News

Rainbow ಮರ ಕಂಡಿದ್ದೀರಾ? ಇಲ್ಲಿದೆ ಪ್ರಕೃತಿಯ Magic !

21 March, 2022 4:53 PM IST By: Kalmesh T
Have you seen the Rainbow Tree? Here's nature's magi̧c

ಪ್ರಸ್ತುತ ಸಿಕ್ಕಾಪಟ್ಟೆ Viral  ಆಗಿರುವ ಈ ನೀಲಗಿರಿ ಮರ ಮಳೆಬಿಲ್ಲಿನ ಬಣ್ಣದಲ್ಲಿದೆ. ಕಾಮನಬಿಲ್ಲಿನ ತರದ ಬಣ್ಣವನ್ನು ಹೊಂದಿರುವ ಈ ನೀಲಗಿರಿಯು ಉತ್ತರ ಗೋಳಾರ್ಧದಲ್ಲಿ ಸ್ಥಳೀಯವಾಗಿರುವ ಮರವಾಗಿದೆ ಮತ್ತು ಇದು ವಿಶ್ವದ ಅತ್ಯಂತ ವರ್ಣರಂಜಿತ ಮರವಾಗಿದೆ.  IFS ಆಪೀಸರ್‌ ಆಗಿರುವ ಸುಶಾಂತ ನಂದಾ ಎಂಬ ಅಧಿಕಾರಿ ಅಪರೂಪದ ಈ ನೀಲಗಿರಿ ಮರದ ಚಿತ್ರವನ್ನು ತಮ್ಮ Twitter  ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮೆಚ್ಚುಗೆ ಪಡೆದುಕೊಂಡಿದೆ. ನೀಲಗಿರಿ ಮರವು ಕಾಮನ ಬಿಲ್ಲಿನಂತೆ ಹಲವು ಬಣ್ಣಗಳನ್ನು ಹೊಂದಿದ್ದು ನಿಜಕ್ಕೂ ಪ್ರಕೃತಿ (Nature) ವಿಸ್ಮಯಕಾರಿ ಮರವನ್ನು ಸೃಷ್ಟಿಸಿದೆ.

ಇದನ್ನು ಓದಿರಿ:

ಗಿಡವೊಂದರಲ್ಲೆ 1269 Tomato ಬೆಳೆದ ಭೂಪ!, Guinness Record ನಲ್ಲಿ ದಾಖಲೆ

Plane crash : 133 ಜನರಿದ್ದ ವಿಮಾನ ಪತನ..ಹಲವರು ಮೃತಪಟ್ಟಿರುವ ಶಂಕೆ

ಕಾಮನಬಿಲ್ಲಿನ ಬಣ್ಣಗಳ ಹೊತ್ತ ಮರ

“ಈ ನೀಲಗಿರಿ ಮರಗಳು ಪ್ರತಿ ಋತುವಿನ ಉದ್ದಕ್ಕೂ ತೊಗಟೆಯು ಸಿಪ್ಪೆ ಸುಲಿಯುವುದರಿಂದ ಮಳೆಬಿಲ್ಲಿನ ಬಣ್ಣಗಳನ್ನು ಹೊಂದುತ್ತದೆ. ಇದು ಕೆಳಗಿನ ತಾಜಾ, ಗಾಢ ಬಣ್ಣದ ತೊಗಟೆಯನ್ನು ಬಹಿರಂಗಪಡಿಸುತ್ತದೆ ಮತ್ತು ಇದು ವಿಶ್ವದ ಅತ್ಯಂತ ವರ್ಣರಂಜಿತ ಮರವಾಗಿದೆ" ಎಂದು ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ನೀಲಗಿರಿ ಮರದ ಫೋಟೋ ಜೊತೆ ಈ ರೀತಿಯಾಗಿ ಮರದ ಬಗ್ಗೆ ಮಾಹಿತಿ ನೀಡುವ ಶೀರ್ಷಿಕೆಯನ್ನು ಬರೆದಿದ್ದಾರೆ.

Photo ನೋಡಿ ವಿಸ್ಮಯಗೊಂಡ ಜನ

Twitter ನಲ್ಲಿ ಈ ಚಿತ್ರವನ್ನು ಪೋಸ್ಟ್ ಮಾಡಿದ ನಂತರ, ಫೋಟೋಗಳು 700 ಲೈಕ್‌ಗಳನ್ನು ಗಳಿಸಿವೆ. ನೆಟ್ಟಿಗರು ಸುಂದರವಾದ ಮರವನ್ನು ನೋಡಿ ವಿಸ್ಮಯಗೊಂಡಿದ್ದಾರೆ. ಇದನ್ನು ಪ್ರಕೃತಿಯ ವಿಶಿಷ್ಟ ಚಿತ್ರ, ಸುಂದರ ಮರಗಳು, ವರ್ಣ ರಂಜಿತವಾಗಿದೆ, ಇದು ನಿಜಕ್ಕೂ ಕಾಮನಬಿಲ್ಲು ಎಂದು ಕರೆದಿದ್ದಾರೆ. ಇದು "ಪ್ರಕೃತಿಯಿಂದ ಚಿತ್ರಿಸಲ್ಪಟ್ಟ ವಿಶಿಷ್ಟವಾದ ಚಿತ್ರಕಲೆ" ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ಓದಿರಿ:

GOODNEWS: ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹ ಧನ.. ಅರ್ಜಿ ಸಲ್ಲಿಕೆ ಹೇಗೆ..?

ಪಪ್ಪಾಯ ಬೆಳೆಸಿ 10 ಲಕ್ಷ ಗಳಿಸಿ! 350 ಕ್ವಿಂಟಾಲ್‌ವರೆಗೆ ಉತ್ಪಾದನೆ, ವರ್ಷವಿಡೀ ಬೇಸಾಯ.

Pulp ಗಾಗಿ ಬೆಳೆಯುತ್ತಾರೆ ನೀಲಗಿರಿ

ಯೂಕಲಿಪ್ಟಸ್ ಎಂದು ಕರೆಯಲಾಗುವ ನೀಲಗಿರಿ ಮರವು ವೇಗವಾಗಿ ಬೆಳೆಯುವ ಮರವಾಗಿದ್ದು 60 ರಿಂದ 75 ಮೀಟರ್‌ವರೆಗೆ ಬೆಳೆಯುತ್ತದೆ. ಏಕೆಂದರೆ ಇದನ್ನು ತಿರುಳು ಉತ್ಪಾದನೆ ಮತ್ತು ಮರಕ್ಕೆ ವ್ಯಾಪಕವಾಗಿ ಬಳಸಲಾಗುತ್ತದೆ. ಯೂಕಲಿಪ್ಟಸ್ ಮರದಲ್ಲಿ ಬಹುವರ್ಣದ ಮರದ ಕಾಂಡವು ತೊಗಟೆ ಪುನರುತ್ಪಾದನೆಯ ವಿದ್ಯಮಾನದಿಂದ ಉಂಟಾಗುತ್ತದೆ.

Multi Colours ಗಳಲ್ಲಿರುವ ಮರದ ಮೇಲ್ಮೈ

ಪ್ರತಿ ಬೇಸಿಗೆಯಲ್ಲಿ ಮರವು ತನ್ನ ಹಳೆಯ ತೊಗಟೆಯನ್ನು ಕಳಚಿಕೊಂಡು, ತಾಜಾ ಹಸಿರು ತೊಗಟೆಯ ಚರ್ಮವನ್ನು ಹುಟ್ಟು ಹಾಕುತ್ತದೆ. ಈ ಹಸಿರು ತೊಗಟೆಯು ಕಾಲಾನಂತರದಲ್ಲಿ ಕೆಂಪು, ಕಡು ನೀಲಿ ಮತ್ತು ನೇರಳೆ ಮುಂತಾದ ವಿವಿಧ ಬಣ್ಣಗಳಾಗಿ ಬದಲಾಗುತ್ತದೆ ಮತ್ತು ಇದು ನೋಡಲು ಥೇಟ್ ಕಾಮನ ಬಿಲ್ಲಿನಂತೆ ಕಾಣುತ್ತದೆ.

ತೊಗಟೆಗಳ ವಿವಿಧ ವಿಭಾಗಗಳು ಸಿಪ್ಪೆ ಸುಲಿದಂತೆ, ಅವುಗಳನ್ನು ಅಂತಿಮವಾಗಿ ಹೊಸ ವರ್ಣರಂಜಿತ ತೊಗಟೆಯಿಂದ ಬದಲಾಯಿಸಲಾಗುತ್ತದೆ, ಇದು ಬಹುವರ್ಣದ ಅಥವಾ ಮಳೆಬಿಲ್ಲು ಬಣ್ಣದ ಮರದ ಒಟ್ಟಾರೆ ನೋಟವನ್ನು ನೀಡುತ್ತದೆ. ಮೊದಲ ಬಾರಿಗೆ ನೋಡಿದರೆ ಅದರ ಗಾಢವಾದ ಬಣ್ಣಗಳು ಮರವನ್ನು ಕೃತಕವಾಗಿ ಚಿತ್ರಿಸಲಾಗಿದೆ ಎನ್ನುವಂತೆ ಭಾಸವಾಗುತ್ತದೆ.

ಮತ್ತಷ್ಟು ಓದಿರಿ:

ವ್ಯಾಯಾಮ ಇಲ್ಲದೆ ತೆಳ್ಳಗಾಗೋದು ಹೇಗೆ..ಹೀಗೆ ಮಾಡಿದ್ರೆ ಸಾಕು

40,000 ರೂ.ನಲ್ಲಿ 66ಕಿಮೀ ಮೈಲೇಜ್ ನೀಡುವ ಯಮಹಾ ಸ್ಕೂಟರ್!