News

7th Pay Big Update: ಈಗ ತುಟ್ಟಿಭತ್ಯೆ ಜೊತೆಗೆ HRA ಯಲ್ಲಿ ಕೂಡ ಹೆಚ್ಚಳ! ಎಷ್ಟು ಶೇಕಡ ಗೊತ್ತೆ?

21 June, 2022 9:40 AM IST By: Kalmesh T
Now the increase in the HRA along with the tuition allowance

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ. ಈಗ ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಮನೆ ಬಾಡಿಗೆ ಭತ್ಯೆ ಕೂಡ ಹೆಚ್ಚಾಗಬಹುದು ಎಂದು ಬಹುತೇಕ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿರಿ: 

ಬ್ರೇಕಿಂಗ್‌: ಜುಲೈ 1 ರಿಂದ ದೇಶಾದ್ಯಂತ ಪ್ಲಾಸ್ಟಿಕ್‌ ಬ್ಯಾನ್‌ಗೆ ಮೋದಿ ಸರ್ಕಾರ ನಿರ್ಧಾರ..!

ರೈತರಿಗೆ ಸಿಹಿಸುದ್ದಿ: ಪ್ರತಿ ಜಿಲ್ಲೆಯಲ್ಲೂ ಮಿನಿ "ಫುಡ್‌ ಪಾರ್ಕ್‌" ಸ್ಥಾಪಿಸಲು ನಿರ್ಧಾರ..!

ಶೀಘ್ರದಲ್ಲೇ ಸರ್ಕಾರಿ ನೌಕರರ ತುಟ್ಟಿ ಭತ್ಯೆ (ಡಿಎ) 38 ರಿಂದ 39 ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಪ್ರಸ್ತುತ, ತುಟ್ಟಿಭತ್ಯೆ 34% ದರದಲ್ಲಿ ನೀಡಲಾಗುತ್ತಿದೆ. ತುಟ್ಟಿ ಭತ್ಯೆಯ ಹೆಚ್ಚಳದ ಜೊತೆಗೆ, ಇತರ ಭತ್ಯೆಗಳೂ ಕೂಡ ಏರಿಕೆಯಾಗುವುದು ನಿಚ್ಚಳವಾಗಿದೆ.

ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಒಂದು ಮಹತ್ವದ  ಸುದ್ದಿ ಪ್ರಕಟವಾಗಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಣದುಬ್ಬರ ಕೇಂದ್ರ ಸರ್ಕಾರಿ ನೌಕರರಿಗೆ (7th pay commission) ನೀಡಲಾಗುವ ಭತ್ಯೆಗಳಲ್ಲಿ ಭಾರಿ ಏರಿಕೆಗೆ ಕಾರಣವಾಗುತ್ತಿದೆ.

ಪ್ರತಿ 6 ತಿಂಗಳಿಗೊಮ್ಮೆ ತುಟ್ಟಿ ಭತ್ಯೆ ಏರಿಕೆಯಾಗುತ್ತಿದೆ, ಇನ್ನೊಂದೆಡೆ ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಮನೆ ಬಾಡಿಗೆ ಭತ್ಯೆ (HRA Hike) ಕೂಡ ಹೆಚ್ಚಾಗುವುದು ಬಹುತೇಕ ನಿಚ್ಚಳವಾಗಿದೆ. ಏಕೆಂದರೆ ಸರ್ಕಾರ ಈಗಾಗಲೇ ಈ ಕುರಿತು ಅಧಿಸೂಚನೆಯನ್ನು ಹೊರಡಿಸಿದೆ.

2023 ರ ವೇಳೆಗೆ, ಉದ್ಯೋಗಿಗಳ HRA ಹೆಚ್ಚಾಗಲಿದೆ. ಆದರೆ, ಪ್ರಸ್ತುತ ಇರುವ ಶೇ.34ರಷ್ಟು ತುಟ್ಟಿಭತ್ಯೆಯಲ್ಲಿ ಶೇ.16 ರಷ್ಟು ಏರಿಕೆ ಕಂಡುಬಂದರೆ ಮಾತ್ರ ಇದು ಸಂಭವಿಸಲಿದೆ. ಜುಲೈ 2022 ರ ನಂತರ, ತುಟ್ಟಿ ಭತ್ಯೆಯು ಶೇಕಡಾ 4-5 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಹಸು ಸಾಕಾಣಿಕೆಗೆ ₹60,249, ಎಮ್ಮೆ ಸಾಕಾಣಿಕೆಗೆ ₹40,783 ಸಹಾಯಧನ!

ಸಾಫ್ಟ್‌ವೇರ್ ಕೆಲಸ ಬಿಟ್ಟು ಕತ್ತೆ ಸಾಕಾಣಿಕೆ ಆರಂಭ; ಲೀ.ಹಾಲಿಗೆ 7ರಿಂದ 8 ಸಾವಿರ ಆದಾಯ!

ಶೀಘ್ರದಲ್ಲೇ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ) ಶೇ. 38 ರಿಂದ ಶೇ.39 ರಷ್ಟು ಹೆಚ್ಚಾಗಬಹುದು. ಪ್ರಸ್ತುತ, ತುಟ್ಟಿಭತ್ಯೆಯನ್ನು ಶೇ.34ರ ದರದಲ್ಲಿ ನೀಡಲಾಗುತ್ತಿದೆ. ತುಟ್ಟಿಭತ್ಯೆ (ಡಿಎ ಹೆಚ್ಚಳ) ಜೊತೆಗೆ, ಇತರ ಭತ್ಯೆಗಳೂ ಕೂಡ ಏರಿಕೆಯಾಗಳಿವೆ. ಇವುಗಳಲ್ಲಿ ಪ್ರಮುಖ ಮತ್ತು ಮುಖ್ಯವಾದದ್ದು ಮನೆ ಬಾಡಿಗೆ ಭತ್ಯೆ.

2021 ರಲ್ಲಿ, ಜುಲೈ ನಂತರ, ತುಟ್ಟಿ ಭತ್ಯೆ ಶೇ.25 ದಾಟುವುದರೊಂದಿಗೆ HRA ಅನ್ನು ಪರಿಷ್ಕರಿಸಲಾಗಿದೆ. ಜುಲೈ 2021 ರಲ್ಲಿ, ಸರ್ಕಾರವು ತುಟ್ಟಿಭತ್ಯೆಯನ್ನು ಶೇ.28ಕ್ಕೆ ಹೆಚ್ಚಿಸಿದೆ. ಪ್ರಸ್ತುತ ನಗರಗಳ ವರ್ಗೀಕರಣ ಆಧರಿಸಿ ಶೇ.27, ಶೇ.18 ಮತ್ತು ಶೇ.9ರ ದರದಲ್ಲಿ ಮನೆ ಬಾಡಿಗೆ ಭತ್ಯೆಯನ್ನು ನೀಡಲಾಗುತ್ತಿದೆ.

ಈಗ ಪ್ರಶ್ನೆಯೆಂದರೆ, ಡಿಎ ಹೆಚ್ಚಳದ ನಂತರ HRA ಯ ಮುಂದಿನ ಪರಿಷ್ಕರಣೆ ಯಾವಾಗ ಸಂಭವಿಸುತ್ತದೆ? ಎಂಬುದು. DoPT ಪ್ರಕಾರ, ಕೇಂದ್ರೀಯ ಉದ್ಯೋಗಿಗಳಿಗೆ ಮನೆ ಬಾಡಿಗೆ ಭತ್ಯೆಯ (HRA) ಪರಿಷ್ಕರಣೆಯು ತುಟ್ಟಿ ಭತ್ಯೆಯ (DA) ಆಧಾರದ ಮೇಲೆ ಮಾಡಲಾಗುತ್ತದೆ. ಮುಂದಿನ ವರ್ಷದವರೆಗೆ ತುಟ್ಟಿಭತ್ಯೆಯಲ್ಲಿ ಮೂರು ಬದಲಾವಣೆಗಳಾಗುವುದು ಖಚಿತ. ಅಂದರೆ ಜುಲೈ 2022 ರಲ್ಲಿ ಹೆಚ್ಚಿಸಿದ ನಂತರ, DA ಮೂರು ಪಟ್ಟು ಹೆಚ್ಚು ಹೆಚ್ಚಾಗುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ತುಟ್ಟಿ ಭತ್ಯೆ ಶೇ.50 ಗಡಿ ದಾಟುವ ಎಲ್ಲಾ ಸಾಧ್ಯತೆಗಳೂ ಇವೆ. ಇಂತಹ ಪರಿಸ್ಥಿತಿಯಲ್ಲಿ, 2023 ರಲ್ಲಿ HRA ಹೆಚ್ಚಾಗಲಿದೆ. ಪ್ರಸ್ತುತ ನಗರಗಳ ವರ್ಗಕ್ಕೆ ಅನುಗುಣವಾಗಿ ಶೇ.27, ಶೇ.18 ಮತ್ತು ಶೇ.9 ದರದಲ್ಲಿ ಎಚ್ಆರ್ಎ ನೀಡಲಾಗುತ್ತಿದೆ.

7th Pay : ಸಂಬಳದ ಹೊರತಾಗಿಯೂ ನೌಕರರಿಗೆ ದೊರೆಯಲಿದೆ ಲಾಭ! ಏನಿದು ಗೊತ್ತೆ!

EPFO: 6 ಕೋಟಿಗೂ ಹೆಚ್ಚು ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ; ಈ ದಿನದಂದು ನಿಮ್ಮ ಖಾತೆಗೆ ಬರಲಿದೆ ₹80,000!

ಡಿಎ ಜೊತೆಗೆ ಈ ಹೆಚ್ಚಳವು ಜುಲೈ 1, 2021 ರಿಂದ ಅನ್ವಯಿಸುತ್ತದೆ. 2015ರಲ್ಲಿ ನೀಡಿದ್ದ ಜ್ಞಾಪನಾ ಪತ್ರದಲ್ಲಿ ಡಿಎ ಜತೆಗೆ ಎಚ್ಆರ್ಎಯನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ ಎಂದು ಸರ್ಕಾರ ಹೇಳಿತ್ತು.

ಮನೆ ಬಾಡಿಗೆ ಭತ್ಯೆ ಶೇ.3 ರಷ್ಟು ಹೆಚ್ಚಾಗಲಿದೆ

ಮನೆ ಬಾಡಿಗೆ ಭತ್ಯೆಯಲ್ಲಿ ಮುಂದಿನ ಪರಿಷ್ಕರಣೆ ಶೇ.3ರಷ್ಟು ಆಗುವುದು ಬಹುತೇಕ ಖಚಿತವಾಗಿದೆ. ಎಚ್ಆರ್ಎಯನ್ನು ಈಗಿರುವ ಗರಿಷ್ಠ ದರವಾದ ಶೇ.27ರಿಂದ ಶೇ.30ಕ್ಕೆ ಹೆಚ್ಚಿಸಲಾಗುವುದು. ಆದರೆ, ತುಟ್ಟಿ ಭತ್ಯೆಯು (ಡಿಎ ಹೆಚ್ಚಳ) ಶೇ. 50ಕ್ಕೆ  ತಲುಪಿದಾಗ ಇದು ಸಂಭವಿಸಲಿದೆ.

DA ಶೇ. 50 ದಾಟಿದರೆ, HRA 30%, 20% ಮತ್ತು 10% ಆಗಲಿದೆ. X, Y ಮತ್ತು Z ವರ್ಗದ ನಗರಗಳ ಪ್ರಕಾರ ಮನೆ ಬಾಡಿಗೆ ಭತ್ಯೆ (HRA) ಯನ್ನು ವರ್ಗೀಕರಿಸಲಾಗಿದೆ.

ಎಕ್ಸ್ ಕೆಟಗರಿಯಲ್ಲಿ ಬರುವ ಕೇಂದ್ರ ನೌಕರರು ಶೇ.27ರಷ್ಟು ಎಚ್ ಆರ್ ಎ ಪಡೆಯುತ್ತಿದ್ದು, ಶೇ.50ಕ್ಕೆ ಡಿಎ ತಲುಪಿದರೆ, ಅವರ ಎಚ್ಆರ್ಎ ಶೇ.30ರಷ್ಟಾಗುತ್ತದೆ. ಅದೇ ವೇಳೆ, ವೈ ವರ್ಗದ ಜನರಿಗೆ ಇದು ಶೇ. 18 ರಿಂದ ಶೇ.20ಕ್ಕೆ ಹೆಚ್ಚಾಗಲಿದೆ ಝಡ್ ವರ್ಗದವರಿಗೆ ಇದು ಶೇ.9 ರಿಂದ ಶೇ.10ಕ್ಕೆ ಏರಿಕೆಯಾಗಲಿದೆ.

7 ನೇ ವೇತನ ಆಯೋಗದ ಮ್ಯಾಟ್ರಿಕ್ಸ್ ಪ್ರಕಾರ, ಕೇಂದ್ರ ನೌಕರರ ಗರಿಷ್ಠ ಮೂಲ ವೇತನವು ತಿಂಗಳಿಗೆ 56,900 ರೂ ಆಗಿರುತ್ತದೆ, ನಂತರ ಅವರ HRA ಅನ್ನು ಶೇ. 27 ರಷ್ಟು ಎಂದು ಲೆಕ್ಕಹಾಕಲಾಗುತ್ತದೆ.