1. ಸುದ್ದಿಗಳು

ಈರುಳ್ಳಿ ಬೆಳೆಸುವವರಿಗೆ ಇಲ್ಲಿದೆ ವಿಶೇಷ ತಳಿಗಳು

ಈರುಳ್ಳಿ ನಮ್ಮದೇಶದ ಪ್ರಮುಖ ತರಕಾರಿ ಬೆಳೆ. ಇದನ್ನು ಬಲ್ಟ್ ಕ್ರಾಫ್ ಎನ್ನುತ್ತಾರೆ. ಪ್ರಪಂಚದಲ್ಲಿಯೇ ಅತೀ ಹೆಚ್ಚು ಈರುಳ್ಳಿ ಬೆಳೆಯುವ ದೇಶದಲ್ಲಿ ಭಾರತಕ್ಕೆ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.

ಇದೇ ಕಾರಣಕ್ಕೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ಬಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯನ್ನು ಈರುಳ್ಳಿ ತಳಿ ಅಭಿವೃದ್ಧಿಗೆ ನಿಯೋಜಿಸಿದೆ. ಇಲ್ಲಿ ಅರ್ಕಾ ಹೆಸರಿನ ಸುಮಾರು 10 ಬೇರೆ ಬೇರೆ ಗುಣದ ಈರುಳ್ಳಿ ತಳಿಯನ್ನು ಅಭಿವೃದ್ಧಿ ಪಡಿಸಲಾಗಿದೆ.

ಅರ್ಕಾ ಲಾಲಿಮಾ ಅಧಿಕ ಇಳುವರಿ ಕೊಡುವ ಹೈಬ್ರಿಡ್ ತಳಿ. ಮಧ್ಯಮದಿಂದ ದೊಡ್ಡ ಗಾತ್ರದ ಗೆಡ್ಡೆಗಳು ಬಿಡುತ್ತವೆ. ಕೀಟ ಮತ್ತು ರೋಗ ನಿರೋಧಕ ಶಕ್ತಿ ಹೊಂದಿದೆ. ಮಳೆಗಾಲ ಮತ್ತು ಚಳಿಗಾಲ ಎರಡೂ ಸಮಯದಲ್ಲಿ ಬೆಳೆಯಲು ಸೂಕ್ತ. ಪ್ರತಿ ಹೆಕ್ಟೇರಿಗೆ 47 ಟನ್ ಗಡ್ಡೆ ಇಳುವರಿ ಪಡೆಯಬಹುದು.

ಈರುಳ್ಳಿ ಪೇಸ್ಟ್  ತಯಾರಿಸಲು ಈ ತಳಿ ಸೂಕ್ತ. ಹೆಚ್ಚಿನ ಮಾಹಿತಿಗೆ ಐಐಎಚ್ಆರ್ www.seed.iihr.res.in ಸಂಪರ್ಕಿಸಬಹುದು.

Published On: 28 December 2020, 04:12 PM English Summary: Lalima onion

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.