1. ಸುದ್ದಿಗಳು

ಪಶ್ಚಿಮ ಬಂಗಾಳದಲ್ಲಿ ಬಡವರಿಗೆ ಐದು ರೂಪಾಯಿಗೆ ಊಟ- ಮಾ ಯೋಜನೆಗೆ ಮಮತಾ ಬ್ಯಾನರ್ಜಿ ಚಾಲನೆ

Mamata banarjee

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತದ್ದಂತೆಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಡವರಿಗ ಅತೀ ಕಡಿಮೆ ವೆಚ್ಚದಲ್ಲಿ ಅಂದರೆ ಕೇವಲ 5  ರಾಪಿಯಗೆ ಊಟ ನೀಡುವ ಯೋಜನೆಯನ್ನು ಚಾಲನೆ ನೀಡಿದ್ದಾರೆ.

ಹೌದು, ಪಶ್ಚಿಮಬಂಗಳಾದಲ್ಲಿ ಮಾ ಯೋಜನೆಯನ್ನು ಸೋಮವಾರ ಮಮತಾ ಬ್ಯಾನರ್ಜಿ ಚಾಲನೆ ನೀಡಿದ್ದಾರೆ. ಬಿಜೆಪಿ, ತೃಣಮೂಲ ಕಾಂಗ್ರೆಸ್ ನಡುವಣ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಭರವಸೆಗಳ ಮಹಾಪೂರವೇ ಜನರ ಮುಂದಿದೆ. ಹಲವು ಭರವಸೆಗಳನ್ನು ಎರಡೂ ಪಕ್ಷಗಳು ನೀಡುತ್ತಿದ್ದು,  ತೃಣಮೂಲ ಕಾಂಗ್ರೆಸ್ ವತಿಯಿಂದ ಹೊಸ ಯೋಜನೆಯೊಂದಕ್ಕೆ ಸೋಮವಾರ ಚಾಲನೆ ನೀಡಲಾಗಿದೆ. "ಮಾ" ಯೋಜನೆಯಡಿಯಲ್ಲಿ ಬಡ ಜನರಿಗೆ ಐದು ರೂಪಾಯಿಗೆ ಊಟ ಕೊಡುವ ಈ ಯೋಜನೆಗೆ ವೀಡಿಯೋ ಮೂಲಕ ಚಾಲನೆ ನೀಡಿದ್ದಾರೆ.

ಒಂದು ಪ್ಲೇಟ್ ಅನ್ನ, ಬೇಳೆ,  ತರಕಾರಿ ಹಾಗೂ ಮೊಟ್ಟೆ ಸಾಂಬಾರ್ ಅಥವಾ ಪಲ್ಯವನ್ನು ಕೇವಲ ಐದು ರೂಪಾಯಿಗೆ ನೀಡಲಾಗುತ್ತಿದೆ. ಒಂದು ಪ್ಲೇಟ್ ಗೆ 15 ತಗುಲಲಿದ್ದು, ರಾಜ್ಯ ಸರ್ಕಾರವು ಉಳಿದ ವೆಚ್ಚವನ್ನು ಭರಿಸಲಿದೆ.

ಆಹಾರ ತಯಾರಿಕೆ ಕಾರ್ಯವನ್ನು ಸ್ವಸಹಾಯ ಗುಂಪುಗಳು ನಿರ್ವಹಿಸಲಿದ್ದು, ಪ್ರತಿದಿನ ಮಧ್ಯಾಹ್ನ 1ರಿಂದ 3 ಗಂಟೆವರೆಗೆ ಕಾರ್ಯನಿರ್ವಹಿಸಲಿದ್ದಾರೆ. ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಹಂತ ಹಂತವಾಗಿ ಆಹಾರ ತಯಾರಿಕೆಗೆ ಅಡುಗೆ ಮನೆಗಳನ್ನು ತೆರೆಯಲಾಗುವುದು ಎಂದು ತಿಳಿಸಿದ್ದಾರೆ.

Published On: 15 February 2021, 07:12 PM English Summary: mamata banerjee launched maa scheme to provide meals at 5 rupees to poor people

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.