1. ಸುದ್ದಿಗಳು

GEM 1 ಲಕ್ಷ ಕೋಟಿ ವಹಿವಾಟು ಪ್ರಧಾನಿ ಮೋದಿ ಮೆಚ್ಚುಗೆ!

Kalmesh T
Kalmesh T
Govt E marketplace worth Rs 1 trillion: PM Modi applauds

ದೇಶದ ಸಣ್ಣ ಗಾತ್ರದ ಉದ್ದಿಮೆಗಳಿಂದ ಖರೀದಿಸುವುದಕ್ಕೆಂದು ರಚಿಸಲಾಗಿದ್ದ  Govt E-Marketplace  Website ಒಂದು ವರ್ಷದಲ್ಲಿ 1ಲಕ್ಷ ಕೋಟಿ ರು. ವಹಿವಾಟಿನ ದಾಖಲೆ ಮಾಡಿದೆ. GEM ನ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಸಚಿವಾಲಯಗಳು ಹಾಗೂ ಇಲಾಖೆಗಳಿಗೆ ಬೇಕಾದ ವಸ್ತುಗಳನ್ನು ದೇಶದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ  MSME  ಗಾತ್ರದ ಉದ್ದಿಮೆಗಳಿಂದ ಖರೀದಿಸುವುದಕ್ಕೆಂದು ರಚಿಸಲಾಗಿದ್ದ ಗವರ್ನ್‌ಮೆಂಟ್‌ ಇ-ಮಾರ್ಕೆಟ್‌ಪ್ಲೇಸ್‌ (ಜಿಇಎಂ-ಜೆಮ್‌) Website ಒಂದು ವರ್ಷದಲ್ಲಿ 1ಲಕ್ಷ ಕೋಟಿ ರು. ವಹಿವಾಟು ನಡೆಸಿ ದಾಖಲೆ ಮಾಡಿದೆ. 2016ರಲ್ಲಿ GEM ಸ್ಥಾಪನೆಯಾದ ನಂತರ ಒಂದು ವರ್ಷದಲ್ಲಿ ನಡೆಸಿದ ಅತಿಹೆಚ್ಚು ವಹಿವಾಟು ಇದಾಗಿದೆ. ಜೆಮ್‌ನ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿರಿ:

Big Update! FD ಖಾತೆ ತೆರೆಯಿರಿ 1,50,000 ಪಡೆಯಿರಿ!

ಮೆಚ್ಚುಗೆ ಸೂಚಿಸಿ ಮೋದಿ Tweet!

‘ಒಂದೇ ವರ್ಷದಲ್ಲಿ ಜೆಮ್‌ 1 ಲಕ್ಷ ಕೋಟಿ ರೂಪಾಯಿಯ ಮೊತ್ತದ ಆರ್ಡರ್‌ ಪಡೆದಿದೆ. ಕಳೆದ ವರ್ಷಗಳಿಗಿಂತ ಇದು ಗಣನೀಯ ಪ್ರಮಾಣದ ಏರಿಕೆ. ವಿಶೇಷವಾಗಿ ದೇಶದ MSME  ಕ್ಷೇತ್ರವನ್ನು ಸಬಲೀಕರಣಗೊಳಿಸಲು ಸ್ಥಾಪಿಸಿದ ವೇದಿಕೆ ಜೆಮ್‌ ಆಗಿದೆ. ಇಲ್ಲಿಗೆ ಶೇ.57% ಸರಕುಗಳು ಎಂಎಸ್‌ಎಂಇಯಿಂದ ಬಂದಿವೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಸಚಿವಾಲಯಗಳು, ಕೇಂದ್ರ ಸರ್ಕಾರಿ ಇಲಾಖೆಗಳು ಹಾಗೂ ಸಂಸ್ಥೆಗಳು ಪ್ರತಿ ವರ್ಷ ತಮಗೆ ಬೇಕಾದ ಲಕ್ಷಾಂತರ ಕೋಟಿ ರು. ಮೊತ್ತದ ವಸ್ತುಗಳನ್ನು ಎಲ್ಲೆಲ್ಲಿಂದಲೋ ಖರೀದಿಸುವ ಬದಲು ನಮ್ಮ ದೇಶದ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳಿಂದಲೇ ಖರೀದಿಸಬೇಕು ಎಂದು 2016ರಲ್ಲಿ ಕೇಂದ್ರ ಸರ್ಕಾರ ನಿಯಮ ಜಾರಿಗೊಳಿಸಿತ್ತು.

ಇನ್ನಷ್ಟು ಓದಿರಿ:

NABARD ನಲ್ಲಿ ನೇಮಕಾತಿ; 60,000 ಸಂಬಳ!

ಅದರಂತೆ MSME ತಮ್ಮ ಉತ್ಪನ್ನಗಳನ್ನು ಸರ್ಕಾರಕ್ಕೆ ಮಾರಲೆಂದೇ GEM ಎಂಬ ವೆಬ್‌ಸೈಟನ್ನು ಕೂಡ ಆರಂಭಿಸಿತ್ತು. ಅದರಲ್ಲಿ 2021-22ನೇ ಸಾಲಿನಲ್ಲಿ ದಾಖಲೆಯ 1 ಲಕ್ಷ ಕೋಟಿ ರು. ವ್ಯವಹಾರ ನಡೆದಿದೆ. ಈ ವೆಬ್‌ಸೈಟಿನಲ್ಲಿ ಸರ್ಕಾರಿ ಸಂಸ್ಥೆಗಳು ಆನ್‌ಲೈನ್‌ ಮೂಲಕ ಕರೆಯುವ ಟೆಂಡರ್‌ಗೆ ದೇಸಿ ಉತ್ಪಾದಕರು ಬಿಡ್‌ ಸಲ್ಲಿಕೆ ಮಾಡದಿದ್ದರೆ ಮಾತ್ರ ಇದರ ಹೊರಗೆ ವಸ್ತುಗಳನ್ನು ಖರೀದಿಸಬಹುದಾಗಿದೆ.

508% ಬೆಳವಣಿಗೆ: 

ಸುದ್ದಿಗಾರರೊಂದಿಗೆ ಮಾತನಾಡಿದ GEM ಸಿಇಒ ಪ್ರಶಾಂತ್ ಕುಮಾರ್ ಸಿಂಗ್, ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (ಸಿಪಿಎಸ್‌ಇ) ಜಿಇಎಂನಲ್ಲಿ ಸುಮಾರು ₹ 43,000 ಕೋಟಿ ಮೌಲ್ಯದ ಸರಕು ಮತ್ತು ಸೇವೆಗಳನ್ನು ಸಂಗ್ರಹಿಸಿದ್ದು, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಅಂದಾಜು 508% ಬೆಳವಣಿಗೆಯನ್ನು ತೋರಿಸಿದೆ. ಒಟ್ಟು ಜಿಎಂವಿಗೆ ಸುಮಾರು 30% ಕೊಡುಗೆಯೊಂದಿಗೆ ರಾಜ್ಯಗಳು ಪ್ರಮುಖ ಪಾಲುದಾರರಾಗಿ ಮುಂದುವರೆದಿದೆ ಎಂದು ಹೇಳಿದರು.

ಮತ್ತಷ್ಟು ಓದಿರಿ:

PM ಕಿಸಾನ್ ಸಮ್ಮಾನ್ ನಿಧಿ ಯೋಜನೆ; 4350 ಕೋಟಿ ವಾಪಸ್ ಪಡೆಯಲು ನಿರ್ಧಾರ!

ರಕ್ಷಣಾ ಸಚಿವಾಲಯವು ಜಿಇಎಂನಲ್ಲಿ ಅತ್ಯಧಿಕ ಸಂಪಾದನೆದಾರರಾಗಿದ್ದರೆ, ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್‌ಯು) ವೇದಿಕೆಯಲ್ಲಿ ಒಟ್ಟು ಸಂಗ್ರಹಣೆಯಲ್ಲಿ ಸುಮಾರು 25% ರಷ್ಟಿದೆ ಎಂದು ಅವರು ತಿಳಿಸಿದರು.

ಸಾರ್ವಜನಿಕ ಸಂಗ್ರಹಣೆ ಪ್ರಕ್ರಿಯೆಯಲ್ಲಿ ಹೆಚ್ಚು ಪಾರದರ್ಶಕತೆಯನ್ನು ತರಲು ಜಿಇಎಂ ಮಹತ್ವದ ಬಗ್ಗೆ ತಿಳಿಸಿದ  ಸಿಂಗ್, ಈ ಹಿಂದೆ ಪ್ರತಿಯೊಂದು ಇಲಾಖೆಯು ವಿಭಿನ್ನ ಸಂಗ್ರಹಣೆ ನಿಯಮಗಳನ್ನು ಹೊಂದಿತ್ತು ಮತ್ತು  ವಿವಿಧ ಇಲಾಖೆಗಳಿಂದ ವ್ಯಾಖ್ಯಾನವೂ ವಿಭಿನ್ನವಾಗಿತ್ತು ಇದು ಭ್ರಷ್ಟಾಚಾರಕ್ಕೆ ಕಾರಣವಾಗಿತ್ತು. ಆದರೆ ಪಾರದರ್ಶಕತೆ, ಭ್ರಷ್ಟಾಚಾರದ ವ್ಯಾಪ್ತಿಯನ್ನು ಕಡಿಮೆ ಮಾಡುವುದರ ಮೂಲಕ ಜಿಇಎಂ ಪ್ರಕ್ರಿಯೆಯನ್ನು ಸುಗಮಗೊಳಿಸಿದೆ  ಎಂದು ಹೇಳಿದ್ದಾರೆ.

ಇದನ್ನೂ ಓದಿರಿ:

ರೈತರಿಗೆ Good news BASF ತಂದಿದೆ “Vesnit Complete” ಸಸ್ಯನಾಶಕ !

Published On: 25 March 2022, 04:41 PM English Summary: Govt E marketplace worth Rs 1 trillion: PM Modi applauds

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.