ರೇಷ್ಮೆ ಮತ್ತು ರೇಷ್ಮೆ ಕೃಷಿ ಕರ್ನಾಟಕದ ಹೆಮ್ಮೆ ಎಂದು ಹೇಳಬಹುದು. ರೇಷ್ಮೆ ಕೃಷಿಗೆ ಮತ್ತು ಅದರ ಉತ್ಪನ್ನಗಳಾದ ಬಟ್ಟೆ, ಸೀರೆಗಳಿಗೆ ಎಲ್ಲಿಲ್ಲದ ಬೆಡಿಕೆ ಕೂಡ ಇದೆ. ರೇಷ್ಮೆ ಸೀರೆ ಎಂದರೆ ಸಾಕು ಎಷ್ಟೊ ಮಹಿಳೆಯರು ಪ್ರಾಣ ಬೀಡುತ್ತಾರೆ . ಅಂತಹ ರೇಷ್ಮೆ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೀಡಲಿದೆ. ಸಹಾಯಧನದ ಮೂಲಕ ರೇಷ್ಮೆ ಕೃಷಿಕರಿಗೆ ನೆರವು ನೀಡಲಿದೆ. ಇಲ್ಲಿದೆ ಸಂಪೂರ್ಣವಾದ ವಿವರ.
ಈ ಎಲ್ಲ ಸೌಲಭ್ಯಗಳು ಸರಿಯಾದ ಕಾಲಕ್ಕೆ ಸರ್ಕಾರದಿಂದ ಬಿಡುಗಡೆಯಾಗುತ್ತವೆ. ರೈತರು ಪ್ರೈವೇಟ್‌ನವರಿಂದ ಹೆಚ್ಚಿನ ಬೆಲೆಗೆ ಹಿಪ್ಪುನೇರಳೆ ಸಸಿ ಖರೀದಿ ಮಾಡುವುದನ್ನು ತಪ್ಪಿಸಲು ಇಲಾಖೆ ಅರಣ್ಯ ಇಲಾಖೆ ಸಹಯೋಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹಿಪ್ಪುನೇರಳೆ ಸಸಿಗಳನ್ನು ಬೆಳೆಸಿ ರೈತರಿಗೆ ಕನಿಷ್ಠ ಬೆಲೆಗೆ ನೀಡುವ ಕಾರ್ಯ ಮಾಡುತ್ತಿದ್ದು ಈ ಸವಲತ್ತನ್ನು ರೈತರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವರು ಡಿ. ಗ್ರೂಪ್ ನೌಕರರನ್ನು ಬಳಸಿಕೊಂಡು ಇಲಾಖೆಯ ಫಾರಂಗಳಲ್ಲಿ ರೇಷ್ಮೆ ಸಸಿಗಳನ್ನು ಬೆಳೆಸಿ ರೈತರಿಗೆ ಕೊಡುವ ಕಾರ್ಯ ಮಾಡಲಾಗುತ್ತಿದೆ.
ಇದನ್ನೂ ಓದಿರಿ:
ಗುಡ್ ನ್ಯೂಸ್: ಮನೆ ಮೇಲೆ ಸೋಲಾರ್ ಅಳವಡಿಸಲು ಕೇಂದ್ರ ಸರ್ಕಾರ ನೀಡತ್ತೆ ಹಣ! ಶೇ.40ರಷ್ಟು ಸಬ್ಸಿಡಿ
ಗುಡ್ ನ್ಯೂಸ್: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!
ರೇಷ್ಮೆ ಕೃಷಿಗೆ ನೆರವು ಮತ್ತು ಸಹಾಯಧನ
1) ಹಿಪ್ಪುನೇರಳೆ ನಾಟಿಪ್ರೋತ್ಸಾಹ: ಪ.ಜಾತಿ/ ಪ.ಪಂಗಡದವರಿಗೆ ಎಕರೆಗೆ ರೂ.5500. ಇತರೆ ವರ್ಗದವರಿಗೆ ಎಕರೆಗೆ 4125 ರೂ. ಸಹಾಯಧನ ನೀಡಲಾಗುತ್ತದೆ . ಗರಿಷ್ಠ 2 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳ ಕೃಷಿಗೆ ಸಹಾಯಧನ ಪಡೆಯಬಹುದು.
2) ಹನಿ ನೀರಾವರಿ ಸಹಾಯಧನ: ಪ.ಜಾತಿ/ಪ.ಪಂಗಡದವರಿಗೆ ಪ್ರತಿ ಎಕರೆಗೆ 18000 ರೂ. ಇತರೆ ವರ್ಗದವರಿಗೆ 15000 ರೂ. ಗರಿಷ್ಠ 2 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳ ಕೃಷಿಗೆ ಸಹಾಯಧನ ಪಡೆಯಬಹುದು.
3) ಹುಳು ಸಾಕಾಣಿಕೆ ಮನೆ: 15 X25 ಅಳತೆಯ ಹುಳು ಸಾಕಾಣಿಕೆ ಮನೆ, 1/2 ಎಕರೆ ಹಿಪ್ಪುನೇರಳೆ ತೋಟಕ್ಕೆ 25000 ರೂ. ಪರಿಹಾರಧನ ನೀಡಲಾಗುತ್ತದೆ. 20 X 30 ಅಳತೆ ಹುಳು ಸಾಕಾಣಿಕೆ ಮನೆ ಹಾಗೂ 1 ಎಕರೆ ಹಿಪ್ಪುನೇರಳೆ ತೋಟಕ್ಕೆ 50000 ರೂ. ಸಹಾಯಧನ ನೀಡಲಾಗುತ್ತದೆ. 20 X 50 ಅಳತೆಯ ಹುಳು ಸಾಕಾಣಿಕೆ ಮನೆ ಹಾಗೂ 2 ಎಕರೆ ಹಿಪ್ಪುನೇರಳೆ ತೋಟಕ್ಕೆ 75000 ರೂ. ಸಹಾಯಧನ ನೀಡಲಾಗುತ್ತದೆ. ಪ.ಜಾತಿ/ ಪ.ಪಂಗಡದವರಿಗೆ 90000 ರೂ. ಹಾಗೂ ಆರ್.ಸಿ.ಸಿ. ಕಟ್ಟಡಕ್ಕೆ 1,23,000 ರೂ. ಸಹಾಯಧನ ನೀಡಲಾಗುತ್ತದೆ.
ರೈತರಿಗೆ ಸಿಹಿಸುದ್ದಿ : ಹಸು-ಎಮ್ಮೆ ಖರೀದಿಗೆ ರೂ.20 ಸಾವಿರ ಸಬ್ಸಿಡಿ! ರಾಜ್ಯ ಸರ್ಕಾರದ ಭರ್ಜರಿ ಕೊಡುಗೆ!
ಕಿಸಾನ್ ಕ್ರೆಡಿಟ್ ಕಾರ್ಡ್ ನವೀಕರಣ: ಡೈರಿ ರೈತರಿಗೆ 15 ಲಕ್ಷ ಮಂಜೂರು!
4) ಚಂದ್ರಿಕೆ ಮನೆಸಹಾಯಧನ: ಮನೆ ಅಳತೆಯನ್ನು ಆಧರಿಸಿ ಪ.ಜಾತಿ/ಪ.ಪಂ ಇವರಿಗೆ ಕನಿಷ್ಠ 24000 ರೂ. ಗರಿಷ್ಠ 75000 ರೂ. ಹಾಗೂ ಇತರೆ ವರ್ಗದವರಿಗೆ ಕನಿಷ್ಠ 18000 ರೂ. ಗರಿಷ್ಠ 50000 ರೂ. ಸಹಾಯಧನ ನೀಡಲಾಗುತ್ತದೆ.
5) ಉಪಕರಣಗಳ ಸಹಾಯಧನ: ಪ.ಜಾತಿ/ಪ.ಪಂ ಶೇ.75ರಷ್ಟು ಅಂದರೆ ಗರಿಷ್ಠ 30000 ರೂ. ಸಹಾಯಧನ ನೀಡಲಾಗುತ್ತದೆ.
ಅರ್ಹತೆಗಳು
- ಫಲಾನುಭವಿ ಹೊಸದಾಗಿ ಹಿಪ್ಪುನೇರಳೆ ನಾಟಿ ಮಾಡಿರಬೇಕು ಮತ್ತು ಸ್ವಂತ ಹಿಪ್ಪುನೇರಳೆ ಹೊಂದಿರಬೇಕು.
- ಸವಲತ್ತು/ಸಹಾಯಧನ ಪಡೆಯಲು ಫಲಾನುಭವಿ ನಿಗಧಿತ ಅರ್ಜಿ ಸಲ್ಲಿಸಬೇಕು ಮತ್ತು ಈ ಚಟುವಟಿಕೆಗಳನ್ನು ಅಳವಡಿಸಿಕೊಂಡಿರಬೇಕು.
- ಹುಳು ಸಾಕಾಣಿಕೆ ಮನೆಯನ್ನು ಇಲಾಖೆ ನಿಗಧಿಪಡಿಸಿದ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ನಿರ್ಮಿಸಿರಬೇಕು.
- ಫಲಾನುಭವಿ ವಾರ್ಷಿಕ ಕನಿಷ್ಟ 2 ದ್ವಿತಳಿ ಬೆಳೆಗಳನ್ನು ಬೆಳೆಯಬೇಕು.
- ಮೈಸೂರು ತಳಿ ಬಿತ್ತನೆ ಬೆಳೆಗಾರರು ಮತ್ತು ದ್ವಿತಳಿ ಬಿತ್ತನೆ ಬೆಳೆಗಾರರು ನಿಗಧಿಪಡಿಸಿದ ತಳಿಗಳನ್ನು ಸಾಕಣೆ ಮಾಡಬೇಕು.
ಅಗತ್ಯ ದಾಖಲೆಗಳು
- ಹಿಪ್ಪುನೇರಳೆ ತೋಟದ ಪಹಣಿ, ಇ.ಸಿ. ವಂಶವೃಕ್ಷ, ಮುಚ್ಚಳಿಕೆ ಪತ್ರ
- ಅಳವಡಿಸಿಕೊಂಡಿರುವ ಚಟುವಟಿಕೆಯ ಛಾಯಾಚಿತ್ರ
- ಹುಳು ಸಾಕುವ ಮನೆ ಅಂದಾಜು ಮತ್ತು ನಕ್ಷೆ ಸಂದರ್ಭಾನುಸಾರ ಅಗತ್ಯವಿರುವ ಇನ್ನಿತರೆ ಪೂರಕ್ ದಾಖಲೆಗಳು ಮತ್ತು ಬಿಲ್ ಗಳು ಹನಿನೀರಾವರಿ ಮತ್ತು ಉಪಕರಣಗಳನ್ನು ಸರ್ಕಾರದಿಂದ ಅಂಗೀಕೃತ ಸಂಸ್ಥೆಗಳಿಂದ ಮಾತ್ರ ಅಳವಡಿಸಿಕೊಂಡಿರಬೇಕು/ಖರೀದಿಸಿರಬೇಕು.
- ಇಲಾಖಾ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಪ್ರಸ್ತಾವನೆಗೆ ಮಹಜರು ಲಗತ್ತಿಸಿರಬೇಕು.
ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ
TAFE ನಿಂದ ವಿಶ್ವ ದರ್ಜೆಯ ಹೆವಿ ಟ್ರ್ಯಾಕ್ಟರ್ ಪರಿಚಯ!
ಫಲಾನುಭವಿಗಳ ಆಯ್ಕೆ ವಿಧಾನ
ರೇಷ್ಮೆ ಚಟುವಟಿಕೆಗಳನ್ನು ಅಳವಡಿಸಿಕೊಂಡಿರುವ ಅಥವಾ ಇಚ್ಚಿಸುವ ಫಲಾನುಭವಿಗಳನ್ನು ಗ್ರಾಮ ಸಭೆಗಳಲ್ಲಿ ಅಥವಾ ಜನಪ್ರತಿನಿಧಿಗಳ ಮೂಲಕ ಅರ್ಹತೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಪ.ಜಾತಿ/ಪ.ಪಂ ಮಹಿಳೆ, ಸಣ್ಣ, ಮತ್ತು ಅತಿಸಣ್ಣ ರೈತರಿಗೆ ಲಭ್ಯವಿರುವ ಅನುದಾಣಕ್ಕೆ ಅನುಗುಣವಾಗಿ ಆದ್ಯತಾನುಸಾರ ಆಯ್ಕೆ ಮಾಡಲಾಗುತ್ತದೆ.
ಈ ಯೋಜನೆಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಸಿಗಲಿದೆ ಬರೋಬ್ಬರಿ 37,500 ರೂ ಸಬ್ಸಿಡಿ
ಮಿನಿ ಟ್ರ್ಯಾಕ್ಟರ್, ಟಿಲ್ಲರ್ ಖರೀದಿಗೆ ಸಿಗಲಿದೆ ಬರೋಬ್ಬರಿ ಶೇ. 90 ರಷ್ಟು ಸಬ್ಸಿಡಿ..!