News

ಕನ್ನಡದ ನೆಲಕ್ಕಾಗಿ ಒಂದಾದ ಕಲಿಗಳು! ಮೇಕೆದಾಟುವಿಗಾಗಿ ತೊಡೆತಟ್ಟಿದ ನಾಯಕರು

23 March, 2022 10:11 AM IST By: Kalmesh T
Kalis for the Kannada floor Dismissed heroes for the Mekedaatu!

ಮೇಕೆದಾಟು ಕರ್ನಾಟಕದ್ದು ; CM ಬೊಮ್ಮಾಯಿ!

ಈ ಯೋಜನೆಯಿಂದ ಸ್ವಲ್ಪ ಪ್ರದೇಶ ಮುಳುಗಡೆಯಾಗಬಹುದು. ಮೇಕೆದಾಟಿನಿಂದ ಬೆಂಗಳೂರಿಗೆ ಕುಡಿಯುವ ನೀರು ಸಿಗಲಿದೆ. ಮೇಕೆದಾಟಿನಿಂದ Tribunal ಆದೇಶ ಉಲ್ಲಂಘನೆಯಾಗಲ್ಲ. ಕಳೆದ ಹಲವು ವರ್ಷದಿಂದ ತಮಿಳುನಾಡಿಗೆ ನೀರು ಹಂಚಿಕೆ ಆಗುತ್ತಿದೆ. ಹೆಚ್ಚುವರಿ ನೀರು ತಮಿಳುನಾಡಿಗೆ ಹೋಗ್ತಿದೆ. ತಮಿಳುನಾಡು ಹೆಚ್ಚುವರಿ ನೀರನ್ನೂ ಬಳಸಿಕೊಳ್ಳುತ್ತಿದೆ. ತಮಿಳುನಾಡು ಸರ್ಕಾರದ ವಾದವನ್ನು ವಿರೋಧಿಸಿದ್ದೇವೆ ಎಂದು ಮಂಗಳವಾರ ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಮೇಕೆದಾಟು ಯೋಜನೆಗೆ ತಮಿಳುನಾಡು ಪದೇಪದೆ ಅಡ್ಡಿಪಡಿಸುತ್ತಿದೆ. ನಮ್ಮ ನೀರಿನ ಹಕ್ಕು ಪಡೆಯಲು ನಾವು ಸಿದ್ಧ. ಮೇಕೆದಾಟು ಯೋಜನಾ ವರದಿ ಕ್ಲಿಯರ್ ಆಗಬೇಕು.

ಇದನ್ನು ಓದಿರಿ:

PUC ಪಾಸ್ ಆಗಿದ್ದರೆ 19,990 ಸಂಬಳ!

ಪತ್ತೆಯಾಯ್ತು ಆಲೂಗಡ್ಡೆ ಮಾದರಿಯ ವಿಶೇಷ ತರಕಾರಿ..ಅಸಲಿಗೆ ಏನಿದು..?

ಗುಡುಗಿದ ಯಡಿಯೂರಪ್ಪ

ತಮಿಳುನಾಡು ನಿರ್ಣಯಕ್ಕೆ ನಾವು ಅಂಜುವ ಪ್ರಶ್ನೆಯಿಲ್ಲ. ತಮಿಳುನಾಡು ನಿರ್ಣಯವನ್ನು ತೀವ್ರವಾಗಿ ಖಂಡಿಸ್ತೇನೆ. CM ತಕ್ಷಣ ದೆಹಲಿಗೆ ಹೋಗಲಿ, ಸಚಿವರ ಭೇಟಿ ಮಾಡಲಿ. ಆದಷ್ಟು ಬೇಗ ಪರಿಸರ ಇಲಾಖೆಯ ಅನುಮತಿ ಪಡೆಯಲಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

Central Govt ಬಳಿ ಸರ್ವಪಕ್ಷ‌ ನಿಯೋಗ ಹೋಗೋಣ: ಸಿದ್ದರಾಮಯ್ಯ

ಕೇಂದ್ರ ಸರ್ಕಾರದ ಬಳಿ ಸರ್ವಪಕ್ಷ‌ ನಿಯೋಗ ಹೋಗೋಣ ಎರಡೂ ಸದನಗಳಲ್ಲಿ ನಿರ್ಣಯ ಮಾಡೋಣ. ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ನಡೆಸಲಾಗಿದೆ. ಶೂನ್ಯವೇಳೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಚರ್ಚೆ ಮಾಡಿದ್ದಾರೆ. ತಮಿಳುನಾಡು ಸರ್ಕಾರದಿಂದ ಮೇಕೆದಾಟಿಗೆ ಅಡ್ಡಗಾಲು ಹಾಕಲಾಗುತ್ತಿದೆ. ಯೋಜನೆಗೆ ಕಾನೂನು ಬಾಹಿರ ನಿರ್ಣಯ ಮಾಡಿದ್ದಾರೆ.

ಇನ್ನಷ್ಟು ಓದಿರಿ:

ಪಡಿತರ ತರಲು ಪರದಾಡಿದ್ದ ಯುವಕ; ಹೊಸ App ರಚಿಸಿದ ಕಥೆ!

ಕಾನೂನು ಬಾಹಿರ ನಿರ್ಣಯಕ್ಕೆ ಕಾನೂನಾತ್ಮಕ ಹಕ್ಕಿಲ್ಲ. ತಮಿಳುನಾಡು ರಾಜಕೀಯ ಕ್ಯಾತೆ ತೆಗೆಯಲು ನಿರ್ಣಯ ಮಾಡುತ್ತಿದೆ. 2018ರಲ್ಲಿ ಸುಪ್ರೀಂ​ನಿಂದ ಅಂತಿಮ ತೀರ್ಪು ಬಂದಿದೆ. ಸುಪ್ರೀಂ ತೀರ್ಪನ್ನ ನಾವು, ಅವರೂ ಕೂಡ ಒಪ್ಪಿಕೊಂಡಿದ್ದಾರೆ. ಪ್ರತಿ ವರ್ಷ 177.25 ಟಿಎಂಸಿ ನೀರನ್ನು ಅವರಿಗೆ ಕೊಡಬೇಕು. ಹೆಚ್ಚುವರಿಯಾಗಿ 7-8 ವರ್ಷಗಳಲ್ಲಿ 582 TMC ನೀರು ನೀಡಲಾಗಿದೆ. ಕಾಲು ಕೆರೆದುಕೊಂಡು ಬಂದ್ರೆ ಕನ್ನಡಿಗರು ಸಹಿಸಿಕೊಳ್ಳಬೇಕಾ? ಎಂದು ಮೇಕೆದಾಟು ಯೋಜನೆ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ.

“ನೆಲ, ಜಲ, ಭಾಷೆ, ಗಡಿ ವಿಚಾರದಲ್ಲಿ ಒಟ್ಟಿಗೆ ಇದ್ದೇವೆʼʼ

ಮೇಕೆದಾಟು ಬಗ್ಗೆ ಅನೇಕ ಬಾರಿ ಚರ್ಚೆಯಾಗಿದೆ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ನಾವು ತಮಿಳುನಾಡಿನ ಮುಲಾಜಿನಲ್ಲಿ ಇಲ್ಲ. ನಾವು ನೆಲ, ಜಲ, ಭಾಷೆ, ಗಡಿ ವಿಚಾರದಲ್ಲಿ ಒಟ್ಟಿಗೆ ಇದ್ದೇವೆ. ಕೇಂದ್ರ ಸರ್ಕಾರಕ್ಕೆ ನಮ್ಮ ನಿಲುವು ಸ್ಪಷ್ಟ ಮಾಡಲಾಗಿದೆ. ಸರ್ವಪಕ್ಷ ಸಭೆಯಲ್ಲೂ ಚರ್ಚೆ ಆಗಿದೆ. ತಮಿಳುನಾಡು ನಿರ್ಣಯದಿಂದ ನಮ್ಮ ಹಕ್ಕು ಚ್ಯುತಿಯಾಗಿದೆ. ತಮಿಳುನಾಡು ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕ್ತಿದೆ. ಕೇಂದ್ರ, ಪರಿಸರ ಇಲಾಖೆ ಯೋಜನೆಗೆ ಅನುಮತಿ ಕೊಡಲಿ. ಸಿಎಂಗೆ ಸಾಧ್ಯವಾದರೆ ಪ್ರಧಾನಿಯನ್ನು ಭೇಟಿ ಮಾಡಿ ಒತ್ತಾಯಿಸಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿರಿ:

Recruitment, ಕರ್ನಾಟಕದಲ್ಲೇ 2,52,902 ಸರ್ಕಾರಿ ಹುದ್ದೆ ಖಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಂದ ಸ್ಪಷ್ಟನೆ ̤

ಮೇಕೆದಾಟು ಯೋಜನೆಗೆ ತಮಿಳುನಾಡು ಒಪ್ಪಿಗೆ ಬೇಕಿಲ್ಲ:  ಕುಮಾರಸ್ವಾಮಿ

ಮೇಕೆದಾಟು ಯೋಜನೆಗೆ ತಮಿಳುನಾಡು ಒಪ್ಪಿಗೆ ಬೇಕಿಲ್ಲ. ಯೋಜನೆಗೆ ಬೇಕಿರೋದು ಪರಿಸರ ಇಲಾಖೆಯ ಒಪ್ಪಿಗೆ. ಬಿ.ಎಸ್.ಯಡಿಯೂರಪ್ಪನವರು ಕೊಟ್ಟ ಸಲಹೆ ಸರಿ ಇದೆ. ತಮಿಳುನಾಡಿನ ಸರ್ಕಾರದ ನಿರ್ಣಯ ಹೊಸದೇನಲ್ಲ. 1924ರಿಂದಲೂ ತಮಿಳುನಾಡು ಗದಾಪ್ರಹಾರ ಮಾಡುತ್ತಿದೆ. ರಾಜ್ಯ ಸರ್ಕಾರ ಕಾಲಹರಣ ಮಾಡದೆ ಮನವರಿಕೆ ಮಾಡ್ಬೇಕು. ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವ ಕೆಲಸ ಮಾಡ್ಬೇಕು. ಕೇಂದ್ರದ ಮನವೊಲಿಸಿ ಯಶಸ್ವಿಯಾದ್ರೆ ಯೋಜನೆ ಜಾರಿ ಮಾಡಬೇಕು. ತಕ್ಷಣ ಕೇಂದ್ರದ ಮನವೊಲಿಸುವ ಕೆಲಸ ಮಾಡಬೇಕು ಎಂದು ಶೂನ್ಯವೇಳೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ.

ಮತ್ತಷ್ಟು ಓದಿರಿ:

Central Government Scheme! Pashu kisan credit card scheme! ನಿಂದ ನಿಮಗೆ ಪಶುಸಂಗೋಪನೆಗಾಗಿ 60,000 ರೂಪಾಯಿ ನೀಡಲಾಗುತ್ತೆ!