ಈಗ ನಾವಿನ್ನೂ March ನಲ್ಲಿದ್ದೇವೆ. ಆದರೆ, ಈಗಾಗಲೇ ಕೆಲವು ರಾಜ್ಯಗಳಲ್ಲಿ ಬಿಸಿಲು ಗರಿಷ್ಠ ತಾಪಮಾನವು ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ಮಾರ್ಕ್ ಅನ್ನು ಮುಟ್ಟುತ್ತಿದೆ. ಬಿಸಿಲಿನ ತಾಪ ಹೆಚ್ಚಿದಂತೆ ಬಿಸಿಗಾಳಿಯೂ ತನ್ನ ಪರಿಣಾಮವನ್ನು ಬೀರತೊಡಗಿದೆ.
ಇದನ್ನು ಓದಿ: GOOD NEWS : ಏಪ್ರೀಲ್ 1 ರಿಂದ Savings Account ಬಡ್ಡಿದರವನ್ನ ಶೇ 6ಕ್ಕೇರಿಸಲು ತೀರ್ಮಾನ ಕೈಗೊಂಡ ಬ್ಯಾಂಕ್
Gold Coffee ಕುಡಿದ Golden Girl! 3190 ಬೆಲೆಯುಳ್ಳ “24K ಚಿನ್ನದ ಕಾಫಿ”ಯ ವಿಶೇಷತೆ ಗೊತ್ತೆ?
ಭಾರತೀಯ ಹವಾಮಾನ ಇಲಾಖೆಯು ಇತ್ತೀಚಿನ ಬುಲೆಟಿನ್‌ನಲ್ಲಿ ಮುಂದಿನ 5 ದಿನಗಳಲ್ಲಿ ವಾಯುವ್ಯ ಭಾರತ, ಮಧ್ಯ ಭಾರತ ಮತ್ತು ಪಶ್ಚಿಮ ಭಾರತದಲ್ಲಿ ಶಾಖದ ಅಲೆ ಹೆಚ್ಚಾಗುವ ಕುರಿತು ಮುನ್ಸೂಚಣೆ ನೀಡಿದೆ.
ಜೊತೆಗೆ, IMD ಪ್ರಕಾರ, ಉತ್ತರ ಮತ್ತು ಮಧ್ಯ ಭಾರತದ ಹಲವಾರು ರಾಜ್ಯಗಳಲ್ಲಿ ಮುಂದಿನ ಐದು ದಿನಗಳವರೆಗೆ ಶಾಖದ ಅಲೆ ಇರುತ್ತದೆ. ಏಕಕಾಲದಲ್ಲಿ, ಸೌರಾಷ್ಟ್ರ ಮತ್ತು ಜಮ್ಮು ವಿಭಾಗದ ಕಚ್ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ಮುಂದಿನ ಎರಡು ದಿನಗಳಲ್ಲಿ ಬಿಸಿಗಾಳಿ ಹೆಚ್ಚಾಗಲಿದೆ.
Agriculture super app! ರೈತರಿಗೆ Super App!
ಪಶ್ಚಿಮ ಮಧ್ಯಪ್ರದೇಶ, ವಿದರ್ಭ ಮತ್ತು ರಾಜಸ್ಥಾನದಲ್ಲಿ ಮುಂದಿನ 4 ರಿಂದ 5 ದಿನಗಳವರೆಗೆ ಶಾಖದ ಅಲೆಯು ಮುಂದುವರಿಯುತ್ತದೆ. ತಾಪಮಾನ ಹೆಚ್ಚಾಗುವ ಕಾರಣ ಜನರು ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ.
ಮತ್ತೊಂದೆಡೆ ಹರಿಯಾಣ, ದಕ್ಷಿಣ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳದ ಗಂಗಾ ಪ್ರದೇಶ, ಮಧ್ಯಪ್ರದೇಶ, ಮಧ್ಯ ಮಹಾರಾಷ್ಟ್ರ ಮತ್ತು ಮರಾಠವಾಡದಲ್ಲಿ ಮಾರ್ಚ್ 30 ರಿಂದ ಏಪ್ರಿಲ್ 1 ರವರೆಗೆ ತೀವ್ರತರವಾದ ಶಾಖದ ಅಲೆಗಳು ಉಂಟಾಗಲಿವೆ.
Fruit Juices: ಈ ಜ್ಯೂಸ್‌ಗಳು ಬಾಯಾರಿಕೆಗೂ ಸೈ.. ಆರೋಗ್ಯಕ್ಕೂ ಜೈ
ಇದಕ್ಕೆ ತದ್ವಿರುದ್ಧವಾಗಿ, ಮುಂದಿನ ಐದು ದಿನಗಳ ಕಾಲ ಈಶಾನ್ಯ ಭಾರತದ ರಾಜ್ಯಗಳಲ್ಲಿ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ. ಮಾರ್ಚ್ 31 ಮತ್ತು ಏಪ್ರಿಲ್ 1 ರಂದು ಅಸ್ಸಾಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ.
IMD ಪ್ರಕಾರ, ಮಂಗಳವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನವಿಡೀ ಆಕಾಶವು ಶುಭ್ರವಾಗಿರುತ್ತದೆ, ಹೆಚ್ಚಿನ ತಾಪಮಾನವು ಸುಮಾರು 37 ಡಿಗ್ರಿ ಸೆಲ್ಸಿಯಸ್ ಇರುತ್ತದೆ.
Potato cultivation In Container! ಹೇಗೆ? Home Gardening! ವಿಶೇಷ!
Gold Rate: ಬೆಂಗಳೂರು, ಮೈಸೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತ..!