1. ಸುದ್ದಿಗಳು

ಜಾಗತಿಕ ತಾಪಮಾನ ಏರಿಕೆ, ಈಗಲೇ ಎಚ್ಚರವಹಿಸಿ ಹಾಗೂ ನಮ್ಮ ಭೂಮಿತಾಯಿಯನ್ನು ಸುರಕ್ಷಿತವಾಗಿಡಿ

 ಆಧುನಿಕ ಜಗತ್ತಿನಿ ಹೊಸ ಜೀವನಶೈಲಿಯಿಂದ ಇಂದು ನಾವು ನೀವೆಲ್ಲ ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ, ಹೀಗಾಗಿ ನಾವು ಏನಾದರೂ ಮಾಡುವ ಮುಂಚೆ ಮುಂದೆ ಏನಾಗಲಿದೆ ಎಂಬುದನ್ನು ಒಮ್ಮೆ ಯೋಚನೆ ಮಾಡಿ ಮಾಡೋಣ ಯಾಕೆಂದರೆ ಇಂದು ನಾವು-ನೀವು ಮಾಡುವ ಹಲವಾರು ಚಟುವಟಿಕೆಗಳ ಕಾರಣದಿಂದ ಈ ವರ್ಷವೂ ಜಾಗತಿಕ ತಾಪಮಾನದಲ್ಲಿ 3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ ಹಾಗೂ 2020 ಬೆಚ್ಚನೆಯ ವರ್ಷ ಎಂದು ದಾಖಲಾಗಿದೆ.

 ಇಂದು ನಾವು ನೀವು ಎಲ್ಲೆಡೆ ನೋಡಿದರು ಮನೆಗೊಂದು ವಾಹನ ಕಾಯಂ ಆಗಿದೆ, ಮತ್ತೊಂದೆಡೆ ತಂದೆಗೊಂದು ತಾಯಿಗೊಂದು ಮಕ್ಕಳಿಗೊಂದು ಹೀಗೆ ನಾವು ಹಲವಾರು ವಾಹನಗಳನ್ನು ಬಳಸುತ್ತಿದ್ದೇವೆ ಇದರ ಮೂಲಕ ಬಿಡುಗಡೆಯಾಗುವ ವಿಷಪೂರಿತ ಅಂಶಗಳು ನಮ್ಮ ಭೂಮಿತಾಯಿಗೆ ಹಾನಿಯನ್ನುಂಟು ಮಾಡುತ್ತವೆ, ಮತ್ತೊಂದೆಡೆ ರಸ್ತೆ ನಿರ್ಮಾಣದ ಹೆಸರಿನಲ್ಲಿ ಲಕ್ಷಾನುಗಟ್ಟಲೆ ಮರಗಳನ್ನು ಕತ್ತರಿಸಲಾಗುತ್ತದೆ, ಗಣಿಗಾರಿಕೆ, ಎಲ್ಲಾ ಹಬ್ಬಗಳಿಗೂ ಪಟಾಕಿ ಹಚ್ಚುವುದು, ಹುಟ್ಟೂರು ಸಹಿತ ಪಟಾಕಿ ಸತ್ತರು  ಸಹಿತ ಪಟಾಕಿ, ಆಂದೋಲನಗಳು ಚಳುವಳಿಗಳು ಸ್ಟ್ರೈಕ್ ಗಳು, ಸಮುದ್ರದಲ್ಲಿ ಅನಿಲ ಸೋರಿಕೆ ಹೀಗೆ ಇನ್ನೂ ಹಲವಾರು ರೀತಿಗಳಲ್ಲಿ ನಾವು ನಮ್ಮ ಸುಖಕ್ಕೋಸ್ಕರ ಇನ್ನೊಬ್ಬರ ಸುಖವನ್ನು ಹಾಳು ಮಾಡುತ್ತಿದ್ದೇವೆ.

 ಇದರ ಮೂಲಕ ಜಾಗತಿಕ ತಾಪಮಾನದಲ್ಲಿ 3 ಡಿಗ್ರಿ ಸ್ಸೆಲ್ಸಿ ಏರಿಕೆ ಕಂಡಿದೆ, ಇದರಿಂದ ಅಂಟಾರ್ಟಿಕದಲ್ಲಿ ಹಿಮ ಕರಗುತ್ತಿದೆ, ಹಿಮ ಕರಗಿ ಮುಂದೆ ಅದು ಮತ್ತೆ ಪ್ರವಾಹದ ರೂಪದಲ್ಲಿ ಮಾರ್ಪಾಡಿ ನಮಗೆ ಕಾಡುತ್ತದೆ, ಕಾಡುಗಳಲ್ಲಿ ಕಾಡ್ಗಿಚ್ಚು ಹೆಚ್ಚಾಗುತ್ತಿದೆ, ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಹಲವಾರು ಚಂಡಮಾರುತಗಳು ಬೀಸುತ್ತಿದೆ, ಇತ್ತೀಚಿಗೆ ನಾವು ನೋಡಿದಂತಹ ನಿವಾರ ಹಾಗೂ ಬರೇವಿ ಚಂಡಮಾರುತಗಳು ತಮಿಳುನಾಡು ಹಾಗೂ ಕೇರಳದಲ್ಲಿ ಸಾಕಷ್ಟು ಹಾನಿಯನ್ನುಂಟು ಮಾಡಿದೆ ಎಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದಲ್ಲಿ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ. 

ಲೇಖಕರು: ಚಿನ್ನಪ್ಪ ಎಸ್. ಅಂಗಡಿ

Published On: 12 December 2020, 04:28 PM English Summary: increase in earth temperature

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.