ಕೃಷಿ ಜಾಗರಣ ಅಗ್ರಿ ನ್ಯೂಸ್‌ಗೆ ಸ್ವಾಗತ. ಇಂದಿನ ಪ್ರಮುಖ ಸುದ್ದಿಗಳು ಈ ರೀತಿ ಇವೆ.
ಮಹದಾಯಿ ಯೋಜನೆಗೆ ವಿರೋಧ: ಗೋವಾದಲ್ಲಿ ನಿರ್ಣಯ
Aadhaar Enabled Payment System: ಆಧಾರ್ ಸಂಖ್ಯೆ ಬಳಸಿಕೊಂಡು ಹಣ ವರ್ಗಾಯಿಸಬಹುದು!
ಕಾಂಗರ್ ವ್ಯಾಲಿಯಲ್ಲಿ ಕಿತ್ತಳೆ ಬಣ್ಣದ ಬಾವುಲಿ ಪತ್ತೆ!
ಲಂಡನ್ ವಿ.ವಿ ಪದವಿ ಪ್ರದಾನ ಸಮಾರಂಭದಲ್ಲಿ ಹಾರಿತು ಕನ್ನಡದ ಬಾವುಟ
ಭಾರತದ ಮೊದಲFPO ಕಾಲ್ ಸೆಂಟರ್‌ಗೆ ಕೃಷಿ ಜಾಗರಣದಲ್ಲಿ ಚಾಲನೆ
ಸ್ವದೇಶ್ ದರ್ಶನ್ 2.0 ಯೋಜನೆಯಡಿ ಹಂಪಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ!
ಕೇಂದ್ರ ಬಜೆಟ್: ಈ ಬಾರಿ ರೈಲ್ವೆ ಅನುದಾನದಲ್ಲಿ ಹೆಚ್ಚಳ ಸಾಧ್ಯತೆ
ಮೊಬೈಲ್ ಕ್ಲಿನಿಕ್ ಸೇವೆ ಪುನರಾರಂಭಿಸಲು ಮುಂದಾದ ಸರ್ಕಾರ
ಮಧ್ಯಾಹ್ನದ ಬಿಸಿಯೂಟ: ಮಕ್ಕಳು ಮೊಟ್ಟೆ ಕೇಳಿದರೆ ಮೊಟ್ಟೆಯನ್ನೇ ಕೊಡಲು ಸರ್ಕಾರದಿಂದ ನಿರ್ದೇಶನ
ಕನ್ನಡ ಬೆಳೆಸುವುದಕ್ಕೂ ಸರ್ಕಾರದಿಂದ ಆದ್ಯತೆ: ಸಿ.ಎಂ
ಇನ್ಮುಂದೆ ರೈತರಿಗೆ ಬಾಡಿಗೆಗೆ ಸಿಗಲಿದೆ ಡ್ರೋನ್
ರಾಜ್ಯದ ಪ್ರತಿ ಜಿಲ್ಲೆಗೆ ಪ್ರತ್ಯೇಕ ಪ್ರಣಾಳಿಕೆ: ಬೊಮ್ಮಾಯಿ
HDFC ಬ್ಯಾಂಕ್‌ನ ಬ್ಯಾಂಕ್ ಆನ್ ವೀಲ್ಸ್ ಇಂದು ವಿದುರ್‌ನಗರದಲ್ಲಿ ಪ್ರಾರಂಭ
ರಾಜ್ಯದಲ್ಲಿ ಹಾಲು ಸಂಗ್ರಹಣೆ ಕುಸಿತ: ಐದು ವರ್ಷಗಳಲ್ಲಿ ಇದೇ ಮೊದಲು
ಸುದ್ದಿಗಳ ವಿವರ ಈ ರೀತಿ ಇದೆ.
ಆನ್‌ಲೈನ್‌ನಲ್ಲಿ ಆರ್ಥಿಕ ವಹಿವಾಟುಗಳು ಹೆಚ್ಚಾದ ಬೆನ್ನಲ್ಲೇ ಆನ್‌ಲೈನ್‌ನಲ್ಲಿ ಸುರಕ್ಷಿತವಾದ ಹಣ ವರ್ಗಾವಣೆ ಮಾಡುವುದು ಸಹ ಸವಾಲಿನ ಕೆಲಸವಾಗಿದೆ. ಆದರೆ, ಇದೀಗ ಡಿಜಿಟಲ್ ಫ್ಲಾಟ್‌ಪಾರ್ಮ್‌ನಲ್ಲಿ ಹಣ ವರ್ಗಾವಣೆ ಮತ್ತಷ್ಟು ಸುಲಭವಾಗಲಿದೆ. ಇದಕ್ಕಾಗಿ ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಹಣ ವರ್ಗಾಯಿಸಬಹುದಾಗಿದೆ. ಬ್ಯಾಂಕ್ ಖಾತೆಗಳ ನಡುವೆ ಸುಲಭ ಮತ್ತು ಸುರಕ್ಷಿತ ಹಣ ವರ್ಗಾವಣೆಗಾಗಿ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (AePS) ಆಯಪ್‌ನ ಮೂಲಕ ಹಣಕಾಸಿನ ವಹಿವಾಟುಗಳನ್ನು ಆಧಾರ್ ಕಾರ್ಡ್ ಸಕ್ರಿಯಗೊಳಿಸುತ್ತದೆ. ಆಧಾರ್ ಗುರುತಿನ ಚೀಟಿಯಾಗಿ ಬಳಸುವುದರ ಜೊತೆಗೆ, ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ (AePS) ಮೂಲಕ ಹಣಕಾಸಿನ ವಹಿವಾಟುಗಳನ್ನು ಸಹ ಇದು ಅನುಮತಿಸುತ್ತದೆ. ವಿಶ್ವಾಸನೀಯ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಇದನ್ನುಅಭಿವೃದ್ಧಿಪಡಿಸಿದ್ದು, ಬೀಮ್ ಆಯಪ್ ನಷ್ಟೇ ಸುರಕ್ಷಿತವಾಗಿದೆ. ಇನ್ನು AePS ಕೇವಲ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಹಣ ವರ್ಗಾವಣೆಯನ್ನು ಸಕ್ರಿಯಗೊಳಿಸುತ್ತದೆ. ಅಲ್ಲದೇ ಬ್ಯಾಂಕ್ ಖಾತೆಗಳ ನಡುವೆ ಹಣವನ್ನು ವರ್ಗಾಯಿಸಲು ಸುಲಭ ಮತ್ತು ಸುರಕ್ಷಿತ ಮಾರ್ಗವಾಗಿದೆ.
----------------------
ಚತ್ತೀಸ್‌ಗಢದ ಕಾಂಗರ್ ವ್ಯಾಲಿ ರಾಷ್ಟ್ರೀಯ ಉದ್ಯಾನವನದಲ್ಲಿ ಅಪರೂಪದಲ್ಲಿ ಅಪರೂಪದ ಕಿತ್ತಳೆ ಬಣ್ಣದ ಬಾವಲಿ ಪತ್ತೆಯಾಗಿದ್ದು, ಕುತೂಹಲ ಹೆಚ್ಚಿಸಿದೆ. ಕಾಂಗರ್ ವ್ಯಾಲಿ ರಾಷ್ಟ್ರೀಯ ಉದ್ಯಾನವನದ ಬಳಿ ಇರುವ ಪರಲಿ ಬೋಡಾಲ್ ಗ್ರಾಮದಲ್ಲಿ ಅಪರೂಪದ ಬಾವಲಿ ಪತ್ತೆಯಾಗಿದೆ. ಈ ಬಾವಲಿಯು ಅತ್ಯಂತ ಅಪರೂಪದ ಹಾಗೂ ಅಳಿವಿನ ಅಂಚಿನಲ್ಲಿರುವ ಜೀವಿಗಳಾಗಿವೆ. ಪೇಂಟೆಡ್ ಬ್ಯಾಟ್ ಎಂದೇ ಕರೆಸಿಕೊಳ್ಳುವ ಈ ಅಪರೂಪದ ಪ್ರಾಣಿ, ಕಿತ್ತಳೆ ಬಣ್ಣದಲ್ಲಿರುತ್ತದೆ ಹಾಗೂ ಕಪ್ಪು ಬಣ್ಣದ ರೆಕ್ಕೆಗಳನ್ನು ಹೊಂದಿರುತ್ತದೆ.
----------------------
ಲಂಡನ್ ವಿ.ವಿ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಯೊಬ್ಬರು ಕನ್ನಡದ ಬಾವುಟ ಹಾರಿಸಿದ್ದಾರೆ. ಲಂಡನ್‌ನ ಸಿಟಿ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಕನ್ನಡಿಗ ಅಧಿಶ್ ಆರ್. ವಾಲಿ ಅವರು ಕನ್ನಡ ಧ್ವಜ ಹಾರಿಸಿ ಸಂಭ್ರಮಿಸಿದ್ದಾರೆ. ವಾಲಿ ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾಲಿ ಅವರು ನಾನು ಲಂಡನ್‌ನ ಸಿಟಿ ವಿಶ್ವವಿದ್ಯಾಲಯದ ಬೆಯೆಸ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ವ್ಯಾವಹಾರಿಕ ಅಧ್ಯಯನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದೇನೆ. ಇಂಗ್ಲೆಂಡ್‌ನ ಲಂಡನ್‌ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ನಮ್ಮ ಕರ್ನಾಟಕ ರಾಜ್ಯ ಧ್ವಜವನ್ನು ಹಾರಿಸಿದ ಹೆಮ್ಮೆಯ ಕ್ಷಣ ಎಂದು ಬರೆದುಕೊಂಡಿದ್ದಾರೆ. ವಾಲಿ ಅವರ ಕಾರ್ಯ ಇದೀಗ ಸೊಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಹಲವರು ಈ ವಿಡಿಯೊ ಹಂಚಿಕೊಂಡು ಸಂಭ್ರಮಿಸಿದ್ದಾರೆ.
----------------------
ಕೃಷಿ ಜಾಗರಣ ಮತ್ತು AFC ಇಂಡಿಯಾ ಲಿಮಿಟೆಡ್ ಸಹಯೋಗದಲ್ಲಿ ಭಾರತದ ಮೊದಲ FPO ಕಾಲ್ ಸೆಂಟರ್ ಪರಿಚಯಿಸಲಾಗಿದ್ದು, ಕಾಲ್‌ಸೆಂಟರ್‌ಗೆ ನವದೆಹಲಿಯ ಕೃಷಿ ಜಾಗರಣ ಕಚೇರಿಯಲ್ಲಿ ಮಂಗಳವಾರ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮಾರ್ಕೆಟಿಂಗ್ ವಿಭಾಗದ ಜಂಟಿ ಕಾರ್ಯದರ್ಶಿ ಐಎಎಸ್ ಅಧಿಕಾರಿ ಡಾ. ವಿಜಯಲಕ್ಷ್ಮಿ ನಾದೆಂದ್ಲಾ ಅವರು ಭಾಗವಹಿಸಿದ್ದರು. ಎಫ್‌ಪಿಒ ಅಂದರೆ ರೈತ ಉತ್ಪಾದಕ ಸಂಸ್ಥೆಗಳು ತಮ್ಮ ಸಂಸ್ಥೆಯ ಸುಗಮ ಕಾರ್ಯನಿರ್ವಹಣೆಗೆ ಉತ್ತಮ ಪರಿಹಾರಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ಈ ಕಾಲ್ ಸೆಂಟರ್ ಪರಿಚಯಿಸಲಾಗುತ್ತಿದೆ. ಇದು ರೈತರು ಹಾಗೂ ಕೃಷಿ ಉತ್ಪಾದಕರ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ.
---------------------
ಕನ್ನಡಿಗರಿಗೆ ಸಿಹಿಸುದ್ದಿ: ಇನ್ಮುಂದೆ 11,400 ಕೇಂದ್ರ ಸರ್ಕಾರಿ ಹುದ್ದೆಗಳ ಪರೀಕ್ಷೆಯನ್ನು ಕನ್ನಡದಲ್ಲೇ ಬರೆಯಬಹುದು!
---------------------
ಕೇಂದ್ರ ಸರ್ಕಾರದ ಸ್ವದೇಶ್ ದರ್ಶನ್ 2.0 ಯೋಜನೆ ಅಡಿಯಲ್ಲಿ ಮೊದಲ ಹಂತದಲ್ಲಿ ಹಂಪಿ ಸೇರಿದಂತೆ 36 ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಲಿದ್ದು, ವಿವಿಧ ಸಂಸ್ಥೆಗಳ ಮೂಲಕ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ನೇಮಕಗೊಂಡ ಪ್ರಾಜೆಕ್ಟ್ ಡೆವಲಪ್‌ಮೆಂಟ್ ಮತ್ತು ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್‌ಗಳು (ಪಿಡಿಎಂಸಿ) ಯೋಜನೆ ಅನುಷ್ಠಾನಕ್ಕೆ ಶ್ರಮಿಸಲಿದ್ದಾರೆ. 19 ರಾಜ್ಯಗಳಿಂದ ಒಟ್ಟು 36 ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
-----------------
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಅನುದಾನದಲ್ಲಿ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದು, ಇದರಲ್ಲಿ ರೈಲ್ವೆ ಯೋಜನೆಗಳಿಗೆ ಮತ್ತು ಆಧುನೀಕರಣ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ನೀಡುವ ಸಾಧ್ಯತೆ ಇದೆ. ಹೊಸ ವಂದೇ ಭಾರತ್ ಮತ್ತು ಹೈಡ್ರೋಜನ್ ಚಾಲಿತ ಪ್ಯಾಸೆಂಜರ್ ರೈಲುಗಳು ಸೇರಿದಂತೆ ಹೊಸ ರೈಲುಗಳು ಘೋಷಣೆಯಾಗುವ ಸಾಧ್ಯತೆ ಇದೆ. ಈ ಬಾರಿ 400ಕ್ಕೂ ಹೆಚ್ಚು ವಂದೇ ಭಾರತ್ ರೈಲುಗಳ ಮತ್ತು ಮೂರು ಡಜನ್‌ಗಿಂತಲೂ ಹೆಚ್ಚು ಹೈಡ್ರೋಜನ್-ಚಾಲಿತ ಪ್ರಯಾಣಿಕ ರೈಲುಗಳನ್ನು ಪರಿಚಯಿಸುವ ಸಾಧ್ಯತೆ ಇದೆ.
-----------------
ಹಣಕಾಸಿನ ಕೊರತೆಯಿಂದಾಗಿ ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಮೊಬೈಲ್ ಕ್ಲಿನಿಕ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಈ ಸೇವೆಯನ್ನು ಪುನರಾರಂಭಿಸಲು ಸರ್ಕಾರ ಮುಂದಾಗಿದೆ. ಎಂಎಂಯು ಘಟಕಕ್ಕೆ ತಗುಲುವ ವೆಚ್ಚವನ್ನು ಸರ್ಕಾರ ಮುಂದೂಡಿತ್ತು. ಈ ಖರ್ಚು ವೆಚ್ಚಗಳಿಗೆ ಸರ್ಕಾರ ಇದೀಗ ಒಪ್ಪಿಗೆ ನೀಡಿದ್ದು, ಅಲ್ಪ ಪ್ರಮಾಣದ ವೆಚ್ಚ ಕಡಿತದೊಂದಿಗೆ 2023ರಲ್ಲಿ ಮರಳಿ ಈ ಸೇವೆಯನ್ನು ಪುನರರಾಂಭಿಸಲು ಚಿಂತನೆ ನಡೆದಿದೆ. ಆರೋಗ್ಯ ಆಯುಕ್ತ ಡಿ.ರಂದೀಪ್ ಅವರು ಮಾತನಾಡಿ, ಎನ್ಎಚ್‌ಎಂ ಆದೇಶದಂತೆ ಎಂಎಂಯು ಘಟಕಕ್ಕೆ 1.55 ಲಕ್ಷ ಅಗತ್ಯವಿದ್ದು, 3.34 ಲಕ್ಷ ರೂಪಾಯಿ ವೆಚ್ಚದಲ್ಲಿ 34 ಘಟಕಗಳ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದಿದ್ದಾರೆ.
-----------------
ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ವೇಳೆ ಮಕ್ಕಳು ಮೊಟ್ಟೆಯನ್ನು ಕೇಳಿದರೆ ಮೊಟ್ಟೆಯನ್ನೇ ಕೊಡಬೇಕು. ಇದರ ಬದಲಾಗಿ ಬಾಳೆಹಣ್ಣು, ಚಿಕ್ಕಿ ನೀಡುವಂತಿಲ್ಲ ಎಂದು ಸರ್ಕಾರ ನಿರ್ದೇಶಿಸಿದೆ. ಸರ್ಕಾರಿ ಶಾಲೆಯ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವ ಯೋಜನೆಯನ್ನು ಪರಿಚಯಿಸಲಾಗಿದ್ದು, ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಮಾತ್ರ ಬಾಳೆಹಣ್ಣು, ಚಿಕ್ಕಿ ನೀಡುವಂತೆ ಸೂಚಿಸಿದೆ. ಆದರೆ, ಕೆಲವು ಶಾಲೆಗಳಲ್ಲಿ ಮಕ್ಕಳು ಮೊಟ್ಟೆ ಕೇಳಿದರೂ ಬಲವಂತವಾಗಿ ಬಾಳೆಹಣ್ಣು ಹಾಗೂ ಚಿಕ್ಕಿ ನೀಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಆರ್ ವಿಶಾಲ್ ಅವರು ಈ ಆದೇಶವನ್ನು ನೀಡಿದ್ದು, ಮಧ್ಯಾಹ್ನದ ಊಟದ ಕುರಿತು ವಿವಿಧ ಮೂಲಗಳಿಂದ ಪ್ರತಿಕ್ರಿಯೆಯನ್ನು ಸ್ವೀಕರಿಸಲಾಗಿದೆ. ಹೀಗಾಗಿ ಈ ಸಂಬಂಧ ಸುತ್ತೋಲೆಯನ್ನು ಹೊರಡಿಸಲಾಗಿದೆ. ಯೋಜನೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇವೆ. ಶಾಲೆಗಳು ಎದುರಿಸುತ್ತಿರುವ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ಕೆಲವು ನಿಯಮಗಳನ್ನು ಸ್ಪಷ್ಟಪಡಿಸಿದ್ದೇವೆಂದು ಹೇಳಿದ್ದಾರೆ.
ಮಧ್ಯಾಹ್ನದ ಊಟದ ಯೋಜನೆಯಡಿ ಮಕ್ಕಳಿಗೆ ಮೊಟ್ಟೆ ವಿತರಿಸುವ ಕುರಿತು ಪ್ರತಿಕ್ರಿಯೆ ನೀಡಿ, ಮಕ್ಕಳು ಮೊಟ್ಟೆ ಕೇಳಿದರೆ, ಅವರಿಗೆ ಮೊಟ್ಟೆಯನ್ನೇ ನೀಡಬೇಕು. ಮೊಟ್ಟೆ ಕೇಳುವ ಮಕ್ಕಳಿಗೆ ಬಾಳೆಹಣ್ಣು ಹಾಗೂ ಚಿಕ್ಕಿ ನೀಡಬಾರದು. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಹಾಗೂ ಚಿಕ್ಕಿ ನೀಡಬೇಕೆಂದು ಹೇಳಿದ್ದಾರೆ. ಮೊಟ್ಟೆ ವಿತರಣೆಗೆ ಆರ್ಥಿಕ ಕೊರತೆ ಕುರಿತು ಹಲವು ದೂರುಗಳು ಬಂದಿವೆ. ಮೊಟ್ಟೆಯ ಬೆಲೆ ಬದಲಾಗುತ್ತದೆ, ಮೊಟ್ಟೆ ದರ ಹೆಚ್ಚಳವಾಗಿದ್ದರೆ, ಸೂಕ್ತ ಕ್ರಮ ಕೈಗೊಂಡು ವಿತರಿಸಲು ಎಸ್‌ಡಿಎಂಸಿಗಳಿಗೆ ಸೂಚನೆ ನೀಡಲಾಗಿದೆ.
-----------------
ಕನ್ನಡವನ್ನು ಉಳಿಸುವುದರ ಜೊತೆ ಬೆಳೆಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕನ್ನಡಕ್ಕೆ ಕಾನೂನಿನ ರಕ್ಷಣೆ ನೀಡುವ ಸಲುವಾಗಿ ಈಗಾಗಲೇ ಕನ್ನಡ ರಕ್ಷಣಾ ವಿಧೇಯಕವನ್ನು ವಿಧಾನಮಂಡಲದಲ್ಲಿ ಮಂಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಆ ವಿಧೇಯಕವನ್ನು ಅಂಗೀಕರಿಸಿ, ಎಲ್ಲಾ ರಂಗಗಳಲ್ಲಿ ಕಾನೂನುಬದ್ಧವಾಗಿ ಕನ್ನಡಕ್ಕೆ ಆದ್ಯತೆ ದೊರೆಯುವಂತಹ ಕೆಲಸವನ್ನು ಮಾಡಲಿದ್ದೇವೆ. ಬದುಕಿನ ಎಲ್ಲಾ ಸ್ಥರಗಳಲ್ಲಿ ಕನ್ನಡ ಇರಬೇಕೆಂಬುದು ನಮ್ಮ ಬಯಕೆಯಾಗಿದೆ. ಶಿಕ್ಷಣದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಲು ಹಲವಾರು ಕ್ರಮಗಳನ್ನು ನಮ್ಮ ಸರ್ಕಾರ ಕೈಗೊಂಡಿದೆ ಎಂದಿದ್ದಾರೆ.
-----------------
ದುಬಾರಿ ಡ್ರೋನ್‌ಗಳನ್ನು ಪಡೆಯಲು ಸಾಧ್ಯವಾಗದ ರಾಜಸ್ಥಾನದ ರೈತರಿಗೆ ಡ್ರೋನ್‌ಗಳನ್ನು ಬಾಡಿಗೆಗೆ ನೀಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರದಿಂದ ಕಸ್ಟಮ್ ನೇಮಕಾತಿ ಕೇಂದ್ರಗಳಲ್ಲಿ ಸುಮಾರು 1,500 ಡ್ರೋನ್‌ಗಳು ಲಭ್ಯವಾಗಲಿವೆ. ರಾಜಸ್ಥಾನದಲ್ಲಿ ಕಡಿಮೆ ಆದಾಯದ ಗುಂಪಿನ ರೈತರಿಗೆ ಬಾಡಿಗೆಗೆ ಡ್ರೋನ್‌ಗಳನ್ನು ಲಭ್ಯವಾಗುವಂತೆ ಮಾಡಲಾಗುತ್ತಿದೆ. ಇದರಿಂದ ಅವರು ಬೆಳೆಗಳನ್ನು ಉತ್ತಮವಾಗಿ ಬೆಳೆಯಬಹುದು. ಅಲ್ಲದೇ ಕಡಿಮೆ ವೆಚ್ಚ ಮತ್ತು ಶ್ರಮದೊಂದಿಗೆ ಹೆಚ್ಚಾಗಿ ಕೃಷಿ ಪ್ರದೇಶದಲ್ಲಿ ಕೀಟನಾಶ ಔಷಧವನ್ನು ಸಿಂಪಡಣೆ ಮಾಡಬಹುದಾಗಿದೆ.
South Western Railway ರೈಲ್ವೇ ಇಲಾಖೆಯಿಂದ ಸಿಹಿಸುದ್ದಿ: ಇನ್ಮುಂದೆ ಕನ್ನಡದಲ್ಲೆ ದೊರೆಯಲಿದೆ ರೈಲ್ವೆ ಸೇವೆ!
-----------------
ರಾಜ್ಯದ ಪ್ರತಿ ಜಿಲ್ಲೆಗಳಿಂದಲೂ ಮಾಹಿತಿ ಸಂಗ್ರಹಿಸಿ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಣಾಳಿಕೆ ಸಿದ್ಧಪಡಿಸಲಾಗುವುದು. ಬಜೆಟ್ ಅಧಿವೇಶನ, ಪಕ್ಷದ ಸಂಘಟನೆ, ಜನ ಸಂಕಲ್ಪ ಯಾತ್ರೆಯ ಮುಂದುವರಿಕೆ, ರಾಷ್ಟ್ರೀಯ ನಾಯಕರ ಕಾರ್ಯಕ್ರಮಗಳ ಆಯೋಜನೆ ಕುರಿತು ಚರ್ಚಿಸಲಾಗಿದೆ ಎಂದರು.
-----------------
HDFC ಬ್ಯಾಂಕ್ ತನ್ನ ಅತ್ಯಾಧುನಿಕ ಬ್ಯಾಂಕ್ ಆನ್ ವೀಲ್ಸ್ ವ್ಯಾನ್ ಸೌಲಭ್ಯವನ್ನು ತಮಿಳುನಾಡಿನ ವಿರುದುನಗರ ಜಿಲ್ಲೆಯಲ್ಲಿ ಪ್ರಾರಂಭಿಸಿದೆ. ವಿರುದುನಗರ ಜಿಲ್ಲೆಯ 10 ರಿಂದ 25 ಕಿ.ಮೀ ವ್ಯಾಪ್ತಿಯಲ್ಲಿರುವ ಆಯ್ದ ಗ್ರಾಮಗಳಿಗೆ ವಾರಕ್ಕೊಮ್ಮೆ ಈ ಸೇವೆ ಸಿಗಲಿದೆ. ಅಲ್ಲದೇ ಇದರಲ್ಲಿ ಉಳಿತಾಯ ಮತ್ತು ಚಾಲ್ತಿ ಖಾತೆಗಳನ್ನು ಒಳಗೊಂಡಂತೆ 21 ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತದೆ. ಗುಜರಾತ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಪಂಜಾಬ್ ನಂತರ ಈ ಸೇವೆಯನ್ನು ಇಂದು ಪ್ರಾರಂಭಿಸುತ್ತಿರುವ ಐದನೇ ರಾಜ್ಯ ತಮಿಳುನಾಡಾಗಿದೆ.
-----------------