1. ಸುದ್ದಿಗಳು

7th Pay Commission: ಇನ್ಮುಂದೆ ವೇತನ ಆಯೋಗದ ಮೇಲೆ ನಿರ್ಧಾರವಾಗಲ್ಲ ನೌಕರರ ಸಂಬಳ..ಯಾಕೆ..?

Maltesh
Maltesh
Cash

ಫಿಟ್‌ಮೆಂಟ್ ಅಂಶದಿಂದ ಸಂಬಳವನ್ನು ಹೆಚ್ಚಿಸುವ ಪದ್ದತಿಗೆ ಪರ್ಯಾಯವಾಗಿ, ಇದೀಗ ಹೊಸ ಸೂತ್ರದ ಅಡಿ ಮೂಲ ವೇತನವನ್ನು ಲೆಕ್ಕಾಚಾರ ಹಾಕುವ  ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದಲ್ಲದೇ ಪ್ರತಿ ವರ್ಷ ಮೂಲ ವೇತನ ಹೆಚ್ಚಿಸುವ ಯೋಜನೆಯೂ ಕೂಡ ಇದೆ ಎನ್ನಲಾಗಿದೆ. ಆದರೆ, ಈ ಹೊಸ ಸೂತ್ರವು 2024 ರ ನಂತರ ಜಾರಿಗೆ ಬರುವ ಸಾಧ್ಯತೆಯಿದೆ ಎಂದೂ ಕೂಡ ತಿಳಿಸಲಾಗಿದೆ.

ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಭರ್ಜರಿ ಕೊಡುಗೆ: ಕಾಲೇಜು ಪ್ರವೇಶಕ್ಕೆ 25,000 ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ₹8 ಲಕ್ಷ ನೀಡಲಿದೆ ಸರ್ಕಾರ!

ಪ್ರತಿ ವರ್ಷ ಮೂಲ ವೇತನ  ನಿಗದಿ

7ನೇ ವೇತನ ಆಯೋಗದ (7th Pay Commission) ಶಿಫಾರಸುಗಳನ್ನು 2016ರಲ್ಲಿ ಜಾರಿಗೊಳಿಸಲಾಗಿತ್ತು. ಮೂಲಗಳ ಪ್ರಕಾರ, ಕೇಂದ್ರ ನೌಕರರ ವೇತನವನ್ನು ನಿರ್ಧರಿಸಲು ಹೊಸ ಸೂತ್ರ ಜಾರಿಗೆ ಬರುವ ಸಾಧ್ಯತೆ ಇದ್ದು, ಪ್ರತಿ ವರ್ಷ ಕೇಂದ್ರ ನೌಕರರ ವೇತನವನ್ನು ನಿಗದಿಪಡಿಸುವ ಗುರಿ ಹೊಂದಲಾಗಿದೆ ಎನ್ನಲಾಗಿದೆ.

ಆದರೆ, ಈ ವಿಚಾರದಲ್ಲಿ ಸರ್ಕಾರದಿಂದ ಯಾವುದೇ ದೃಢೀಕರಣ ಬಂದಿಲ್ಲ. ವೇತನ ಆಯೋಗದಿಂದ ಪ್ರತ್ಯೇಕವಾಗಿ ವೇತನವನ್ನು ಹೆಚ್ಚಿಸುವ ಸೂತ್ರವನ್ನು ಪರಿಗಣಿಸುವ ಸಮಯ ಇದೀಗ ಬಂದಿದೆ ಎಂದು ಮೂಲಗಳು ವರದಿ ಮಾಡಿವೆ.

Aykroyd ಸೂತ್ರವನ್ನು ಕೇಂದ್ರ ನೌಕರರ ವೇತನ ಹೆಚ್ಚಳಕ್ಕೆ ಪರಿಗಣಿಸಲಾಗುವುದು ಎನ್ನಲಾಗಿದೆ. ಈ ಹೊಸ ಸೂತ್ರದ ಕುರಿತು ದೀರ್ಘಕಾಲದಿಂದ ಚರ್ಚೆ ನಡೆಯುತ್ತಿದೆ. ಪ್ರಸ್ತುತ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

Atal Pension Yojana: 4 ಕೋಟಿಗೂ ಹೆಚ್ಚು ಜನರಿಗೆ ಲಾಭವಾದ ಈ ಯೋಜನೆಯ ಲಾಭ ನೀವು ಪಡೆದಿದ್ದೀರಾ?

ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!

ವೇತನ ರಚನೆಗೆ ಹೊಸ ಸೂತ್ರ..?

7 ನೇ ವೇತನ ಆಯೋಗವನ್ನು ಶಿಫಾರಸು ಮಾಡುವ ಸಮಯದಲ್ಲಿ, ನ್ಯಾ. ಮಾಥುರ್ ಅವರು ವೇತನ ರಚನೆಯನ್ನು ಹೊಸ ಸೂತ್ರದ ಕಡೆಗೆ (Aykroyd Formula) ಸರಿಸಲು ಬಯಸುವುದಾಗಿ ಸೂಚಿಸಿದ್ದರು. Aykroyd ಸೂತ್ರವನ್ನು ಲೇಖಕ ವ್ಯಾಲೇಸ್ ರುಡ್ಡೆಲ್ Aykroyd ಅವರು ನೀಡಿದ್ದಾರೆ.ಇದರಲ್ಲಿ, ಉದ್ಯೋಗಿಯ ಜೀವನ ವೆಚ್ಚದ ಮೇಲಿನ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಸಂಬಳವನ್ನು ನಿಗದಿಪಡಿಸಲಾಗಿದೆ .ಸದ್ಯ ದಿನದಿಂದ ದಿನಕ್ಕೆ ಏರುತ್ತಿರುವ ಹಣದುಬ್ಬರದ ಕಾಲದಲ್ಲಿ  ಉದ್ಯೋಗಿಗಳಿಗೆ ಅದಕ್ಕೆ ಅನುಗುಣವಾಗಿ ಸಂಬಳವನ್ನು ನೀಡುವುದು ಅವಶ್ಯಕವಾದ ವಿಷಯವಾಗಿದೆ.

ಗುಡ್‌ ನ್ಯೂಸ್‌: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!

ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!

ಇದರಲ್ಲಿ ಎಲ್ಲ ವರ್ಗದ ನೌಕರರು ಸಮಾನ ಪ್ರಯೋಜನಗಳನ್ನು ಪಡೆಯುತ್ತಾರೆ ಎಂಬುದು ಸರ್ಕಾರದ ಅನಿಸಿಕೆಯಾಗಿದೆ. ಪ್ರಸ್ತುತ ಗ್ರೇಡ್-ಪೇ ಪ್ರಕಾರ, ಪ್ರತಿಯೊಬ್ಬರ ವೇತನದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಆದರೆ, ಹೊಸ ಸೂತ್ರಗಳ ಆಗಮನದಿಂದ, ಈ ಅಂತರವನ್ನು ಕಡಿಮೆ ಮಾಡಲು ಪ್ದ್ರಯತ್ನಿಸಲಾಗುವುದು ಎನ್ನಲಾಗಿದೆ.

ಸರ್ಕಾರಿ ಇಲಾಖೆಗಳಲ್ಲಿ ಪ್ರಸ್ತುತ ಒಟ್ಟು  14 ವೇತನ ಶ್ರೇಣಿಗಳಿವೆ. ಪ್ರತಿ ವೇತನ ಶ್ರೇಣಿಯು ಸಾಮಾನ್ಯ ನೌಕರರಿಂದ ಹಿಡಿದು ಅಧಿಕಾರಿಗಳನ್ನು ಒಳಗೊಂಡಿರುತ್ತದೆ. ಹೊಸ ಸೂತ್ರದ ಸಲಹೆ ಒಳ್ಳೆಯದು, ಆದರೆ ಇಂತಹ ಯಾವುದೇ ಸೂತ್ರವನ್ನು ಇದುವರೆಗೆ ಚರ್ಚಿಸಲಾಗಿಲ್ಲ.   

Published On: 28 May 2022, 12:44 PM English Summary: Govt Employees get salary on new formula

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2022 Krishi Jagran Media Group. All Rights Reserved.