News

ರಾಜ್ಯದಲ್ಲಿ ಬಿಡುವು ನೀಡಿದ ಮಳೆ, ವಿವಿಧೆಡೆ ಚಳಿ

28 January, 2023 3:14 PM IST By: Hitesh
Respite from rain, cold in different parts of the state

ರಾಜ್ಯದಲ್ಲಿ ಮಳೆ ತುಸು ಬಿಡುವು ನೀಡಿದ್ದು, ರಾಜ್ಯದಲ್ಲಿ ಅಲ್ಲಲ್ಲಿ ಚಳಿ ಪ್ರಮಾಣ ತುಸು ಹೆಚ್ಚಳವಾಗಿದೆ. ಕಳೆದ 24 ಗಂಟೆಗಳಿಂದ ಒಣಹವೆ ಮುಂದುವರಿದಿದೆ.

Today Gold Rate| ವಾರಾಂತ್ಯದಲ್ಲಿ ಚಿನ್ನದ ಬೆಲೆ ತುಸು ಇಳಿಕೆ, ಎಷ್ಟಿದೆ ಇಂದಿನ ಚಿನ್ನದ ದರ!

ಮುಂದಿನ ಎರಡು ದಿನಗಳ ಕಾಲ ಕನಿಷ್ಠ ಉಷ್ಣಾಂಶವು ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 3ರಿಂದ 4 ಡಿಗ್ರಿ ಸೆಲ್ಸಿಯಸ್‌ ಕಡಿಮೆಯಾಗುವ ಸಾಧ್ಯತೆಗಳಿವೆ. ರಾಜ್ಯಾದ್ಯಂತ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆಗಳು ಕಂಡು ಬಂದಿಲ್ಲ.

ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಕನಿಷ್ಠ ಉಷ್ಣಾಂಶ ಅತೀ ಕನಿಷ್ಠ ಉಷ್ಣಾಂಶ 9.4 ಡಿಗ್ರಿ ಸೆಲ್ಸಿಯಸ್‌ ಬಾಗಲಕೋಟೆಯಲ್ಲಿ ದಾಖಲಾಗಿದೆ.  ಮುಂದಿನ ಎರಡು ದಿನಗಳ ಕಾಲ ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ.

ಉಷ್ಣಾಂಶದಲ್ಲಿ ಒಳನಾಡಿನ ವಿವಿಧೆಡೆ 2.1 ಡಿಗ್ರಿ ಸೆಲ್ಸಿಯಸ್‌ನಿಂದ 4 ಡಿಗ್ರಿ ಸೆಲ್ಸಿಯಸ್‌ನ ವರೆಗೆ ಗಮನಾರ್ಹ ಬದಲಾವಣೆ ಆಗಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ 2 ಡಿಗ್ರಿ ಸೆಲ್ಸಿಯಸ್‌ನಿಂದ 2.0 ಡಿಗ್ರಿ ಸೆಲ್ಸಿಯಸ್‌ನ ವರೆಗೆ ಬದಲಾಗಿದೆ.  

ಆಧಾರ್ ಕಾರ್ಡ್‌ ಇ-ಕೆವೈಸಿ ವಹಿವಾಟು ಪ್ರಮಾಣ 84.8 ಕೋಟಿಗೆ ಏರಿಕೆ!

ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಾಧ್ಯತೆಗಳಿರುತ್ತವೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆಗಳಿರುತ್ತದೆ.  

EPFO ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಿಂದ ಆಪ್ಕೆ ನಿಕಟ್‌ 2.0 ವಿಸ್ತರಣೆ!

ಏರೋ ಇಂಡಿಯಾ ವೈಮಾನಿಕ ವಸ್ತು ಪ್ರದರ್ಶನ: ಮಾಂಸ ಮಾರಾಟ ನಿಷೇಧ

ಬೆಂಗಳೂರಿನಲ್ಲಿ ಏರೋ ಇಂಡಿಯಾ ವೈಮಾನಿಕ ವಸ್ತು ಪ್ರದರ್ಶನ ಇರುವ ಹಿನ್ನೆಲೆಯಲ್ಲಿ ಯಲಹಂಕ ವಾಯುನೆಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಂಸ–ಮಾಂಸಾಹಾರ ಮಾರಾಟ ನಿರ್ಬಂಧಿಸಲಾಗಿದೆ.

ಈ ಭಾಗದಲ್ಲಿನ ಹೋಟೆಲ್‌, ಢಾಬಾಗಳಲ್ಲಿ ಮಾಂಸಾಹಾರ ತಯಾರಿಸುವಂತಿಲ್ಲ. ಜ.30ರಿಂದ ಫೆ.20ರವರೆಗೆ ಇದು ಅನ್ವಯವಾಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ಗಿರಿನಾಥ್‌ ತಿಳಿಸಿದ್ದಾರೆ.  

ಜಪಾನ್‌ನೊಂದಿಗೆ ಐಎಎಫ್‌ನ ಜಂಟಿ ವಾಯು ರಕ್ಷಣಾ ಸಮರಾಭ್ಯಾಸ, 'ವೀರ್ ಗಾರ್ಡಿಯನ್ 2023ರ ವಿಶೇಷತೆ ಗೊತ್ತೆ ? 

ಏರೋ ಇಂಡಿಯಾಗೆ’ ಸಂಬಂಧಿಸಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ. ಶುಚಿತ್ವದ ಬಗ್ಗೆ ಹೆಚ್ಚು ನಿಗಾವಹಿಸಲಾಗಿದೆ. ಈ ಬಾರಿ 258 ಇ–ಶೌಚಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಯಲಹಂಕ ವಾಯುನೆಲೆಯ ಸುತ್ತಮುತ್ತಲಿನ ಎಲ್ಲ ಕೆರೆಗಳಲ್ಲಿ ಮೀನುಗಾರಿಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದಿದ್ದಾರೆ.   

ಲ್ಯಾಂಡ್‌ಫಿಲ್‌ಗಳಲ್ಲಿ ರಾತ್ರಿ ಮಾತ್ರ ಕೆಲಸ ಮಾಡಿ ಮೇಲ್ಭಾಗದಲ್ಲಿ ಮಣ್ಣು ಹಾಕಿ ಮುಚ್ಚಲಾಗುತ್ತದೆ. ಯಲಹಂಕ ವಲಯ ವಿಭಾಗವು ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದೆ ಎಂದಿದ್ದಾರೆ.    

ಬಜೆಟ್‌ನಲ್ಲಿ ಖಾದಿ ಉದ್ಯಮಕ್ಕೆ ಭರ್ಜರಿ ಕೊಡುಗೆ: ಬೊಮ್ಮಾಯಿ