News

ತೆಂಗು ಬೆಳೆಗಾರರಿಗೆ ಶಾಕಿಂಗ್ ಸುದ್ದಿ; ತೆಂಗಿನಕಾಯಿ, ಕೊಬ್ಬರಿಯ ಬೆಲೆ ಕುಸಿತ!

30 May, 2022 10:17 AM IST By: Kalmesh T
Shocking news; Coconut, coconut prices fall

ನಾಫೆಡ್‌ ಕೊಬ್ಬರಿ ಸಂಗ್ರಹ, ಕೃಷಿ ಇಲಾಖೆಯ ಹಸಿ ತೆಂಗಿನಕಾಯಿ ಶೇಖರಣೆ ಯೋಜನೆಯೂ ಹಳಿ ತಪ್ಪಿರುವುದು ತೆಂಗು ಬೆಳೆಗಾರರನ್ನು ಸಂಕಷ್ಟಕ್ಕೆ ತಳ್ಳಿದೆ.

ಇದನ್ನೂ ಓದಿರಿ: ಹೂವಿನಹಡಗಲಿ: ಸಕ್ಕರೆ ಕಾರ್ಖಾನೆ ಕೆಮಿಕಲ್ ಮಿಶ್ರಿತ ನೀರಿನಿಂದ ಮೀನುಗಳ ಸಾವು..!

ಬಿಸಿಲಿನ ಶಾಖದಿಂದ ಈ ಬಾರಿ ಮಾವಿನ ಉತ್ಪಾದನೆಯಲ್ಲಿ ಕುಂಠಿತ: ಕೃಷಿ ತಜ್ಞರ ಅಭಿಪ್ರಾಯ

ಕೃಷಿ ಇಲಾಖೆ ಹಸಿ ತೆಂಗಿನ ಕಾಯಿಯನ್ನು ಪ್ರತಿ Kg ಗೆ 32 ರೂ.ನಂತೆ ಹಾಗೂ ನಾಫೆಡ್‌ ಕೊಬ್ಬರಿಯನ್ನು ಪ್ರತಿ Kgಗೆ 105.90 ರೂ.ನಂತೆ ಖರೀದಿಸುತ್ತಿದೆ.

ಕೇಂದ್ರ ಸರಕಾರದ ನಿರ್ದೇಶನಗಳನ್ನು ಪಾಲಿಸಲಾಗದೆ ಕೇರಫೆಡ್‌ ಕೊಬ್ಬರಿ ಸಂಗ್ರಹದಿಂದ ಹಿಂದೆ ಸರಿದಿದೆ. ಇದರಿಂದಾಗಿ ಮಾರ್ಕೆಟ್‌ ಫೆಡ್‌ ಮೂಲಕ ಕೊಬ್ಬರಿ ಸಂಗ್ರಹಿಸಲು ಕೃಷಿ ಇಲಾಖೆ ನಿರ್ಧರಿಸಿದೆ.

ಕೇರಳದಲ್ಲಿ ತೆಂಗಿನಕಾಯಿ ಮತ್ತು ಕೊಬ್ಬರಿ ಬೆಲೆ ಮತ್ತಷ್ಟು ಕುಸಿದಿದೆ. ಕೇರಳ ರಾಜ್ಯದ ಬಹುತೇಕ ಆಯಿಲ್‌ ಮಿಲ್‌ಗಳಲ್ಲಿ ಕೊಬ್ಬರಿ ಸಂಗ್ರಹ ನಿಲ್ಲಿಸುವುದರೊಂದಿಗೆ ತೆಂಗಿನಕಾಯಿ ಮತ್ತು ಕೊಬ್ಬರಿ ಖರೀದಿಸಲು ಯಾರೂ ಮುಂದಾಗುತ್ತಿಲ್ಲ.

ಕಾಳುಮೆಣಸಿನಲ್ಲಿ ಬರುವ ರೋಗಗಳು ಮತ್ತು ಅದರ ಸಮಗ್ರ ನಿರ್ವಹಣೆ

ಗ್ರಾಮಸ್ಥರ ದಾಳಿ; 50 ಮರಿಗಳಿಗೆ ಜನ್ಮ ನೀಡಿ ಸಾವನ್ನಪ್ಪಿದ Russell's viper ಗರ್ಭಿಣಿ ಹಾವು..!

ನಾಫೆಡ್‌ನ ಕೊಬ್ಬರಿ ಸಂಗ್ರಹ, ಕೃಷಿ ಇಲಾಖೆಯ ಹಸಿ ತೆಂಗಿನಕಾಯಿ ಶೇಖರಣೆ ಯೋಜನೆಯೂ ಹಳಿ ತಪ್ಪಿರುವುದು ತೆಂಗು ಬೆಳೆಗಾರರನ್ನು ಕಂಗೆಡಿಸಿದೆ. ತಿಂಗಳ ಹಿಂದೆ ತೆಂಗಿನಕಾಯಿಯನ್ನು ಕೆಜಿಗೆ 28 ರೂ. ತನಕ ಖರೀದಿಸಲಾಗಿತ್ತು.

ಪ್ರಸ್ತುತ 24 ರೂಪಾಯಿಗೆ  ಹಸಿ ತೆಂಗಿನಕಾಯಿ ಖರೀದಿಸಲಾಗುತ್ತಿದೆ. ಬೆಳಗಾರರಿಂದ 24 ರೂ.ಗೆ ಖರೀದಿಸಲಾಗುವ ತೆಂಗಿನಕಾಯಿಯನ್ನು ಅಂಗಡಿಗಳಲ್ಲಿ 30 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ.

ಕೇರಳ ಹಾಗೂ ಇತರ ರಾಜ್ಯಗಳಲ್ಲಿ ತೆಂಗಿನಕಾಯಿ ಉತ್ಪಾದನೆ ಹೆಚ್ಚಿದೆ. ಇದು ಕೇರಳ ರಾಜ್ಯದಲ್ಲಿ ತೆಂಗಿನಕಾಯಿ ಮಾರಾಟದ ಮೇಲೆ ಪರಿಣಾಮ ಬೀರಿದೆ.

ಭತ್ತದ ಕೃಷಿಯಲ್ಲಿ ಮೀನುಗಾರಿಕೆ: ಈಗ ರೈತರು ಎರಡೆರಡು ಲಾಭ ಪಡೆಯಬಹುದು!

ಉತ್ತಮ ಕೃಷಿ ಮತ್ತು ಆದಾಯಕ್ಕಾಗಿ ಹೂಕೋಸು ಕೃಷಿ! ಇಲ್ಲಿದೆ ಹೂಕೋಸು ಬೆಳೆಯ ಸಮಗ್ರ ಮಾಹಿತಿ…

ಹಿಂದೆ ತಮಿಳುನಾಡಿನ ವ್ಯಾಪಾರಿಗಳು ಕೇರಳದಿಂದ ತೆಂಗಿನ ಕಾಯಿ ಖರೀದಿಸಿ ಬೃಹತ್‌ ಪ್ರಮಾಣದಲ್ಲಿ ದಾಸ್ತಾನು ಇರಿಸುತ್ತಿದ್ದರು. ಈಗ ಅದೂ ನಿಂತಿದೆ. ಹೇರಳ ಪ್ರಮಾಣದಲ್ಲಿ ತೆಂಗಿನಕಾಯಿ ದಾಸ್ತಾನು ಇರುವ ಕಾರಣ ಕೇರಳದ ಗಿರಣಿ ಮಾಲೀಕರೂ ತೆಂಗಿನಕಾಯಿ ಖರೀದಿಸುತ್ತಿಲ್ಲ.

ತಿಂಗಳ ಹಿಂದೆ ಪ್ರತಿ ಕ್ವಿಂಟಾಲ್‌ ಕೊಬ್ಬರಿ 9,200 ರೂ.ಗೆ ಖರೀದಿಸಲಾಗಿತ್ತು. ಪ್ರಸ್ತುತ ಕ್ವಿಂಟಾಲ್‌ ಕೊಬ್ಬರಿ ದರ 8,700 ರೂ.ಗೆ ಕುಸಿದಿದೆ. ಕೇಂದ್ರ ಸರಕಾರದ ನಿರ್ದೇಶನದಂತೆ ನಾಫೆಡ್‌ ಕಳೆದ 6 ತಿಂಗಳಲ್ಲಿ ಕೇರಳದಿಂದ 50 ಸಾವಿರ ಟನ್‌ ಕೊಬ್ಬರಿ ಖರೀದಿಸಬೇಕಿತ್ತು.

ಆದರೆ ಕೊಬ್ಬರಿ ಸಂಗ್ರಹ ಆರಂಭವಾಗಿ ಎರಡೂವರೆ ತಿಂಗಳಲ್ಲಿ ಕೇವಲ 48 ಕ್ವಿಂಟಾಲ್‌ ಕೊಬ್ಬರಿ ಸಂಗ್ರಹವಾಗಿದೆ. ಕೃಷಿ ಇಲಾಖೆ ಹಸಿ ತೆಂಗಿನ ಕಾಯಿಯನ್ನು ಪ್ರತಿ ಕೆಜಿಗೆ 32 ರೂ.ನಂತೆ ಹಾಗೂ ನಾಫೆಡ್‌ ಕೊಬ್ಬರಿಯನ್ನು ಪ್ರತಿ ಕೆಜಿಗೆ 105.90 ರೂ.ನಂತೆ ಖರೀದಿಸುತ್ತಿದೆ.

ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!

ಶ್ರೀಗಂಧ ಬೆಳೆದು 6 ಲಕ್ಷ ರೂಪಾಯಿ ಗಳಿಸಬಹುದು..ಮಾರುಕಟ್ಟೆಯಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್‌

ಕೇಂದ್ರ ಸರಕಾರದ ನಿರ್ದೇಶನಗಳನ್ನು ಪಾಲಿಸಲಾಗದೆ ಕೇರಫೆಡ್‌ ಕೊಬ್ಬರಿ ಸಂಗ್ರಹದಿಂದ ಹಿಂದೆ ಸರಿದಿದೆ. ಇದರಿಂದಾಗಿ ಮಾರ್ಕೆಟ್‌ ಫೆಡ್‌ ಮೂಲಕ ಕೊಬ್ಬರಿ ಸಂಗ್ರಹಿಸಲು ಕೃಷಿ ಇಲಾಖೆ ನಿರ್ಧರಿಸಿದೆ.

ಆದರೆ ಎರಡು ಸಂಸ್ಥೆಗಳು ಸಂಗ್ರಹಕ್ಕೆ ಮುಂದೆ ಬಂದರೂ ಶೇಖರಣೆ ಹೆಸರಿಗೆ ಮಾತ್ರ ಸೀಮಿತವಾಗಿದೆ. ಕೇಂದ್ರ ಸರಕಾರ ಮಾನದಂಡಗಳಲ್ಲಿ ರಿಯಾಯಿತಿ ನೀಡುವ ಮೂಲಕ ಹಸಿ ತೆಂಗಿನಕಾಯಿ ಸಂಗ್ರಹಕ್ಕೆ ಮುಂದಾಗುವುದರೊಂದಿಗೆ ಸಮಸ್ಯೆ ಬಗೆಹರಿಯಬಹುದು ಎಂಬ ನಿರೀಕ್ಷೆ ತೆಂಗು ಬೆಳೆಗಾರರದ್ದು.