ರಾರಂಭವಾಗಿದೆ.
ಇದು ಮತ್ತೆ ಎರಡು ದೇಶಗಳ ನಡುವೆಯಷ್ಟೇ ಅಲ್ಲದೇ ಪ್ರಪಂಚದ ವಿವಿಧ ದೇಶಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಉತ್ತರ ಕೊರಿಯಾ ದೇಶವು ದಕ್ಷಿಣ ಕೊರಿಯಾವನ್ನು ಗುರಿಯಾಗಿಸಿಕೊಂಡು ಮೂರು ಕ್ಷಿಪಣಿಗಳನ್ನು ಹಾರಿಸಿದೆ.
ಟಾಟಾ ಗ್ರೂಪ್‌ನಿಂದ 45 ಸಾವಿರ ಜನರಿಗೆ ಉದ್ಯೋಗಾವಕಾಶ!
ಯುದ್ಧ ವಿಮಾನದ ಮೂಲಕ ನಿರ್ದಿಷ್ಟ ಗುರಿಯನ್ನು ಸಾಧಿಸುವ ಸಾಮರ್ಥ್ಯ ಹೊಂದಿರುವ ಮೂರು ಕ್ಷಿಪಣಿಗಳನ್ನು
ತ್ತರ ಕೊರಿಯಾ ಗಡಿಯತ್ತ ಉಡಾಯಿಸಿರುವುದಾಗಿ ದಕ್ಷಿಣ ಕೊರಿಯಾ ಹೇಳಿದೆ. ಇತ್ತೀಚೆಗಷ್ಟೇ ಉತ್ತರ ಕೊರಿಯಾವು ದಕ್ಷಿಣ ಕೊರಿಯಾಕ್ಕೆ ಕ್ಷಿಪಣಿ ಉಡಾಯಿಸಿತ್ತು.
ಅದಕ್ಕೆ ಉತ್ತರವಾಗಿ, ದಕ್ಷಿಣ ಕೊರಿಯಾ, ಉತ್ತರ ಕೊರಿಯಾದತ್ತ ಕ್ಷಿಪಣಿ ಹಾರಿಸಿದೆ!
ಇದನ್ನೂ ಓದಿರಿ: TWITTER ದೂರುವುದಿದ್ದರೆ ದೂರಿ; ತಿಂಗಳಿಗೆ ಎಂಟು ಡಾಲರ್ ಕೊಡಿ ಎಂದ ಎಲಾನ್ ಮಸ್ಕ್!
ಅದೃಷ್ಟವಶಾತ್ ಕ್ಷಿಪಣೆ ಉಡಾವಣೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಉತ್ತರ ಕೊರಿಯಾ ಉಡಾಯಿಸಿರುವ ಕ್ಷಿಪಣಿಯು ದಕ್ಷಿಣ ಕೊರಿಯಾದ ಕಡಲ ತೀರಕ್ಕೆ ಅಪ್ಪಳಿಸಿದೆ.
ಆದರೆ, ಈ ಬೆಳವಣಿಗೆಯಿಂದಾಗಿ ಉಭಯ ರಾಷ್ಟ್ರಗಳ ಮಧ್ಯೆ ಶೀತಲ ಸಮರ ಮುಂದುವರಿದಿದೆ.
ಕಳೆದ ತಿಂಗಳಿನಲ್ಲಿ ಉತ್ತರ ಕೊರಿಯಾ ಕ್ಷಿಪಣಿಯನ್ನು ಉಡಾಯಿಸಿ, ಹೆಚ್ಚಿನ ಶಸ್ತ್ರಾಸ್ತ್ರ ಜಮಾವಣೆ ಮಾಡಿಕೊಂಡಿರುವುದಾಗಿಯೂ ಹೇಳಿತ್ತು.
ಈ ಬೆಳವಣಿಗೆಯಲ್ಲಿ ಅಮೆರಿಕವು ದಕ್ಷಿಣ ಕೊರಿಯಾಗೆ ಬೆಂಬಲ ನೀಡುವುದಾಗಿ ತಿಳಿಸಿತ್ತು.