1. ಸುದ್ದಿಗಳು

ರೈತನಿಂದ ಎತ್ತಿನ ಜನ್ಮದಿನ ಆಚರಣೆ; ರೈತನ ಪ್ರೀತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತ!

Kalmesh T
Kalmesh T
ರೈತನಿಂದ ಎತ್ತಿನ ಜನ್ಮ ದಿನ ಆಚರಣೆ

ಇಲ್ಲೊಬ್ಬ ರೈತ ತನ್ನ ಪ್ರೀತಿಯ ಎತ್ತಿನ ಜನ್ಮ ದಿನ ಆಚರಣೆ ಮಾಡುವ ಮೂಲಕ ಸದ್ಯ ಸುದ್ದಿಯಲ್ಲಿದ್ದಾರೆ. ಇಲ್ಲಿದೆ ಪೂರ್ತಿ ವಿವರ.

ಇದನ್ನೂ ಓದಿರಿ: ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ‘ಗ್ರೀನ್ ಅಂಬಾಸಿಡರ್ʼ ಗೌರವ: ಸಚಿವ ಸ್ಥಾನಮಾನ ನೀಡುವುದಾಗಿ ಸಿಎಂ ಭರವಸೆ!

ಧಾರವಾಡ ಜಿಲ್ಲೆ ದೇವರಹುಬ್ಬಳ್ಳಿಯಲ್ಲಿನ ಅನ್ನದಾತ ರೈತರೊಬ್ಬರು ತಮ್ಮ ಮನೆಗಾಗಿ ಜೋವನಪೂರ್ತಿ ದುಡಿದ ಎತ್ತಿನ ಜನ್ಮದಿನ ಆಚರಣೆ ಮಾಡಿದ್ದಾರೆ.
ಜನ್ಮ ದಿನ ಆಚರಿಸುವ ಮೂಲಕ ರೈತ ಮಿತ್ರ ಎತ್ತಿಗೆ ಗೌರವ ಸಲ್ಲಿಸಿದ್ದಾರೆ.

ನಾಗರಾಜ್ ಓಮಗಣ್ಣವರ ಕುಟುಂಬಸ್ಥರು ಎತ್ತಿಗೆ ವಿಶೇಷ ಪೂಜೆ ಮಾಡಿ, ಆರತಿ ಬೆಳಗಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡುವ ಮೂಲಕ‌ ವಿಶಿಷ್ಟವಾಗಿ ಜನ್ಮ ದಿನ ಆಚರಿಸಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ನಾಗರಾಜ್ ಎತ್ತನ್ನು ಕಸಾಯಿಖಾನೆಗೆ ಬಿಟ್ಟು ಬಂದಿದ್ದರು.

ಭಾರತದಿಂದ 180,000 ಟನ್ ಗೋಧಿಯನ್ನು ಖರೀದಿಸಲಿದೆ ಈಜಿಪ್ಟ್!

ಆದರೆ ಕೆಲವು ಸಮಯದ ನಂತರ ಮನಸ್ಸಿಗೆ ಅಸಮಾಧಾನವಾಗಿ ಕಸಾಯಿಖಾನೆಯಿಂದ ಎತ್ತನ್ನು ಧಾರವಾಡ ತಾಲೂಕಿನ ದೇವರಹುಬ್ಬಳ್ಳಿ ಮರಳಗೆ ತಂದಿದ್ದಾರೆ.
ಅಂದಿನಿಂದ ರೈತ ನಾಗರಾಜ್ ಎತ್ತಿನ ಜನ್ಮ ದಿನ ಆಚರಣೆಯನ್ನು ಮಾಡುತ್ತಾ ಬರುತ್ತಿದ್ದಾರೆ ಎಂದು ಹೇಳುತ್ತಾರೆ ಅವರು.

ಇನ್ನು ಎತ್ತು ಮೂರು ವರ್ಷಗಳಿಂದ ಮನೆತನದ ವ್ಯವಸಾಯದಲ್ಲಿ ಭಾಗಿಯಾಗಿ ಮನೆಗಾಗಿ ದುಡಿದಿದೆ. ಎತ್ತಿನ ಜೊತೆಗೆ ಇವರ ಕುಟುಂಬಕ್ಕಿರುವ ಆತ್ಮೀಯತೆಗೆ ಇದು ಸಾಕ್ಷಿಯಾಗಿದೆ.

Published On: 01 July 2022, 12:45 PM English Summary: Ox birthday celebration by farmer

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.