1. ಸುದ್ದಿಗಳು

ಬಡ ವಿದ್ಯಾರ್ಥಿಗಳಿಗೆ LIC ಯಿಂದ 20 ಸಾವಿರ ಸ್ಕಾಲರ್‌ಶಿಪ್‌'ನೀಡಲು ಅರ್ಜಿ ಆಹ್ವಾನ

LIC

ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ)ಯು ಕೇವಲ ವಿಮೆ ಮಾಡಿಸಿಕೊಳ್ಳುವ ಹಣಕಾಸು ವ್ಯವಹಾರದ ಕೆಲಸಗಳಿಗೆ ಮಾತ್ರ ಸೀಮಿತವಾಗದೆ ಸಮಾಜ ಮತ್ತು ಸಮುದಾಯದ ಅಭಿವೃದ್ಧಿಗೂ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಶಿಕ್ಷಣ, ಸಮುದಾಯ, ಮೂಲಸೌಕರ್ಯ, ಕುಡಿಯುವನ ರು, ಆರೋಗ್ಯ ಸೇರಿದಂತೆ ಇತರ ವಲಯಗಳಲ್ಲಿಯೂ ಹಣಕಾಸು ನೆರವು ನೀಡುತ್ತಿದೆ.

ಹೌದು ಈಗ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಎಲ್ಐಸಿ ಗೋಲ್ಡನ್ ಜ್ಯುಬಿಲಿ ಸ್ಕಾಲರ್‌ಶಿಪ್‌ನೀಡಲು ಮುಂದಾಗಿದೆ. ಭಾರತೀಯ ಜೀವ ವಿಮಾ ನಿಗಮ (LIC) ವು ಉನ್ನತ ಶಿಕ್ಷಣ ಪಡೆಯುತ್ತಿರುವ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ 'ಎಲ್‌ಐಸಿ ಗೋಲ್ಡನ್‌ ಜುಬಿಲಿ ಸ್ಕಾಲರ್‌ಶಿಪ್‌-2020' ಗೆ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್‌ ಅರ್ಜಿ ಆಹ್ವಾನಿಸಿದೆ.

ವಿದ್ಯಾರ್ಹತೆ, ಅರ್ಜಿ ಸಲ್ಲಿಸಲು ಕೊನೆ ದಿನಾಂಕ, ಆನ್‌ಲೈನ್‌ ಅರ್ಜಿ ಭರ್ತಿಗೆ ಡೈರೆಕ್ಟ್‌ ಲಿಂಕ್‌ ಈ ಕೆಳಗಿನಂತೆ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಅರ್ಹತೆಗಳು:

12 ನೇ ತರಗತಿ (10+2) ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಶೇ.60 ಅಂಕಗಳಿಗೆ ಕಡಿಮೆ ಇಲ್ಲದಂತೆ ಪಾಸ್‌ ಮಾಡಿ, ಉನ್ನತ ಶಿಕ್ಷಣ ಪಡೆಯುತ್ತಿರುವ ಅಭ್ಯರ್ಥಿಗಳು.

10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಶೇ.60 ಅಂಕಗಳಿಗೆ ಕಡಿಮೆ ಇಲ್ಲದಂತೆ ಪಾಸ್‌ ಮಾಡಿ ಉನ್ನತ ಶಿಕ್ಷಣ ಪಡೆಯುತ್ತಿರುವ ಅಭ್ಯರ್ಥಿಗಳು.

 ಈ ಮೇಲಿನ ಶೈಕ್ಷಣಿಕ ಅರ್ಹತೆಗಳನ್ನು 2019-20 ನೇ ಸಾಲಿನಲ್ಲಿ ಪಡೆದು. ಪ್ರಸ್ತುತ ವೈದ್ಯಕೀಯ, ಎಂಜಿನಿಯರಿಂಗ್, ಪದವಿ, ಡಿಪ್ಲೊಮ (ಯಾವುದೇ ವಿಭಾಗ) ಉನ್ನತ ಶಿಕ್ಷಣ ಪಡೆಯುತ್ತಿರುವ ಅಭ್ಯರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.

ಸೂಚನೆ : ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.2,00,000 ಕ್ಕಿಂತ ಕಡಿಮೆ ಇರಬೇಕು.

- ವೃತ್ತಿಪರ ಕೋರ್ಸ್‌ಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಸಹ ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು.

ಪದವಿ ಪೂರ್ವ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ರೂ.20,000 ವಿದ್ಯಾರ್ಥಿವೇತನ ನೀಡಲಾಗುತ್ತದೆ.

'ಸ್ಪೆಷಿಯಲ್ ಗರ್ಲ್‌ ಚೈಲ್ಡ್‌ ಸ್ಕಾಲರ್‌ಶಿಪ್‌' ಅಡಿಯಲ್ಲಿ ಆಯ್ಕೆಯಾದ ಹೆಣ್ಣು ಮಕ್ಕಳಿಗೆ (ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಿಗೆ) ರೂ.10000 ವಾರ್ಷಿಕವಾಗಿ ನೀಡಲಾಗುತ್ತದೆ. ಈ ಎರಡು ವಿದ್ಯಾರ್ಥಿವೇತನಗಳನ್ನು ವಿದ್ಯಾರ್ಥಿಗಳಿಗೆ ಮೂರು ತ್ರೈಮಾಸಿಕ ಕಂತುಗಳಲ್ಲಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಆನ್ ಲೈನ್ ಅರ್ಜಿಯನ್ನು ಡಿ. 31 ರೊಳಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯ  https://customer.onlinelic.in/LICEPS/portlets/visitor/GJF/GJFController.jpf ವೆಬ್ ವಿಳಾಸಕ್ಕೆ ಕ್ಲಿಕ್ ಮಾಡಿ ಅರ್ಜಿ ಹಾಕಬೇಕು. ಈ ಸ್ಕಾಲರಶಿಪಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಆಯಾ ಜಿಲ್ಲೆಗಳ ವಿಭಾಗವಾರು ಎಲ್ಐಸಿ ಕಚೇರಿಗಳಲ್ಲಿ ಅಥವಾ www.licindia.in ಈ ವೆಬ್ ಸೈಟಿಗೆ ಸಂಪರ್ಕಿಸಬಹುದು.

ದಾಖಲಾತಿಗಳು:

ಎಸ್ಎಸ್ಎಲ್ಸಿ ಪಾಸಾದವರಿಗೆ, ಎಸ್ಎಸ್ಎಲ್ಸಿ ಅಂಕಪಟ್ಟಿ, ಪಿಯುಸಿ ಪಾಸಾದವರಿಗೆ ಪಿಯುಸಿ ಅಂಕಪಟ್ಟಿ, ಆದಾಯ ಪ್ರಮಾಣಪತ್ರ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 31-12-2020

LIC Golden Jubilee Scholarship Scheme- 2020' ವಿದ್ಯಾರ್ಥಿ ವೇತನವನ್ನು ಒಂದು ಕುಟುಂಬದ ಒಂದು ವಿದ್ಯಾರ್ಥಿಗೆ ಮಾತ್ರ ನೀಡಲಾಗುತ್ತದೆ. ಮೇಲೆ ನಿಗದಿಪಡಿಸಿದ ಕಡ್ಡಾಯ ಅರ್ಹತೆಗಳನ್ನು ಹೊಂದಿರಬೇಕು. ಯಾವುದೇ ಸುಳ್ಳು ಮಾಹಿತಿಗಳನ್ನು ನೀಡಿ ವಿದ್ಯಾರ್ಥಿವೇತನ ಪಡೆಯಲು ಯತ್ನಿಸಿದಲ್ಲಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

Published On: 29 December 2020, 09:14 AM English Summary: Lic invites for golden jubilee scholarship scheme

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.