1. ಸುದ್ದಿಗಳು

ಕೃಷಿ ಭೂಮಿಯ ಮಣ್ಣಿನಲ್ಲಿ ಇದ್ದರೆ ಸಾವಯವ ಇಂಗಾಲ; ಬೆಳೆಗಳಿಗೆ ಅದುವೇ ಭುಜಬಲ

Basavaraja KG
Basavaraja KG

ಪ್ರಸಕ್ತ ವರ್ಷದ ರಾಜ್ಯದ ಆಯವ್ಯಯದಲ್ಲಿ ಅಂದರೆ ಬಜೆಟ್‌ನಲ್ಲಿ, ಕೃಷಿ ಭೂಮಿಯಲ್ಲಿರುವ ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಿಸಲು ರಾಜ್ಯ ಸರ್ಕಾರ 75 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಇಲ್ಲಿ ಗಮನಿಸಬೇಕಿರುವ ಮುಖ್ಯ ಅಂಶವೇನೆAದರೆ ತಡವಾಗಿಯಾದರೂ ಸರ್ಕಾರಕ್ಕೆ ಮಣ್ಣಿನ ಗುಣಮಟ್ಟ ಮತ್ತು ಅದರಲ್ಲಿನ ಸಾವಯವ ಇಂಗಾಲದ ಮಹತ್ವದ ಅರಿವಾಗಿರುವುದು. ಆದರೆ, ಮತ್ತೊಂದು ಆಸಕ್ತಿದಾಯಕ ವಿಷಯವೇನೆಂದರೆ ಕೋಟಿ ಕೋಟಿ ರೂಪಾಯಿ ಬಳಸಿ ಮಣ್ಣಿನಲ್ಲಿರುವ ಇಂಗಾಲವನ್ನು ಹೆಚ್ಚಿಸಲು ಸಾಧ್ಯವಿಲ್ಲ. ಹಾಗೇ ಇದು ಒಂದು ದಿನ, ತಿಂಗಳು ಅಥವಾ ಒಂದೇ ವರ್ಷದಲ್ಲಿ  ಆಗುವಂತಹ ಕೆಲಸವೂ ಅಲ್ಲ. ಇದಕ್ಕೆ ಹತ್ತಾರು ವರ್ಷಗಳ ಶ್ರಮ, ಶ್ರದ್ಧೆ ಬೇಕು. ಅದಕ್ಕೇನಿದ್ದರೂ ರೈತರು ಮನಸು ಮಾಡಬೇಕಷ್ಟೇ.

ಹಾಗಾದರೆ ಈ ಸಾವಯವ ಇಂಗಾಲ ಎಂದರೇನು? ಮಣ್ಣಿನಲ್ಲಿರುವ ಸಾವಯವ ಇಂಗಾಲ ಎಂದರೆ, ನಮ್ಮ ಸುತ್ತ ಇರುವ ಸಾವಯವ ವಸ್ತುಗಳು ಅಥವಾ ತ್ಯಾಜ್ಯವು ಕೃಷಿ ಭೂಮಿಯ ಮಣ್ಣಿನಲ್ಲಿ ಬೆರೆತು, ಕೊಳೆಯುವುದರಿಂದ ಸಾವಯವ ಇಂಗಾಲ ಉತ್ಪತ್ತಿಯಾಗುತ್ತದೆ. ಮಣ್ಣಿನಲ್ಲಿರುವ ಹತ್ತಾರು ರಾಸಾಯನಿಕಗಳ ಪೈಕಿ ಇಂಗಾಲವು ಅತ್ಯಂತ ಪ್ರಮುಖ ಅಂಶವಾಗಿದ್ದು, ಬೆಳೆಗಳ ಬೆಳವಣಿಗೆಯಲ್ಲಿ ಹಾಗೂ ಮಣ್ಣಿನ ಆರೋಗ್ಯ, ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಇದು ಬಹುಮುಖ್ಯ ಪಾತ್ರ ವಹಿಸುತ್ತದೆ.

ಆಂಗ್ಲ ಲೇಖಕ, ಕೃಷಿ ಬರಹಗಾರ ಹಾಗೂ ಮಣ್ಣು ತಜ್ಞ ಕ್ರಿಸ್ಟೆನ್ ನಿಕೋಲಸ್ ಅವರು ಹೇಳುವಂತೆ, “ನಮ್ಮ ಮಣ್ಣಿನಲ್ಲಿ ಕೋಟ್ಯಂತರ ಜೀವಾಣುಗಳಿವೆ. ಆದರೆ, ಸಾವಯವ ಪದ್ಧತಿ ಬಿಟ್ಟು ರಾಸಾಯನಿಕ ಬಳಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಈ ಜೀವಾಣುಗಳು ಹಸಿವು, ದಾಹದಿಂದ ಬಳಲುತ್ತಿವೆ. ಆಹಾರ, ನೀರು ಮತ್ತು ನೆರಳಿಲ್ಲದೆ ನಾಶವಾಗುತ್ತಿವೆ. ಈ ಮಣ್ಣು ಜೀವಿಗಳಿಗೆ ಸೂಕ್ತ ಆಹಾರ, ನೀರು ನೀಡಿ ಅವುಗಳು ನೆಮ್ಮದಿಯಿಂದ ಬದುಕಿ, ಬೆಳೆಯಲು ಅಗತ್ಯವಿರುವ ವಾತಾವರಣವನ್ನು ಸೃಷ್ಟಿಸುವುದು ನಮ್ಮೆಲ್ಲರ, ಅದರಲ್ಲೂ ಮುಖ್ಯವಾಗಿ ಕೃಷಿಕರ ಮೂಲ ಗುರಿಯಾಗಬೇಕು.

ನೆಲದ ಮೇಲಿರುವ ನಮಗೆಲ್ಲರಿಗೂ ನೆಲದೊಳಗಿನ ಈ ಜೀವಿಗಳೇ ಆಧಾರ. ಇವಿಲ್ಲದೆ ನಾವಿಲ್ಲ. ಪೌಶ್ಟಿಕ ಆಹಾರ ಮತ್ತು ತಂಪಾದ ನೆಲೆಯನ್ನಷ್ಟೇ ಮಣ್ಣಿನ ಜೀವಾಣುಗಳು ನಮ್ಮಿಂದ ನಿರೀಕ್ಷಿಸುವುದು. ಈ ಮಣ್ಣುಜೀವಿಗಳು ಬದುಕುಳಿಯಲು ಸಮೃದ್ಧ ಆಹಾರ ಕೊಡಬೇಕು. ಎರೆಹುಳು ಮತ್ತಿತರ ಮಣ್ಣು ಜೀವಿಗಳಿಗೆ ಸಾವಯವ ಗೊಬ್ಬರವೇ ಉತ್ತಮ ಆಹಾರ. ಮಣ್ಣಲ್ಲಿ ಕೊಳೆತು ಕಳಿಯುವ ಈ ಗೊಬ್ಬರ ಮಣ್ಣುಜೀವಿಗಳಿಗೆ ಮೃಷ್ಟಾನ್ನದಂತೆ. ಬಳಿಕ ಇದುವೇ ನಮ್ಮ ನಿಮ್ಮೆಲ್ಲರ ಬೆಳೆಗಳನ್ನು ಕಾಯುವ, ಕಾಪಾಡುವ ಸಮೃದ್ಧ ಇಂಗಾಲವಾಗಿ ಮಾರ್ಪಡುತ್ತದೆ. 

ಮಣ್ಣಿಗೆ ಸಾವಯವ ಅಂಶವಿರುವ ಗೊಬ್ಬರ ಸೇರಿದಾಗ, ಮಣ್ಣು ಸಡಿಲಗೊಳ್ಳುವ ಜೊತೆಗೆ ಮೃದುವಾಗುತ್ತದೆ. ಮಣ್ಣಿನ ಕಣಕಣಗಳು ಪರಸ್ಪರ ಕೂಡಿಕೊಳ್ಳುತ್ತವೆ. ಮಣ್ಣಲ್ಲಿ ಗಾಳಿ ಪ್ರವೇಶಿಸಿ ಮಣ್ಣಿಗೆ ನವ ಚೈತನ್ಯ ಬರುತ್ತದೆ. ಬೀಳುವ ಮಳೆನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಮಣ್ಣಲ್ಲಿ ಹೆಚ್ಚಾಗುತ್ತದೆ. ಇದರಿಂಧ ಕೃಷಿ ಭೂಮಿಯಲ್ಲಿ ತೇವಾಂಶ ಹೆಚ್ಚುಕಾಲ ಉಳಿಯುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಈ ಜೀವಿಗಳು ಬದುಕುಳಿಯಲು ಪೂರಕ ವಾತಾವರಣ ಸೃಷ್ಟಿಯಾಗುತ್ತದೆ.  

ಸಾವಯವ ಗೊಬ್ಬರವನ್ನು ತಿಂದು ಬದುಕುವ ಜೀವಿಗಳು ಕ್ರಮೇಣ ಗೊಬ್ಬರವನ್ನು ಗಿಡದ ಬೆಳವಣಿಗೆಗೆ ಅತ್ಯಗತ್ಯವಾದ ಪೋಷಕಾಂಶಗಳಾಗಿ ಪರಿವರ್ತಿಸುತ್ತವೆ. ಈ ವೇಳೆ ಮಣ್ಣಿನ ಮೇಲ್ಪದರದಲ್ಲಿ ಹ್ಯೂಮಸ್ ರೂಪುಗೊಳ್ಳುತ್ತದೆ. ಈ ಹ್ಯೂಮಸ್ ಮಣ್ಣಿನಲ್ಲಿ ಇಂಗಾ¯ಲದ ಅಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ನಮ್ಮ ಮಣ್ಣುಗಳಲ್ಲಿ ಇಂಗಾಲಾಂಶ ಹೆಚ್ಚಾದಾಗ, ನಮ್ಮ ಹೊಲ ತೋಟಗಳು ಸಕಲ ಪೋಷಕಾಂಶಗಳನ್ನೂ ಒಳಗೊಂಡ ಶಕ್ತಿಕೇಂದ್ರಗಳಾಗುತ್ತವೆ.

ಮಣ್ಣಿನ ಇಂಗಾಲದ ಪ್ರಯೋಜನಗಳೇನು?

* ಮರ-ಗಿಡಗಳಿಂದ ಉದುರಿದ ಎಲೆಗಳು, ಒನಗಿದ ಸಸ್ಯ, ಮರ, ರೆಂಬೆ-ಕೊAಬೆಗಳು, ಬೇರುಗಳು ಮಣ್ಣಿನಲ್ಲಿ ಕಒಳೆತು, ಮಣ್ಣುಸ್ನೇಹಿ ಕೀಟಗಳು, ಜೀವಾಣುಗಳು ಅದನ್ನು ಸೇವಿಸಿ, ಜೀರ್ಣಿಸಿಕೊಂಡು ವಿಸರ್ಜಿಸಿದಾಗ ಮಣ್ಣಿನಲ್ಲಿ ಇಂಗಾಲ ಸೇರಿಸಿಕೊಳ್ಳುತ್ತದೆ.

* ಇಂಗಾಲದ ಅಂಶ ಹೆಚ್ಚಾಗಿರುವ ಮಣ್ಣುಗಳಲ್ಲಿ ಒಂದೆಡೆ ಮಣ್ಣುಜೀವಿಗಳ ವೈವಿಧ್ಯತೆ ಹಾಗೂ ಸಂಖ್ಯೆ ಹೆಚ್ಚಾದಂತೆ ಗಿಡ, ಬೆಳೆಗಳ ಬೆಳವಣಿಗೆ ಹಾಗೂ ಇಳುವರಿಯಲ್ಲಿ ಸುಧಾರಣೆ ಕಾಣಬಹುದು.

* ಗಿಡದ ಬೆಳವಣಿಗೆಗೆ ಪೂರಕವಾಗಿರುವ ಅಗತ್ಯ ಪೋಷಕಾಂಶಗಳು ಹಂತಹಂತವಾಗಿ ಗಿಡದ ಬೇರುಗಳ ಮೂಲಕ ರವಾನೆಯಾಗುತ್ತದೆ. 

* ಇಂಗಾಲ ಹೆಚ್ಚಾದರೆ, ಹೆಚ್ಚು ಪ್ರಮಾಣದಲ್ಲಿ ನೀರನ್ನು ಹಿಡಿದಿಡುವ ಸಾಮರ್ಥ್ಯ ಮಣ್ಣಿಗೆ ಬರುತ್ತದೆ. ಜೊತೆಗೆ ಗಿಡಗಳಿಗೆ ಅಗತ್ಯವಿದ್ದಾಗ ಮಾತ್ರ ನೀರು ಬಳಕೆಯಾಗುತ್ತದೆ. ಈ ಮೂಲಕ ಬರಗಾಲದಲ್ಲಿಯೂ ಸಹ ಗಿಡಗಳಿಗೆ ಅಗತ್ಯ ತೇವಾಂಶ ಸಿಗುತ್ತದೆ.

* ಮಣ್ಣಲ್ಲಿನ ಸಾವಯವ ಇಂಗಾಲದ ಅಂಶ ಮಣ್ಣಿನ ರಸಸಾರವನ್ನು ಸಮತೋಲನದಲ್ಲಿ ಇರಿಸುತ್ತದೆ.

* ಇಂಗಾಲದ ಅಂಶವಿರುವ ಮಣ್ಣು ಇತರೆ ಮಣ್ಣುಗಳಿಗಿಂತಾ ಹೆಚ್ಚು ದಟ್ಟವಾದ (ಕಪ್ಪು ಬನ್ಣ) ಬಣ್ಣದಲ್ಲಿರುತ್ತದೆ ಮತ್ತು ಹೆಚ್ಚು ಫಲವತ್ತಾಗಿರುತ್ತದೆ.

* ಸಾವಯವ ಇಂಗಾಲದ ಅಂಶ ಒಂದು ಬಗೆಯ ಅಂಟಾಗಿ ಮಾರ್ಪಟ್ಟು, ಮಣ್ಣಿನ ಕಣಕಣಗಳನ್ನು ಒಂದುಗೂಡಿಸುತ್ತದೆ. ಇದರಿಂದ ಮಣ್ಣಿನ ಸವಕಳಿ ತಪ್ಪುತ್ತದೆ.

;

* ಪೋಷಕಾಂಶಗಳಾದ ಪೊಟ್ಯಾಷಿಯಂ, ಕ್ಯಾಲ್ಷಿಯಂ ಮತ್ತು ಮೆಗ್ನೇಷಿಯಂ ಜೊತೆಗೂಡುವುದರಿಂದ ಅವುಗಳು ಸೋರಿಹೋಗುವುದು ತಪ್ಪುತ್ತದೆ.

* ಮಣ್ಣಲ್ಲಿ ಇಂಗಾಲದೊಂದಿಗೆ ಸೃಷ್ಟಿಯಾಗುವ ಹ್ಯುಮಸ್ ಅಂಶ ಗಿಡಗಳ ಬೆಳವಣಿಗೆಗೆ ಪೂರಕವಾಗಿದೆ.

* ಭೂಮಿಯ ಇಂಗಾಲ ಚಕ್ರದಲ್ಲಿ ಮಣ್ಣಲ್ಲಿನ ಸಾವಯವ ವಸ್ತುವೇ ಪ್ರಧಾನ ಅಂಶವಾಗಿದ್ದು, ಇದರಿಂದ ಮಣ್ಣಲ್ಲಿ ಹೆಚ್ಚಾಗುವ ಮಣ್ಣು ಜೀವಿಗಳು ಮಾಲಿನ್ಯಕಾರಕ ವಸ್ತುಗಳನ್ನು ಹೀರಿ ವಾತಾವರಣವನ್ನು ಶುದ್ಧಗೊಳಿಸುತ್ತವೆ.

ಮೂಲ: ಕ್ರಿಸ್ಟೈನ್ ನಿಕೋಲಸ್

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.