News

ಬೆಲೆ ಏರಿಕೆ ಬಿಸಿಯಲ್ಲಿದ್ದ ರೈತರಿಗೆ ಬಂಪರ್‌.. ಕೇಂದ್ರದಿಂದ ರಸಗೊಬ್ಬರಕ್ಕೆ ಮತ್ತೊಮ್ಮೆ  ಭರ್ಜರಿ ಸಬ್ಸಿಡಿ ಘೋಷಣೆ

22 May, 2022 11:15 AM IST By: Maltesh
Subsidy

LPG ಸಿಲಿಂಡರ್‌ ಸಬ್ಸಿಡಿ, ಪೆಟ್ರೋಲ್‌, ಡಿಸೇಲ್‌ಗಳ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಿ, ಬೆಲೆ ಏರಿಕೆಯ ಬಿಸಿಯಲ್ಲಿದ್ದ ಜನಸಾಮಾನ್ಯರಿಗೆ ಗುಡ್‌ ನ್ಯೂಸ್‌ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ರೈತಾಪಿ ವರ್ಗಕ್ಕೂ ಬಂಪರ್‌ ಸುದ್ದಿ ನೀಡಿದೆ. ಹೌದು ರೈತರಿಗೆ ಮತ್ತಷ್ಟುಸಹಾಯ ಒದಗಿಸಲು ಹೆಚ್ಚುವರಿಯಾಗಿ 1.1 ಲಕ್ಷ ಕೋಟಿ ರೂ ರಸಗೊಬ್ಬರಕ್ಕೆ ಸಬ್ಸಿಡಿ ನೀಡಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

IMPORTANT: PPF ಖಾತೆದಾರರೆ ಗಮನವಿರಲಿ..ಈ ನಿಯಮ ಉಲ್ಲಂಘಿಸಿದ್ರೆ ನಿಮ್ಮ ಬಡ್ಡಿ ಹಣ ಹೋಗೋದು ಫಿಕ್ಸ್‌..!

ಅಚ್ಚರಿ ಆದ್ರೂ ಸತ್ಯ: ಪೇಪರ್‌ Shortage ಅಂತಾ ಪರೀಕ್ಷೆ ಕ್ಯಾನ್ಸಲ್‌..! ಆತಂಕದಲ್ಲಿ 35 ಲಕ್ಷ ವಿದ್ಯಾರ್ಥಿಗಳು

ಜಾಗತಿಕವಾಗಿ ರಸಗೊಬ್ಬರಗಳ ಬೆಲೆಯಲ್ಲಿ ತೀವ್ರ ಹೆಚ್ಚಳದ ನಡುವೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ , ಬೆಲೆ ಏರಿಕೆಯಿಂದ ರೈತರನ್ನು ಮತ್ತಷ್ಟು ರಕ್ಷಣೆ  ಮಾಡಲು ಸರ್ಕಾರವು 1.10 ಲಕ್ಷ ಕೋಟಿ ರೂಪಾಯಿಗಳ ಹೆಚ್ಚುವರಿ ರಸಗೊಬ್ಬರ ಸಬ್ಸಿಡಿಯನ್ನು ನೀಡುತ್ತದೆ ಎಂದು ಹೇಳಿದರು.

ಇದರೊಂದಿಗೆ ಸರ್ಕಾರದ ಒಟ್ಟು ರಸಗೊಬ್ಬರ ಸಬ್ಸಿಡಿಯು ಪ್ರಸಕ್ತ 2022-23ರ ಆರ್ಥಿಕ ವರ್ಷದಲ್ಲಿ ದಾಖಲೆಯ 2.15 ಲಕ್ಷ ಕೋಟಿ ರೂ. ಜಾಗತಿಕ ಮಟ್ಟದಲ್ಲಿ ರಸಗೊಬ್ಬರ ಬೆಲೆ ಏರಿಕೆಯಾಗುತ್ತಿದ್ದರೂ ಇಂತಹ ಬೆಲೆ ಏರಿಕೆಯಿಂದ ರೈತರನ್ನು ರಕ್ಷಣೆ ಮಾಡಿದ್ದೇವೆ.

ಬಜೆಟ್‌ನಲ್ಲಿ 1.05 ಲಕ್ಷ ಕೋಟಿ ರಸಗೊಬ್ಬರ ಸಬ್ಸಿಡಿ ಜೊತೆಗೆ 1.10 ಲಕ್ಷ ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ ಎಂದು ಸೀತಾರಾಮನ್ ಟ್ವೀಟ್ ಮಾಡಿದ್ದಾರೆ. 2022-23ರ ಬಜೆಟ್‌ನಲ್ಲಿ ರಸಗೊಬ್ಬರ ಸಬ್ಸಿಡಿ ಬಿಲ್ 1.05 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.

Share ಮಾರ್ಕೇಟ್‌ನಲ್ಲಿ ಸ್ವಲ್ಪನಾದ್ರು ಹಣ ಗಳಿಸೋದು ಹೇಗೆ..? ಇಲ್ಲಿವೆ Top 5 ಸೂತ್ರಗಳು

ಇದನ್ನು ಓದಿರಿ:40,000 ರೂ.ನಲ್ಲಿ 66ಕಿಮೀ ಮೈಲೇಜ್ ನೀಡುವ ಯಮಹಾ ಸ್ಕೂಟರ್!

2021-22ರಲ್ಲಿ 1,62,132 ಕೋಟಿ ರೂ. ಜಾಗತಿಕ ಬೆಲೆಗಳ ತೀವ್ರ ಏರಿಕೆಯಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ರಸಗೊಬ್ಬರ ಸಬ್ಸಿಡಿ ಬಿಲ್ 2-2.5 ಲಕ್ಷ ಕೋಟಿ ರೂಪಾಯಿಗಳ ನಡುವೆ ಇರಬಹುದೆಂದು ರಾಸಾಯನಿಕಗಳು ಮತ್ತು ರಸಗೊಬ್ಬರ ಖಾತೆ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.

ಮುಂಗಾರು ಅವಧಿಯ ರಸಗೊಬ್ಬರಕ್ಕೆ ₹ 60,939 ಕೋಟಿ ಸಬ್ಸಿಡಿ..!

2022-23ನೇ ಆರ್ಥಿಕ ವರ್ಷದ ಮೊದಲ ಆರು ತಿಂಗಳ ಅವಧಿಗೆ ಡಿಎಪಿ ಸೇರಿ ಪಿ ಆ್ಯಂಡ್‌ ಕೆ ರಸಗೊಬ್ಬರಗಳ ಮೇಲೆ 60,939 ಕೋಟಿ ರೂ. ಸಬ್ಸಿಡಿ ಒದಗಿಸುವ ಪ್ರಸ್ತಾವಕ್ಕೆ ಪ್ರಧಾನಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಇತ್ತೀಚಿಗೆ ಒಪ್ಪಿಗೆ ನೀಡಿದೆ.

P&K ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಖಾರಿಫ್ ಸೀಸನ್ -2022 (01.04.2022 ರಿಂದ 30.09.2022 ರವರೆಗೆ ಅನ್ವಯವಾಗುವ) NBS ದರಗಳ ಆಧಾರದ ಮೇಲೆ ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಈ ರಸಗೊಬ್ಬರಗಳ ಸುಗಮ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಒದಗಿಸಲಾಗುತ್ತದೆ.

ಉತ್ತಮ ಕೃಷಿ ಮತ್ತು ಆದಾಯಕ್ಕಾಗಿ ಹೂಕೋಸು ಕೃಷಿ! ಇಲ್ಲಿದೆ ಹೂಕೋಸು ಬೆಳೆಯ ಸಮಗ್ರ ಮಾಹಿತಿ…

Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…

ಕೇಂದ್ರದ ಈ ನಿರ್ಧಾರದಿಂದ ಮುಂಗಾರು ಅವಧಿಯಲ್ಲಿ ಡಿಎಪಿ ಸೇರಿದಂತೆ ಪಾಸ್ಫರಸ್‌ ಹಾಗೂ ಪೊಟ್ಯಾಶಿಯಂ ಅಂಶವಿರುವ ರಸಗೊಬ್ಬರಗಳು ಸಬ್ಸಿಡಿ ದರದಲ್ಲಿ ರೈತರಿಗೆ ದೊರೆಯಲಿವೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಿಎಪಿ ಹಾಗೂ ಅದರ ಕಚ್ಚಾ ವಸ್ತುಗಳಾದ ಫಾಸ್ಪರಸ್‌, ಪೊಟ್ಯಾಶಿಯಂ ದರಗಳ ಏರಿಕೆಯಾಗಿದೆ. ಸಾಗಣೆ ವೆಚ್ಚ, ಉತ್ಪಾದನಾ ವೆಚ್ಚಗಳ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಏಪ್ರಿಲ್‌ನಿಂದ ಸೆಪ್ಟೆಂಬರ್‌ ಅವಧಿಗೆ ರಸಗೊಬ್ಬರಗಳ ಮೇಲೆ 60,939 ಕೋಟಿ ರೂ. ಸಬ್ಸಿಡಿ ಮೊತ್ತವನ್ನು 6 ತಿಂಗಳ ಅವಧಿಗೆ ಮೀಸಲಿರಿಸಲು ಒಪ್ಪಿಗೆ ಸೂಚಿಸಲಾಗಿದೆ ..