ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರಿನ ದರ ಮೂರು ರೂಪಾಯಿ ಹೆಚ್ಚಳ ಮಾಡುವ ಸಂಬಂಧ ಇನ್ನು ಎರಡು ದಿನಗಳಲ್ಲಿ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.
Degree: ಪದವಿ ಇನ್ನು ಮುಂದೆ ಮೂರಲ್ಲ ನಾಲ್ಕು ವರ್ಷ: ಯುಜಿಸಿ ನಿಯಮವೇನು ?
ನಂದಿನಿ ಹಾಲು ಮತ್ತು ಮೊಸರಿನ ದರ ಹೆಚ್ಚಳ ಮಾಡುವುದಾಗಿ ಕೆಎಂಎಫ್ ಕಳೆದವಾರವೇ ಘೋಷಣೆ ಮಾಡಿತ್ತು. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಡೆ ನೀಡಿದ್ದರು.
ಅಲ್ಲದೇ ಹಾಲು ಮತ್ತು ಮೊಸರಿನ ದರ ಹೆಚ್ಚಳ ಮಾಡುವ ಸಂಬಂಧ ಸೋಮವಾರ ಕೆಎಂಎಫ್ ಹಾಗೂ ಅಧಿಕಾರಿಗಳೊಂದಿಗೆ ಅವರು ಸಭೆ ಸಹ ನಡೆಸಿದ್ದರು.
ಅಡಿಕೆಗೆ ಎಲೆಚುಕ್ಕಿ, ಹಳದಿ ರೋಗ; ತಜ್ಞರ ಸಮಿತಿ ಭೇಟಿ – ರೋಗದ ಮೂಲ ಪರಿಶೀಲನೆಯೇ ಸವಾಲು!
ಸಭೆಯ ನಂತರ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಗ್ರಾಹಕರಿಗೆ ಹಾಗೂ ರೈತರಿಗೆ ಹೊರೆಯಾಗದಂತೆ ಸೂತ್ರ ರೂಪಿಸಲು ನಿರ್ದೇಶನ ನೀಡಿದ್ದರು.
ಹಾಲು ಮತ್ತು ಮೊಸರು ದರ ಏರಿಕೆಯನ್ನು ನಿಗದಿಪಡಿಸಲು ಕರ್ನಾಟಕ ಹಾಲು ಮಹಾಮಂಡಳ ಕಾಲಾವಕಾಶ ಕೋರಿದೆ.
ಹೀಗಾಗಿ, ಇನ್ನು ಎರಡು ದಿನಗಳ ನಂತರ ಸರ್ಕಾರ ಹಾಲಿನ ದರದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಪ್ರತಿ ಲೀಟರ್‌ಗೆ 3 ರೂಪಾಯಿ ಏರಿಕೆ ಮಾಡದಂತೆ. ಆದರೆ ರೈತರಿಗಾಗಲಿ, ಗ್ರಾಹಕರಿಗಾಗಲಿ ನಷ್ಟ ಉಂಟು ಮಾಡಬಾರದು
ಎಂದು ಕೆಎಂಎಫ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ದೇಶನ ನೀಡಿದ್ದಾರೆ. ಹೀಗಾಗಿ, ದರ ನಿಗದಿಗೆ ಕೆಎಂಎಫ್ ಎರಡು ದಿನಗಳ ಕಾಲಾವಕಾಶ ಕೋರಿದೆ.
ರಾಜ್ಯದಲ್ಲಿ ಧಾರಾಕಾರ ಮಳೆ; ಅಡಿಕೆ ಬೆಳೆಗಾರರಿಗೆ ಸಂಕಷ್ಟ!
ಕೆಎಂಎಫ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು,
ಇತರ ರಾಜ್ಯಗಳಲ್ಲಿ ಹಾಲು ಮತ್ತು ಮೊಸರಿನ ಬೆಲೆ ಸೇರಿದಂತೆ ಹೆಚ್ಚಿನ ವಿವರಗಳನ್ನು ಕಲೆಹಾಕುವಂತೆ ತಿಳಿಸಲಾಗಿದೆ.
ಅಲ್ಲದೇ ಕೆಎಂಎಫ್‌ನ ಉತ್ಪಾದನಾ ವೆಚ್ಚ ಮತ್ತು ಯಾವ ಕಾರಣಕ್ಕೆ ದರ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎನ್ನುವ ಬಗ್ಗೆಯೂ ವಿವರ ಕೇಳಲಾಗಿದೆ.
Railways Plan: ರೈಲ್ವೆ ಯೋಜನೆಗಳ ತ್ವರಿತ ಜಾರಿಗೆ ಸಮಿತಿ ರಚನೆ!
ಹಾಲಿನ ಸೋರಿಕೆಯನ್ನು ಕಡಿಮೆ ಮಾಡಲು ಮತ್ತು ತಡೆಯಲು ಕ್ರಮ ಕೈಗೊಂಡಿರುವ ಬಗ್ಗೆ ವಿವರಣೆ ಕೇಳಲಾಗಿದೆ ಹೇಳಿದರು.
ಕೆಎಂಎಫ್ ನಿರ್ಧಾರಕ್ಕೆ ಸರ್ಕಾರ ಅಡ್ಡಿಪಡಿಸುತ್ತಿರುವ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಅವರು, ಕೆಎಂಎಫ್ಗೆ ನಾವು ಸಹಾಯಧನ ನೀಡುತ್ತಿದ್ದೇವೆ.
ನಮ್ಮ ಕ್ಷೀರ ಭಾಗ್ಯ ಯೋಜನೆಗೂ ಹಾಲನ್ನು ಬಳಸುತ್ತಿದ್ದೇವೆ. ರೈತರು ಮತ್ತು ಗ್ರಾಹಕರ ಬಗ್ಗೆ ಯೋಚಿಸುವುದು ಸರ್ಕಾರದ ಕರ್ತವ್ಯ ಎಂದರು.