News

ನೀವು ಶ್ರೀಗಂಧ ಬೆಳೆದರೆ ಸರ್ಕಾರವೇ ಖರೀದಿಸಲಿದೆ!

03 January, 2024 1:58 PM IST By: Hitesh
ಶ್ರೀಗಂಧ ಖರೀದಿಗೆ ಮುಂದಾಯ್ತು ರಾಜ್ಯ ಸರ್ಕಾರ

ಶ್ರೀಗಂಧದ ಮರಗಳನ್ನು ಬೆಳೆಯುವ ರೈತರಿಗೆ ರಾಜ್ಯ ಸರ್ಕಾರವು ಮತ್ತೊಮ್ಮೆ ಸಿಹಿ ಸುದ್ದಿಯೊಂದನ್ನು ನೀಡಿದೆ.

ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಶ್ರೀಗಂಧದ ಮರಗಳನ್ನು ಬೆಳೆಯುವುದು ಹಾಗೂ ಮಾರಾಟ ಮಾಡುವುದು ಹೆಚ್ಚಾಗುತ್ತಿದೆ.

ಇನ್ನು ರಾಜ್ಯ ಸರ್ಕಾರವು ರಾಜ್ಯದಲ್ಲಿ ಶ್ರೀಗಂಧದ ಮರಗಳನ್ನು ಬೆಳೆಯುವುದಕ್ಕೆ ಮತ್ತು ಮಾರಾಟ ಮಾಡುವುದಕ್ಕೆ ಪೂರಕ ವಾತಾವರಣ

ನಿರ್ಮಿಸಲಾಗುವುದು ಎಂದು ಈಗಾಗಲೇ ಹೇಳಿತ್ತು.

ಅದರಂತೆಯೇ ಸರ್ಕಾರ ಇದೀಗ ಶ್ರೀಗಂಧದ ಮೆಗಳನ್ನು ಬೆಳೆಯುವುದಕ್ಕೆ ಅನುವಾಗುವ ಮಾದರಿಯನ್ನು ಪರಿಚಯಿಸಿದೆ.

ಇನ್ನು ಮುಂದಿನ ದಿನಗಳಲ್ಲಿ ನೀವು ಶ್ರೀಗಂಧ ಬೆಳೆಯುವ ಬೆಳೆಗಾರರು ತಮ್ಮ ಜಮೀನು ಅಥವಾ ನಿವೇಶನದಲ್ಲಿ ಸರಾಸರಿ 20 ವರ್ಷ ಮೇಲ್ಪಟ್ಟ

ಶ್ರೀಗಂಧದ ಮರಗಳಿದ್ದಲ್ಲಿ ಸರ್ಕಾರದ ಅರಣ್ಯ ಇಲಾಖೆ ಅಥವಾ ಕರ್ನಾಟಕ ಸೋಪ್ಸ್ ಎಂಡ್ ಡಿಟರ್ಜೆಂಟ್ ಲಿ. ದರದಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಇದಕ್ಕಾಗಿ ರೈತರು ಇನ್ನು ಮುಂದೆ ಸರ್ಕಾರದೊಂದಿಗೆ ಒಪ್ಪಂದ ಅಥವಾ ಅಗ್ರಿಮೆಂಟ್ಸ್‌ ಸಹ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ

ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

Sandalwood ಶ್ರೀಗಂಧ ಬೆಳೆವವರಿಗೆ ಕವಿತಾ ಮಿಶ್ರಾ ಬೆಸ್ಟ್‌ ಟಿಪ್ಸ್‌!

ಈ ಕ್ರಮದಿಂದ ಏನಾಗಲಿದೆ ?

ರಾಜ್ಯ ಸರ್ಕಾರದ ಈ ಕ್ರಮದಿಂದಾಗಿ ಶ್ರೀಗಂಧವನ್ನು ಬೆಳೆದಿರುವ ರೈತರಿಗೆ ಅನುಕೂಲ ಹಾಗೂ ಲಾಭವೇ ಆಗಲಿದೆ.

ಈಗಾಗಲೇ ಶ್ರೀಗಂಧವನ್ನು ಬೆಳೆದಿರುವ ರೈತರಲ್ಲದೇ ಈಗ ಶ್ರೀಗಂಧವನ್ನು ಬೆಳೆಯುವವರು ಸಹ ಸರ್ಕಾರದೊಂದಿಗೆ ಒಪ್ಪಂದವನ್ನು

ಮಾಡಿಕೊಳ್ಳುವುದರಿಂದ ಮುಂದೆ ಶ್ರೀಗಂಧವನ್ನು ಎಲ್ಲಿ ಮಾರಾಟ ಮಾಡಬೇಕು ಎನ್ನುವ ಪ್ರಶ್ನೆ ಅಥವಾ ಗೊಂದಲ ಇರುವುದಿಲ್ಲ.

ಈ ರೀತಿಯಲ್ಲಿ ರೈತರು ಶ್ರೀಗಂಧದ ಮರಗಳ ಮಾರಾಟವನ್ನು ಮಾಡಲು ಅನುಕೂಲವಾಗಿದೆ.

ಅಲ್ಲದೇ ಸರ್ಕಾರವು ಶ್ರೀಗಂಧ ಮರಗಳ ಮಾರಾಟಕ್ಕೆ ತನ್ನದೇ ವಿಶ್ವಾಸಾರ್ಹ ವೇದಿಕೆಯೊಂದನ್ನು ಕಲ್ಪಿಸಿದಂತಾಗಿದೆ.

ಶ್ರೀಗಂಧದ ಮರ ಕಳವು ತಡೆಗೆ ಸರ್ಕಾರದಿಂದ ಮಾಸ್ಟರ್‌ ಪ್ಲಾನ್‌! 

ಶ್ರೀಗಂಧ ಕರ್ನಾಟಕದ ಹೊನ್ನ ಕಳಸ

ಭಾರತದ ಇತರ ಶ್ರೀಗಂಧಕ್ಕೂ ಕರ್ನಾಟಕದ ಶ್ರೀಗಂಧಕ್ಕೂ ಹೆಚ್ಚು ವ್ಯತ್ಯಾಸಗಳು ಇವೆ.

ಕರ್ನಾಟಕದ ಶ್ರೀಗಂಧವು ಭಾರತದ ಉಳಿದ ಶ್ರೀಗಂಧದ ಮರಗಳಿಗಿಂತ ಹೆಚ್ಚು ಖ್ಯಾತಿಯನ್ನು ಗಳಿಸಿಕೊಂಡು ಬಂದಿದೆ.

ಇದಕ್ಕೆ ಮುಖ್ಯ ಕಾರಣ ಈ ಮರದಲ್ಲಿ ಇರುವ ಶ್ರೀಗಂಧದ ಗುಣಮಟ್ಟ ಹಾಗೂ ಆಯಿಲ್‌ನ ಅಂಶ ಇದರಿಂದ ಶ್ರೀಗಂಧದಕ್ಕೆ ಹೆಚ್ಚು

ಬೇಡಿಕೆ ಮೊದಲಿನಿಂದಲೂ ಇದೆ ಎನ್ನುತ್ತಾರೆ ಶ್ರೀಗಂಧವನ್ನು ಬೆಳೆದಿರುವವರು ಹಾಗೂ ಇದರ ಮಾರಾಟದಲ್ಲಿ ಖ್ಯಾತಿಯನ್ನು ಗಳಿಸಿದವರು.  

ಶ್ರೀಗಂಧದ ಬೆಳೆಗೆ ಬಂಪರ್‌

ರಾಜ್ಯದಲ್ಲಿ ಈಗಾಗಲೇ ಶ್ರೀಗಂಧದ ಮರಗಳನ್ನು ಬೆಳೆಯುವುದಕ್ಕೆ ಪೂರಕವಾದ ಹಾಗೂ ಉತ್ತಮ ವಾತಾವರಣ ನಿರ್ಮಾಣವಾಗಿದೆ.

ಇದೀಗ ರಾಜ್ಯ ಸರ್ಕಾರದ ಸಂಸ್ಥೆಯೊಂದು ಮುಂದೆ ಬಂದು ಶ್ರೀಗಂಧದ ಮರವನ್ನು ಖರೀದಿ ಮಾಡುತ್ತಿರುವುದು

ಮತ್ತೊಂದು ಉತ್ತಮವಾದ ಬೆಳವಣಿಗೆ ಎಂದೇ ವ್ಯಾಖ್ಯಾನಿಸಬಹುದಾಗಿದೆ. 

ಸಾಬೂನು ಉತ್ಪಾದನೆಯಲ್ಲೂ ಸರ್ಕಾರ ದಾಖಲೆ

ರಾಜ್ಯ ಸರ್ಕಾರವು ಇದೀಗ ಶ್ರೀಗಂಧದೊಂದಿಗೆ ಸಾನೂನು ಉತ್ಪಾದನೆಯಲ್ಲೂ ಭರ್ಜರಿ ದಾಖಲೆಯನ್ನೇ ಮಾಡಿದೆ.

ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ 2023ರ ಡಿಸೆಂಬರ್ನಲ್ಲಿ ಒಟ್ಟು 852 ಟನ್ ಮಾರ್ಜಕ (ಸಾಬೂನು) ತಯಾರಿಸಿ,

ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಮೂಲಕ ಈ ಸಾಧನೆಯನ್ನು ಬರೋಬ್ಬರಿ 40 ವರ್ಷಗಳಲ್ಲೇ ಹೊಸ ದಾಖಲೆ ಎಂದೇ ವ್ಯಾಖ್ಯಾನಿಸಲಾಗಿದೆ.

ಕಳೆದ ವರ್ಷದ ಆರ್ಥಿಕ ಸಾಲಿನಲ್ಲಿ ರಾಜ್ಯದಲ್ಲಿ (ಆರ್ಥಿಕ ವರ್ಷ)9 ತಿಂಗಳುಗಳಲ್ಲೇ ಬರೋಬ್ಬರಿ 1,171 ಕೋಟಿ ರೂಪಾಯಿ ವಹಿವಾಟು ನಡೆಸಿರುವುದು

ಅಮೋಘ ಸಾಧನೆಯಾಗಿದೆ. ಒಂದೇ ಪಾಳಿಯಲ್ಲಿ ಹಾಗೂ ಒಂದು ಯಂತ್ರದ ಮೂಲಕ ನಡೆಯುತ್ತಿದ್ದ

ಉತ್ಪಾದನೆಯನ್ನು ಮೂರು ಪಾಳಿ ಹಾಗೂ ಮೂರು ಯಂತ್ರಗಳಿಗೆ ವಿಸ್ತರಿಸಿರುವುದಾಗಿ ಸರ್ಕಾರ ಹೇಳಿದೆ. 

ಶ್ರೀಗಂಧ ಬೆಳೆಯಿರಿ ಲಕ್ಷ ಲಕ್ಷ ಸಂಪಾದಿಸಿ..ನೀವೂ ಬೆಳೆದು ನೋಡಿ..ಸರ್ಕಾರವೇ ಮಾಡುತ್ತೆ ಸಹಾಯ

ಇನ್ನು ಖಾಸಗಿ ಕಂಪನಿಗಳಿಗೆ ಸೆಡ್ಡು ಹೊಡೆಯುವಂತೆ ಕೆಎಸ್‌ಡಿಎಲ್ ಸಂಸ್ಥೆಯನ್ನು ಬಲಪಡಿಸಲಾಗಿದೆ.

ಕನ್ನಡಿಗರು ಶ್ರಮದಿಂದ ಕಟ್ಟಿದ ಪ್ರತಿ ಸರ್ಕಾರಿ ಸಂಸ್ಥೆಯನ್ನೂ ಸರ್ಕಾರ ಮತ್ತೆ ಲಾಭದ ಹಳಿಗೆ ತರಲು ಸಿದ್ಧವಿದೆ.

ಇದು ಕನ್ನಡಿಗರ  ಶ್ರಮ ಮತ್ತು ಬೆವರಿಗೆ ನಾವು ಕೊಡುವ ಗೌರವ ಎಂದಿದ್ದಾರೆ ಮುಖ್ಯಮಂತ್ರಿ Siddaramaiah ಅವರು.  

ತೇಗದ ಮರ ಬೆಳೆಸುವ ರೈತರಿಗೆ 100% ಸಹಾಯಧನ ನೀಡುತ್ತಿದೆ ಈ ಸರ್ಕಾರ! ಎಲ್ಲಿ ಗೊತ್ತೆ?