News

ಪಿಎಂ ಕಿಸಾನ್‌: ಈ ತಪ್ಪು ಮಾಹಿತಿ ನೀಡಿ ಹಣ ಪಡೆದವರಿಗೆ ನೋಟಿಸ್ ಕಳಿಸಲು ಸಿದ್ಧತೆ ನಡೆಸಿದ ಸರ್ಕಾರ

30 April, 2022 2:27 PM IST By: Maltesh

PM Kisan: ಪಿಎಂ ಕಿಸಾನ್ ಕುರಿತು ರೈತರಿಗೊಂದು ಮಹತ್ವದ ಮಾಹಿತಿ ಲಭ್ಯವಾಗಿದ್ದು, ಪಿಎಂ ಕಿಸಾನ್ (PM Kisan ) ಹಣವನ್ನು ಅನ್ಯ ಮಾರ್ಗಗಳ ಮೂಲಕ ಪಡೆಯುತ್ತಿರುವ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆಯ ಚಾಟಿ ಬೀಸಿದೆ. ಹೌದು ಇತ್ತೀಚಿಗೆ ಕೆಲ ಫಲಾನುಭವಿಗಳು ಒಂದೇ ಜಮೀನಿನ ಹೆಸರಿನ ಮೇಲೆ ಇಬ್ಬಿಬ್ಬರು  ಪಿಎಂ ಕಿಸಾನ್ (PM Kisan ) ಹಣವನ್ನು ಪಡೆದಿರುವುದು ಖಾತ್ರಿಯಾಗಿದೆ.  ಇದನ್ನು ಗಂಭಿರವಾಗಿ ಪರಿಗಣಿಸಿರುವ ಕೇಂದ್ರವು ಅನರ್ಹ ಫಲಾನುಭವಿಗಳ ಪತ್ತೆಗೆ ತೀವ್ರವಾದ ಪರಿಶೀಲನೆಯನ್ನು ನಡೆಸಿದೆ ಎನ್ನಲಾಗುತ್ತಿದೆ.

ಗುಡ್‌ ನ್ಯೂಸ್‌: ಹೈನುಗಾರರಿಗೆ ಕ್ರೆಡಿಟ್‌ ಕಾರ್ಡ್‌! ದೇಶದಲ್ಲೆ ಮೊದಲು

ಇನ್ನು ಒಂದೇ ಜಮೀನಿನ ಹೆಸರಿನ ಗಂಡ ಹಾಗೂ ಹೆಂಡತಿ ಹಣ ಪಡೆದಿರುವ ಹಲವಾರು ಸಂಗತಿಗಳು ಸರ್ಕಾರಿ ದಾಖಲೆಗಳ ಮೂಲಕ ಬಹಿರಂಗೊಂಡಿವೆ ಎಂದು ವರದಿಗಳಾಗಿವೆ. ಈ ರೀತಿಯಲ್ಲಿ ಕಾನೂನು ಹಾಗೂ ನಿಯಮಗಳಿಗೆ ವಿರುದ್ಧವಾಗಿ ಹಣ ಪಡೆದವರ ವಿರುದ್ಧ ಸರ್ಕಾರ ನೋಟೀಸ್ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಸೂಕ್ತ ವಿವರಣೆ ನೀಡದ ಹೊರತು ಅವರನ್ನು ಯೋಜನೆಯಿಂದ ಅನರ್ಹಗೊಳಿಸುವದನ್ನು ಬಿಟ್ಟು ಬೇರೆ ಮಾರ್ಗವಿಲ್ಲ ಎಂದು ಹೇಳಲಾಗುತ್ತಿದೆ.

ಕೃಷಿ ಭೂಮಿ ಅಜ್ಜ ಅಥವಾ ತಂದೆ ಅಥವಾ ಇತರ ಕುಟುಂಬದ ಸದಸ್ಯರ ಹೆಸರಿನಲ್ಲಿದ್ದರೂ ರೈತರು ಪಿಎಂ ಕಿಸಾನ್ ಮೂಲಕ ಪ್ರಯೋಜನ ಪಡೆಯುವಂತಿಲ್ಲ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಸರ್ಕಾರವು ಮುಂದಾಗಿದ್ದು ಅನರ್ಹ ರೈತರ ಹೆಸರನ್ನು ಪತ್ತೆ ಮಾಡುತ್ತಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ನವೀಕರಣ: ಡೈರಿ ರೈತರಿಗೆ 15 ಲಕ್ಷ ಮಂಜೂರು!

 PM ಕಿಸಾನ್ (PM Kisan ) ಸಾಮಾಜಿಕ ಲೆಕ್ಕ ಪರಿಶೋಧನೆ

ಗ್ರಾಮ ಸಭೆಯ ಮೂಲಕ ಲೆಕ್ಕ ಪರಿಶೋಶೋಧನೆ ನಡೆಯಲಿದೆ ಎಂದು ದಿ ಹಿಂದೂಸ್ತಾನ್ ಪ್ರಕಟಿಸಿದ ವರದಿಯಲ್ಲಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅರ್ಹ ಫಲಾನುಭವಿಗಳ ಹೆಸರನ್ನು ಸರ್ಕಾರವು ಮರುಪರಿಶೀಲಿಸುತ್ತದೆ ಮತ್ತು ಅನರ್ಹ ರೈತರ ಹೆಸರನ್ನು ತೆಗೆದುಹಾಕುತ್ತದೆ.

PM ಕಿಸಾನ್ 11ನೇ ಕಂತು ಕೆಲವೇ ದಿನಗಳು ಬಾಕಿ ಇವೆ..ಈ ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ

ವರದಿಯ ಪ್ರಕಾರ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ದೇವೇಶ್ ಚತುರ್ವೇದಿ ಗುರುವಾರ (21 ಏಪ್ರಿಲ್ 2022) ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ಯೋಜನೆಯ ಲಾಭ ಪಡೆಯುತ್ತಿರುವ ಎಲ್ಲ ಅನರ್ಹ ರೈತರ ಪಟ್ಟಿಯನ್ನು ಗ್ರಾಮಸಭೆ ಮಾಡಲಿದೆ ಎಂದು ವರದಿ ತಿಳಿಸಿದೆ. ನಂತರ ಸರ್ಕಾರದ ಯೋಜನೆಯಿಂದ ವಂಚಿತರಾದ ರೈತರನ್ನು ಅವರ ಜಾಗಕ್ಕೆ ಸೇರಿಸಲಾಗುವುದು.ಸರ್ಕಾರವು ಅನರ್ಹ ರೈತರ ಹೆಸರನ್ನು ತೆಗೆದುಹಾಕುವುದಲ್ಲದೆ,  ಸತ್ತವರ ಹೆಸರನ್ನು ಪಟ್ಟಿಯಿಂದ ಅಳಿಸುತ್ತದೆ.

ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಸಾಮಾಜಿಕ ಲೆಕ್ಕ ಪರಿಶೋಧನೆಗಾಗಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಆರು ಸದಸ್ಯರ ಸಮಿತಿಯನ್ನು ರಚಿಸಲಾಗುವುದು ಎಂಬುದನ್ನು ಗಮನಿಸಬೇಕು.

ಸಮಿತಿಯಲ್ಲಿ ಯಾರು ಇರುತ್ತಾರೆ..?

ಮುಖ್ಯ ಅಭಿವೃದ್ಧಿ ಅಧಿಕಾರಿ

ಉಪ ಕೃಷಿ ನಿರ್ದೇಶಕರು

ಜಿಲ್ಲಾ ಕೃಷಿ ಅಧಿಕಾರಿಗಳು

ಜಿಲ್ಲಾ ಅಭಿವೃದ್ಧಿ ಅಧಿಕಾರಿ

ಎಸ್‌ಡಿಎಂಗಳನ್ನು ಒಳಗೊಂಡಿರುತ್ತದೆ.

ಇದು ಡಿಎಂ ಅಥವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿರುತ್ತದೆ.

ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡುವಂತೆ ಹೈಕೋರ್ಟ್‌ ಸೂಚನೆ

ಮೀನುಗಾರರಿಗೆ ಆರ್ಥಿಕ ನೆರವು ನೀಡಲಾಗುವುದು- ಸಚಿವ ಎಸ್. ಅಂಗಾರ

PM Kisan

ಪಿಎಂ ಕಿಸಾನ್ ಯೋಜನೆಗೆ ಯಾರು ಅನರ್ಹರು?

 ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತ ಅಧಿಕಾರಿಗಳು (ಗುಂಪು ಡಿ ನೌಕರರನ್ನು ಹೊರತುಪಡಿಸಿ)

 ವೈದ್ಯರು, ವಕೀಲರು, ಎಂಜಿನಿಯರ್‌ಗಳಂತಹ ವೃತ್ತಿಪರರು.

ತಿಂಗಳಿಗೆ ರೂ 10,000 ಕ್ಕಿಂತ ಹೆಚ್ಚಿನ ಪಿಂಚಣಿ ಹೊಂದಿರುವ ನಿವೃತ್ತ ಪಿಂಚಣಿದಾರರು

ಒಂದೇ ಕುಟುಂಬದ ಒಂದಕ್ಕಿಂತ ಹೆಚ್ಚು ಫಲಾನುಭವಿಗಳು

Tractors Subsidy! ಸರ್ಕಾರದಿಂದ ನಿಮಗೆ 50% Tractor ಖರೀದಿಸಲು Subsidy ಸಿಗಲಿದೆ!

ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!

 ಕಳೆದ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದವರು.

PM ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ

ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಲು, ವೆಬ್‌ಸೈಟ್‌ಗೆ ಹೋಗಿ ಮತ್ತು ಮುಖಪುಟದಲ್ಲಿ ''ಫಾಮರ್ಸ್ ಕಾರ್ನರ್' ಎಂದು ಹುಡುಕಿ. ನಂತರ ' ಫಲಾನುಭವಿಗಳ ಪಟ್ಟಿ 'ಮೇಲೆ ಕ್ಲಿಕ್ ಮಾಡಿ. ಈಗ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಗ್ರಾಮಗಳಂತಹ ಅಗತ್ಯವಿರುವ ವಿವರಗಳನ್ನು ನಮೂದಿಸಿ. ಪಡೆಯಿರಿ ವರದಿಯ ಮೇಲೆ ಕ್ಲಿಕ್ ಮಾಡಿ. ಫಲಾನುಭವಿಗಳ ಪಟ್ಟಿಯು ಪರದೆಯ ಮೇಲೆ ಕಾಣಿಸುತ್ತದೆ, ಆದ್ದರಿಂದ ಅದರಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ.