1. ಸುದ್ದಿಗಳು

ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಸಂಚಾರಿ ಹಣ್ಣು ಮತ್ತು ತರಕಾರಿ ಮಾರಾಟ ವಾಹನಕ್ಕೆ ಚಾಲನೆ

ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆಯ ಅಂಗ ಸಂಸ್ಥೆಯಾದ ಜಿಲ್ಲಾ ಹಾಪಕಾಮ್ಸ್ ಸಂಸ್ಥೆಯು ರೈತರಿಂದ ನೇರವಾಗಿ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಮಾರುಕಟ್ಟೆಕ್ಕಿಂತ ಕಡಿಮೆ ಬೆಲೆಯಲ್ಲಿ ಗ್ರಾಹಕರಿಕೆ ಒದಗಿಸಲು ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳದಿAದ (ಐಐಹೆಚ್‌ಆರ್ (IIHR) ಸಂಸ್ಥೆಯಿAದ) ವಿನ್ಯಾಸಗೊಳಿಸಿದ ಸಂಚಾರಿ ಹಣ್ಣು ಮತ್ತು ತರಕಾರಿ ಮಾರಾಟ ವಾಹನಕ್ಕೆ ಕಲಬುರಗಿ (ಜಿ.ಪಂ.) ತೋಟಗಾರಿಕೆ ಉಪನಿರ್ದೇಶಕರ ಕಚೇರಿಯಲ್ಲಿ ಸೋಮವಾರ ಚಾಲನೆ ನೀಡಲಾಯಿತು.

ಕಲಬುರಗಿ ವಿಭಾಗದ ತೋಟಗಾರಿಕೆ ಜಂಟಿ ನಿರ್ದೇಶಕ ಮಂಜುನಾಥ ನಾರಾಯಣಪೂರ, ಕಲಬುರಗಿ (ಜಿ.ಪಂ.) ತೋಟಗಾರಿಕೆ ಉಪನಿರ್ದೇಶಕ ಪ್ರಭುರಾಜ್ ಹೆಚ್.ಎಸ್., ಅಧ್ಯಕ್ಷ ಗುರುಶಾಂತ ಪಾಟೀಲ್, ಕಲಬುರಗಿ ಮತ್ತು ಯಾದಗಿರಿ ಕೆ.ಹೆಚ್.ಎಫ್ (KHF) ಜಿಲ್ಲಾ ಪ್ರತಿನಿಧಿ ಹಾಗೂ ನಿರ್ದೇಶಕರಾದ ಬಸವರಾಜ ಪಾಟೀಲ ಊಡಗಿ, ಕಲಬುರಗಿ ಜಿಲ್ಲಾ ಹಾಪಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಪರಮೇಶ್ವರ ಶಿಖರೆ ಅವರು ಈ ಸಂಚಾರಿ ಹಣ್ಣು ಮತ್ತು ತರಕಾರಿ ಮಾರಾಟ ವಾಹನಗಳಿಗೆ ಚಾಲನೆ ನೀಡಿದರು.

ಕಲಬುರಗಿ ಜಿಲ್ಲೆಯ ರೈತರಿಗೆ ಒಳ್ಳೆಯ ಬೆಲೆ ನೀಡಿ ರೈತರಿಂದ ನೇರವಾಗಿ ರೈತರಿಂದ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಈ ಸಂಚಾರಿ ವಾಹನಗಳ ಮೂಲಕ ವಿವಿಧಡೆ ತೆರಳಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲು ಅನುಕೂಲವಾಗುವಂತೆ ಈ ವಿನ್ಯಾಸಗೊಳಿಸಿದ ವಾಹನ ಜೊತೆಗೆ ಇನ್ನೂ ಮೂರು ಸಂಚಾರಿ ಹಣ್ಣು ಮತ್ತು ತರಕಾರಿ ಮಾರಾಟ ವಾಹನಗಳಿಗೆ ಚಾಲನೆ ನೀಡಲಾಯಿತು.

ಈ ಸಂಚಾರಿ ವಾಹನವನ್ನು ಬೆಂಗಳೂರಿನ ಹೆಸರಘಟ್ಟ ಐಐಹೆಚ್‌ಆರ್ (IIHR) ಸಂಸ್ಥೆಯು ವಿನ್ಯಾಸಗೊಳಿಸಿದ್ದು, ಇದರಲ್ಲಿ ಸೋಲಾರ ಪ್ಯಾನಲ್, ದರಪಟ್ಟಿ ಪ್ರದರ್ಶನೆಗಾಗಿ LED, Mist Blower ವುಳ್ಳ ಹಾಗೂ ಇತರೆ ಸುಸಜ್ಜಿತಹೊಸ ತಂತ್ರಜ್ಞಾನವುದ ವ್ಯವಸ್ಥೆ ಇರುತ್ತದೆ. ಈ ಸಂಚಾರಿ ವಾಹನವನ್ನು ಬೆಂಗಳೂರಿನ (ಕೆ.ಹೆಚ್.ಎಫ್)  ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕಾ ಮಾರಾಟ ಮಹಾಮಂಡಳಿ (ನಿ)ಯು ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಹಾಪ್‌ಕಾಮ್ಸ್ ಸಂಘಕ್ಕೆ ನೀಡಿದೆ.

ಕಳೆದ ವರ್ಷ ಕೋವಿಡ್-19 ಮೊದಲನೇ ಅಲೆಯ ಲಾಕ್ ಡೌನ್ ಸಂದರ್ಭದಲ್ಲಿ ಸಹ ಸಂಚಾರಿ ವಾಹನಗಳ ಮೂಲಕ ವಿವಿಧಡೆ ತೆರಳಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡಿ ಜನರಿಗೆ ಅನುಕೂಲ ಕಲ್ಪಿಸಲಾಗಿತ್ತು.

ನಗರದ ಸಾರ್ವಜನಿಕರು ಈ ಸಂಚಾರಿ ಹಣ್ಣು ಮತ್ತು ತರಕಾರಿ ಮಾರಾಟ ವಾಹನದಿಂದ ಮಾರುಕಟ್ಟೆಕ್ಕಿಂತ ಕಡಿಮೆ ಬೆಲೆಯಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಹಾಪಕಾಮ್ಸ್ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ. 

Published On: 17 May 2021, 05:41 PM English Summary: mobile van for fruit and vegetable sales

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.