1. ಸುದ್ದಿಗಳು

ಡಿಎಪಿ ರಸಗೊಬ್ಬರ ಸಬ್ಸಿಡಿ 700 ರೂಪಾಯಿ ಹೆಚ್ಚಳ- 1200 ರೂಪಾಯಿ ಹಳೆಯ ದರದಲ್ಲಿ ಸಿಗಲಿದೆ ಡಿಎಪಿ

DAP

ಡಿಎಪಿ ರಸಗೊಬ್ಬರದ ಮೇಲೆ ರೈತರಿಗೆ ನೀಡುವ ಸಬ್ಸಿಡಿಯನ್ನು 700 ರೂ,ಗೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಈ ಮೊದಲು ಡಿಎಪಿ ರಸಗೊಬ್ಬರ ಖರೀದಿ ಮೇಲೆ ರೈತರಿಗೆ 500 ರೂ. ಸಬ್ಸಿಡಿ ನೀಡಲಾಗುತ್ತಿದ್ದು, ಅದನ್ನು ಈಗ 700 ರೂ.ಗೆ ಹೆಚ್ಚಿಸಲಾಗಿದೆ ಎಂದು ಸಚಿವ ಮನಸುಖ್ ಮಾಂಡವಿಯಾ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯ ಉನ್ನತಮಟ್ಟದ ಸಮಿತಿ ಕಳೆದ ತಿಂಗಳು ಡಿಎಪಿ ರಸಗೊಬ್ಬರದ ಸಬ್ಸಿಡಿಯನ್ನು ಶೇ. 140 ರಷ್ಟು ಏರಿಸುವ ತೀರ್ಮಾನವನ್ನು ತೆಗೆದುಕೊಂಡಿತ್ತು. ಬುಧವಾರ ಈ  ಕೇಂದ್ರ ಸಚಿವ ಸಂಪುಟವು ಡಿಎಪಿ ಮತ್ತು ಯೂರಿಯಾ ರಹಿತ ಇತರ ಕೆಲವು ರಸಗೊಬ್ಬರಗಳಿಗೆ 14,775 ಕೋಟಿ ಸಬ್ಸಿಡಿ ನೀಡಲು  ಅನುಮೋದನೆ ನೀಡಿದೆ.

ಕಳೆದ ವರ್ಷ ಡಿಎಪಿ ನೈಜ ಬೆಲೆ ಪ್ರತಿ ಚೀಲಕ್ಕೆ 1700 ರೂಪಾಯಿ ಇತ್ತು. ಇದರ ಮೇಲೆ ಕೇಂದ್ರ ಸರ್ಕಾರವು 500 ಸಬ್ಸಿಡಿ ನೀಡುತ್ತಿದೆ. ಆದ್ದರಿಂದ ಕಂಪನಿಗಳು ಗೊಬ್ಬರವನ್ನು ಪ್ರತಿ 50 ಕೆಜಿ ಚೀಲಕ್ಕೆ 1200 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದವು. ಆದರೆ ಕಳೆದ ತಿಂಗಳ ಹಿಂದೆ ಜಾಗತಿಕ ಬೆಲೆಗಳ ಏರಿಕೆಯಿಂದಾಗಿ ಡಿಎಪಿ ನೈಜ ಪೆಲೆ ದಿಡೀರನೆ ಪ್ರತಿ ಚೀಲಕ್ಕೆ 2400 ರೂಪಾಯಿ ಏರಿಕೆಯಾಗಿ ರೈತರಿಗೆ ಹೊರೆಯಾಗಿತ್ತು. ಇದಕ್ಕೆ ದೇಶಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಕೊನೆಗೆ ಕೇಂದ್ರ ಸರ್ಕಾರವು ಹಳೆಯ ದರದಲ್ಲಿಯೇ ಅಂದರೆ ಪ್ರತಿ ಚೀಲಕ್ಕೆ 1200 ರೂಪಾಯಿಯಂತೆ ನೀಡಲು ನಿರ್ಧರಿಸಿತ್ತು. ಬುಧವಾರ ನಡೆದ ಸಚಿವ ಸಂಪುಟದಲ್ಲಿ ಪ್ರತಿ ಚೀಲಕ್ಕೆ 1200 ರೂಪಾಯಿಯಂತೆ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ದಾಸ್ತಾನಿರುವ ಡಿಎಪಿ ಗೊಬ್ಬರವನ್ನು ಹಳೆಯ ದರಕ್ಕೆ ಮಾರಾಟ ಮಾಡುವಂತೆ ರಸಗೊಬ್ಬರ ಉತ್ಪಾದಕ ಸಂಸ್ಥೆಗಳಿಗೆ ಸರ್ಕಾರ ತಿಳಿಸಿದೆ.

ಇದೇ ಸಂದರ್ಭದಲ್ಲಿ ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಒಳನಾಡು ಜಲಸಾರಿಗೆ ಮಾರ್ಗದ ಅಭಿವೃದ್ಧಿಗೆ ನಿರ್ಣಯ ತೆಗೆದುಕೊಂಡರು. ಸಮುದ್ರದ ಆಳದ ಮಿಷನ್ ರಚನೆಗೆ ಕೇಂದ್ರ ಸಂಪುಟ ಒಪ್ಪಿಗೆ ಸಿಕ್ಕಿದೆ. ಇದರ ಮೂಲಕ ಸಾಕಷ್ಟು ಅಭಿವೃದ್ಧಿ ಕಾಣಬಹುದಾಗಿದೆ ಎಂದರು.

ಸಮುದ್ರದ 6 ಸಾವಿರ ಮೀಟರ್ ಒಳಭಾಗದಲ್ಲಿ ಖನಿಜಗಳಿವೆ. ಸಮುದ್ರದ ಆಳದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಅಧ್ಯಯನ ನಡೆಯಲಿದೆ. ಅಡ್ವಾನ್ಸ್ ಮರೀನ್ ಸ್ಟೇಷನ್ ಸ್ಥಾಪಿಸಲಾಗುತ್ತದೆ ಎಂದು ಸಚಿವ ಜಾವಡೇಕರ್ ಮಾಹಿತಿ ನೀಡಿದರು.

Published On: 17 June 2021, 11:53 AM English Summary: Govt hikes subsidies for Dap

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.