1. ಸುದ್ದಿಗಳು

ಕರ್ನಾಟಕದ ರೈತ ಸೇನಾ ಮುಖಂಡರು ನಡೆಸುತ್ತಿದ್ದ ಧರಣಿ ತಾತ್ಕಾಲಿಕವಾಗಿ ಹಿಂಪಡೆ!

Kalmesh Totad
Kalmesh Totad
Karnataka farmers protest

ಧಾರವಾಡದ ಕರ್ನಾಟಕ ನೀರಾವರಿ ನಿಗಮ ಕಚೇರಿಯನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ರೈತ ಸೇನಾ ಕರ್ನಾಟಕದ ರೈತ ಮುಖಂಡರು ನಡೆಸುತ್ತಿದ್ದ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.

ಇದನ್ನೂ ಓದಿರಿ: ಗುಡುಗು-ಬಿರುಗಾಳಿ ಸಮೇತ ಭಾರೀ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಸೂಚನೆ!

ಕರ್ನಾಟಕ ರಾಜ್ಯದಲ್ಲಿನ 22 ಜಿಲ್ಲೆಗಳಿಗೆ ಸೇರಿದಂತೆ ಪ್ರಮುಖ ಕಚೇರಿಯಾಗಿದ್ದ ಧಾರವಾಡದ ಕರ್ನಾಟಕ ನೀರಾವರಿ ನಿಗಮದಲ್ಲಿ ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರೈತ ಮುಖಂಡರು ಆರೋಪ ಮಾಡಿದ್ದರು. 

ಈ ಕುರಿತು ನೀರಾವರಿ ನಿಗಮ ಕಚೇರಿಯನ್ನು ಸಿಬಿಐ(CBI) ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ರೈತ ಸೇನಾ ಕರ್ನಾಟಕದ ರೈತ ಮುಖಂಡರು ಧರಣಿಯನ್ನು ನಡೆಸುತ್ತಿದ್ದರು.

ಆದರೆ, ಅವರು ನಡೆಸುತ್ತಿದ್ದ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.

ಗುಡ್‌ನ್ಯೂಸ್‌: 5 ಲಕ್ಷ ರೈತರಿಗೆ ₹749 ಕೋಟಿ ಬೆಳೆ ವಿಮೆ ಇತ್ಯರ್ಥ..!

ನಿನ್ನೆ ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರೈತ ಮುಖಂಡರು ಮನವಿ ಮಾಡಿದ್ದು , ಜುಲೈ 6 ರಂದು ಕಾಫಿ ಬೋರ್ಡ್ನಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳೋಣ ಎಂಬ ಭರವಸೆ ನೀಡಿದ್ದರಿಂದ ರೈತ ಮುಖಂಡರು ಇದೀಗ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.

ಕರ್ನಾಟಕ ನೀರಾವರಿ ನಿಗಮದಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದು , ಈ ಸಂಬಂಧ ರಾಜ್ಯಪಾಲರನ್ನೂ ಭೇಟಿ ಮಾಡಿ ಅವರ ಗಮನಕ್ಕೆ ತರಲಾಗಿದೆ. ಈ ಸಂಬಂಧ ಮಾತನಾಡುವುದಕ್ಕಾಗಿ ಸಿಎಂ ಸಭೆ ಕರೆದಿದ್ದು , ಈ ಹಿನ್ನೆಲೆಯಲ್ಲಿ ಏಳು ದಿನಗಳಿಂದ ನಡೆಯುತ್ತಿದ್ದ ಧರಣಿಯನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

ರೈತರ ಜೀವನಾಡಿ ಎತ್ತುಗಳನ್ನು ಪೂಜಿಸುವ ಹಬ್ಬ “ಮಣ್ಣೆತ್ತಿನ ಅಮವಾಸೆ”; ಏನಿದರ ವಿಶೇಷತೆ ಗೊತ್ತೆ?

Published On: 28 June 2022, 12:47 PM English Summary: Karnataka farmers protest

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2022 Krishi Jagran Media Group. All Rights Reserved.