1. ಸುದ್ದಿಗಳು

ಐಸಿಸಿ ಟೆಸ್ಟ್‌ ರ್ಯಾಂ ಕಿಂಗ್‌: 8ನೇ ಸ್ಥಾನಕ್ಕೇರಿದ ರೋಹಿತ್ ಶರ್ಮಾ

ಐಸಿಸಿಯಿಂದ ಇತ್ತೀಚಿನ ಟೆಸ್ಟ್ ಶ್ರೇಯಾಂಕ ಪ್ರಕಟಗೊಂಡಿದ್ದು, ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮ 8 ನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ 6 ಸ್ಥಾನಗಳ ಸುಧಾರಣೆ ಕಂಡಿದಿದ್ದಾರೆ.

ಇಂಗ್ಲೆಂಡ್ ಸರಣಿಯಲ್ಲಿ ರೋಹಿತ್‌ 6 ಇನಿಂಗ್ಸ್ ಗಳಿಂದ ಒಟ್ಟು 296 ರನ್‌ಗಳನ್ನು ಬಾರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ತಲಾ ಒಂದು ಅರ್ಧಶತಕ ಮತ್ತು ಶತಕ ಬಾರಿಸಿರುವ ರೋಹಿತ್‌ ಶರ್ಮಾ. ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌  ಟಾಪ್‌ 10ಗೆ ಕಾಲಿಟ್ಟಿದ್ದಾರೆ.

2019ರ ಅಕ್ಟೋಬರ್ ರಲ್ಲಿ 722 ಅಂಕ ಗಳಿಸಿದ್ದ ರೋಹಿತ್ ಶರ್ಮಾ, ಈಗ 20 ಅಂಕಗಳ ಮೂಲಕ 742 ಅಂಕಗಳನ್ನು ಹೆಚ್ಚಿಸಿಕೊಂಡು 10 ನೇ ಸ್ಥಾನದಿಂದ 8 ನೇ ಸ್ಥಾನಕ್ಕೆ ಏರಿದ್ದಾರೆ.

ಬೌಲರ್‌ಗಳ ಪಟ್ಟಿಯಲ್ಲಿ ಅಶ್ವಿನ್ ಹೊರತಾಗಿ ಜಸ್‌ಪ್ರೀತ್‌ ಬುಮ್ರಾ ತಮ್ಮ 9ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಈ ಮೂಲಕ ಟಾಪ್‌ 10 ಪಟ್ಟಿಯಲ್ಲಿ ಇಬ್ಬರು ಭಾರತೀಯರು ಕಾಣಿಸಿಕೊಂಡಂತ್ತಾಗಿದ ಅಶ್ವಿನ್‌ ಬರೋಬ್ಬರಿ 4 ಸ್ಥಾನ ಜಿಗಿದು 3ನೇ ರ್ಯಾಂಕ್ ಗಿಟ್ಟಿಸಿಕೊಂಡಿದ್ದಾರೆ. ಈ ವಿಭಾಗದಲ್ಲಿ ಆಸೀಸ್‌ ವೇಗಿ ಪ್ಯಾಟ್‌ ಕಮಿನ್ಸ್‌ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಇದೇ ವೇಳೆ ಅಕ್ಷರ್ ಪಟೇಲ್ ಹಾಗೂ ರವಿಚಂದ್ರನ್ ಅಶ್ವಿನ್ ಸಹ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಬಳಿಕ ಶ್ರೇಯಾಂಕಗಳಲ್ಲಿ ಕಂಡಿರುವುದು ವಿಶೇಷ. ಸ್ಪಿನ್ನರ್ ಅಕ್ಷರ್ ಪಟೇಲ್ 11 ವಿಕೆಟ್ ಗಳ ಪಡೆಯುವ ಮೂಲಕ 38 ನೇ ಸ್ಥಾನದಲ್ಲಿದ್ದರೆ, ಆರ್ ಅಶ್ವಿನ್ 7 ವಿಕೆಟ್ ಪಡೆದು ಮೂರನೇ ಸ್ಥಾನಕ್ಕೇರಿದ್ದಾರೆ.

ಕೇನ್ ವಿಲಿಯಂಸನ್ 919 ಅಂಕಗಳೊಂದಿಗೆ ಟಾಪ್ ಸ್ಥಾನದಲ್ಲಿದ್ದಾರೆ. ಸ್ಟೀವನ್ ಸ್ಮಿತ್ 891 ರೇಟಿಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಮರ್ನೂಸ್ ಲುಬುಸಚಂಗೆ 878, ಜಾಯ ರೂಟ್, ವಿರಾಟ್ ಕೊಹ್ಲಿ, ಬಾಬರ್ ಅಜಮ್, ಹೆನ್ರಿ ನಿಕೋಲಸ್ ಕ್ರಮವಾಗಿ ನಾಲ್ಕು, ಐದು, ಆರು, ಏಳನೇ ಸ್ಥಾನದಲ್ಲಿದ್ದಾರೆ.

Published On: 28 February 2021, 08:44 PM English Summary: Rohit sharma 8th position in test rankings

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.