News

ಮನೆಯಲ್ಲೇ ಕುಳಿತು ಹಣ ಗಳಿಸೋಕೆ ಭರ್ಜರಿ ಆಫರ್‌ ಕೊಡ್ತಿದೆ SBI, ಹೇಗೆ?

23 March, 2022 5:01 PM IST By: KJ Staff
sbi gives bumper offr to customers

ಮನೆಯಲ್ಲೇ ಕೂತು ಲಕ್ಷ-ಲಕ್ಷ ಹಣ ಗಳಿಸುವ ಅವಕಾಶವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank of India) ನಿಮಗೆ ನೀಡುತ್ತಿದೆ. ಒಂದು ಬಾರಿ ಹೂಡಿಕೆ(One-time Investment) ಮಾಡಿ ಮನೆಯಲ್ಲೇ ಕುಳಿತು ತಿಂಗಳಿಗೆ ಸಾವಿರಗಟ್ಟಲೇ ಹಣ ಗಳಿಸಬಹುದು.

ಇದನ್ನೂ ಓದಿ:ವೀಕೆಂಡ್‌ನಲ್ಲಿ ಚಿನ್ನ ಖರೀದಿಗೆ ಹೋಗ್ತಿದ್ದೀರಾ..?ಹಾಗಾದ್ರೆ ಈ ಸುದ್ದಿಯನ್ನ ಒಮ್ಮೆ ನೋಡ್ಬಿಡಿ

ಮನೆಯಿಂದ ಹಣ ಸಂಪಾದಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ನೀವು ಮನೆಯಿಂದಲೇ ತಿಂಗಳಿಗೆ 80,000 ರಿಂದ 90,000 ರೂಪಾಯಿಗಳನ್ನು ಸುಲಭವಾಗಿ ಗಳಿಸುವ ಅತ್ಯುತ್ತಮ ಮಾರ್ಗಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. ಸುರಕ್ಷಿತ ಮತ್ತು ಪಾರದರ್ಶಕ ರೀತಿಯಲ್ಲಿ ನೀವು ಪ್ರತಿ ತಿಂಗಳು ಹಣವನ್ನು ಗಳಿಸಬಹುದು ಎಂಬುದು ಇದರ ಪ್ರಮುಖ ಆಕರ್ಷಣೆಯಾಗಿದೆ.

ಎಟಿಎಂ ಫ್ರಾಂಚೈಸ್ನಿಂದ ತಿಂಗಳಿಗೆ ಸಿಗುವ ಲಾಭವೆಷ್ಟು?

ಎಟಿಎಂ ದಿನಕ್ಕೆ 250 ವಹಿವಾಟುಗಳನ್ನು ನಡೆಸಿದರೆ, ಅಂದರೆ ಅದರಲ್ಲಿ ಶೇಕಡಾ 65 ರಷ್ಟು ನಗದು ವ್ಯವಹಾರ ಮತ್ತು ಶೇಕಡಾ 35 ರಷ್ಟು ನಗದು ರಹಿತ ವ್ಯವಹಾರ ನಡೆಸಿದರೆ, ಆಗ ತಿಂಗಳ ಆದಾಯ 45 ಸಾವಿರ ರೂಪಾಯಿಗಳ ಹತ್ತಿರ ಇರುತ್ತದೆ. ಅದೇ ವೇಳೆಗೆ ನಿತ್ಯ 500 ವಹಿವಾಟು ನಡೆದರೆ ಸುಮಾರು 88-90 ಸಾವಿರ ಹಣ ಕಮಿಷನ್ ಸಿಗಲಿದೆ.

ಇದನ್ನೂ ಓದಿ:Salary hike:ಸರ್ಕಾರಿ ನೌಕರರಿಗೆ ಬಂಪರ್‌..ಏಪ್ರೀಲ್‌ 1ರಿಂದ ಮೂಲ ವೇತನದಲ್ಲಿ 10% ಹೆಚ್ಚಳ

SBI ATM ನ ಫ್ರಾಂಚೈಸಿಗೆ ಅಗತ್ಯವಿರುವ ದಾಖಲೆಗಳು

1. ಯಾವುದೇ ID ಪುರಾವೆ ದಾಖಲೆಗಳು - ಆಧಾರ್ ಕಾರ್ಡ್, PAN ಕಾರ್ಡ್, ಮತದಾರರ ಕಾರ್ಡ್

2. ವಿಳಾಸ ಪುರಾವೆ ದಾಖಲೆಗಳಲ್ಲಿ ಯಾವುದಾದರೂ- ಪಡಿತರ ಚೀಟಿ ಮತ್ತು ವಿದ್ಯುತ್ ಬಿಲ್

3. ಬ್ಯಾಂಕ್ ಖಾತೆ ಮತ್ತು ಪಾಸ್‌ಬುಕ್

4. ಫೋಟೋ, ಇ-ಮೇಲ್ ಐಡಿ ಮತ್ತು ಫೋನ್ ಸಂಖ್ಯೆ

5. ಇತರ ದಾಖಲೆಗಳು ಅಥವಾ ದಾಖಲೆಗಳು

6. GST ಸಂಖ್ಯೆ

7. ಹಣಕಾಸಿನ ದಾಖಲೆಗಳು

ಇದನ್ನೂ ಓದಿ:ರಾಷ್ಟ್ರೀಯ ರಸಗೊಬ್ಬರ ನಿಗಮದಲ್ಲಿ ನೇಮಕಾತಿ: ಪರೀಕ್ಷೆ ಇಲ್ಲದೆ ಪಡೆಯಿರಿ ಸರ್ಕಾರಿ ನೌಕರಿ

SBI ATM ಫ್ರಾಂಚೈಸ್ ಅನ್ನು ಸ್ಥಾಪಿಸಲು ನಿಮಗೆ ಅಗತ್ಯವಿರುವ ಮಾಹಿತಿ ಇಲ್ಲಿದೆ.

ನೀವು ಇತರೆ ಎಟಿಎಂ ಕೌಂಟರ್ಗಳಿಂದ 100 ಮೀಟರ್ಗಿಂತ ಹೆಚ್ಚು ದೂರದಲ್ಲಿ 50-80 ಚದರ ಅಡಿ ಜಾಗವನ್ನು ಹೊಂದಿರಬೇಕು.

ನೆಲಮಹಡಿಯಲ್ಲಿ ಸ್ಥಳಾವಕಾಶ ಇರಬೇಕು.

ಸ್ಥಳಕ್ಕೆ 24/7 ಗಂಟೆಗಳ ವಿದ್ಯುತ್ ಪೂರೈಕೆ ಇರಬೇಕು. ಜೊತೆಗೆ 1KW ವಿದ್ಯುತ್ ಸಂಪರ್ಕವನ್ನು ಹೊಂದಿರಬೇಕು.

ಎಟಿಎಂ ದಿನಕ್ಕೆ 300 ವಹಿವಾಟುಗಳ ಸಾಮರ್ಥ್ಯವನ್ನು ಹೊಂದಿರಬೇಕು.

ಎಟಿಎಂ ಫ್ರಾಂಚೈಸ್ ಸ್ಥಾಪನೆ ಮಾಡಲು ನಿಗದಿತ ಜಾಗವು ಯಾವುದೇ ಆಕ್ಷೇಪಣೆ ಹೊಂದಿಲ್ಲ ಎಂಬ ಪ್ರಮಾಣಪತ್ರ ಬೇಕು.

ಇದನ್ನೂ ಓದಿ:ಪಡಿತರ ತರಲು ಪರದಾಡಿದ್ದ ಯುವಕ; ಹೊಸ App ರಚಿಸಿದ ಕಥೆ!