1. ಸುದ್ದಿಗಳು

ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಆರಂಭ

Paddy

Paddy

2020-21ನೇ ಸಾಲಿನ ಕನಿಷ್ಠ ಬೆಂಬಲಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಸಲು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.

ರಾಜ್ಯ ಸರ್ಕಾರದ ಆದೇಶದಂತೆ 2020-21ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಗರಿಷ್ಠ 75 ಕ್ವಿಂಟಲ್ (ಪ್ರತಿ ಎಕರೆಗೆ 25 ಕ್ವಿಂಟಲ್‌ನಂತೆ) ಭತ್ತ - ಸಾಮಾನ್ಯ ಪ್ರತಿ ಕ್ವಿಂಟಲ್‍ಗೆ 1,868 ಗಳು ಹಾಗೂ ಭತ್ತ – ಗ್ರೇಡ್-ಎ ಪ್ರತಿ ಕ್ವಿಂಟಲ್‍ಗೆ 1,888 ಗಳಂತೆ ಖರೀದಿಸಲು ತಾಲ್ಲೂಕು ಕೇಂದ್ರ ಗಳಲ್ಲಿ ನೋಂದಣಿ ಕೇಂದ್ರ ತೆರೆಯಲಾಗಿದೆ.

ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು ಮಳಿಗೆ ರಾಜೇಂದ್ರ ಗಂಜ್, ರಾಯಚೂರು ಮೊಬೈಲ್‌ 9916624776. ಮಾನ್ವಿ ತಾಲ್ಲೂಕಿನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು ಮಳಿಗೆ ಟಿಎಪಿಸಿಎಂಎಸ್ ಆವರಣ, ಮೊ: 8722156984. ಸಿಂಧನೂರು ತಾಲ್ಲೂಕಿನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು ಮಳಿಗೆ ಕೆಎಸ್‍ಡಬ್ಯ್ಲೂಸಿ ಗೋದಾಮು ಆವರಣ, ಮೊ: 9448765407. ಲಿಂಗಸೂಗೂರು ತಾಲ್ಲೂಕಿನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು ಮಳಿಗೆ ಎಪಿಎಂಸಿ. ಆವರಣ, ಮೊ: 9448765407. ಹಾಗೂ ದೇವದುರ್ಗ ತಾಲ್ಲೂಕಿನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು ಮಳಿಗೆ ಎಪಿಎಂಸಿ. ಆವರಣ, ಮೊ: 9448184791 ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ. ಸಿಂಧನೂರು ತಾಲ್ಲೂಕಿನ ಜವಳಗೇರಾ ರೈತ ಸಂಪರ್ಕ ಕೇಂದ್ರ, ಸಿರವಾರ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರ, ಸಿರವಾರ ತಾಲೂಕಿನ ಕವಿತಾಳ ರೈತ ಸಂಪರ್ಕ ಕೇಂದ್ರದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ.

ಕೃಷಿ ಇಲಾಖೆಯವರು ಸಿದ್ದಪಡಿಸಿದ ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಿರುವ ಬೆಳೆಯ ಆಧಾರದ ಮೇಲೆ ರೈತರ ಹೆಸರು ನೋಂದಾಯಿಸಲಾಗುವುದು. ಒಂದು ವೇಳೆ ಫ್ರೂಟ್ಸ್ ತಂತ್ರಾಂಶದಲ್ಲಿ ತೊಂದರೆಯಿದ್ದಲ್ಲಿ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಂತ್ರಾಂಶದಲ್ಲಿ ಸರಿ ಪಡಿಸಿಕೊಂಡು ನೋಂದಣಿ ಮಾಡಿಕೊಳ್ಳಬೇಕು.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತವನ್ನು ಖರೀದಿಸಲು ಮಾರ್ಚ್ 7 ರವರೆಗೆ ನೋಂದಣಿ ಮಾಡಿಕೊಂಡು ರೈತರಿಂದ ಭತ್ತ ಖರೀದಿಸಲಾಗುವುದು.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.