News

Janatadarshan ಜನತಾದರ್ಶನಕ್ಕೆ ಜನಸಾಗರ; ಮುಂದಿನ ಜನತಾದರ್ಶನ ಯಾವಾಗ ?

28 November, 2023 11:10 AM IST By: Hitesh
ಜನತಾದರ್ಶನದ ಮಹತ್ವದ ಅಪ್ಡೇಟ್ಸ್‌ ಇಲ್ಲಿದೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಜನತಾದರ್ಶನಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರದಲ್ಲಿ ಇದೇ ಮೊದಲ ಬಾರಿ ಬೃಹತ್‌ ಪ್ರಮಾಣದಲ್ಲಿ ಜನತಾ ದರ್ಶನವನ್ನು ಆಯೋಜಿಸಲಾಗಿತ್ತು.

ಇದಕ್ಕೆ ಕರ್ನಾಟಕದ ವಿವಿಧ ಭಾಗದ ಜನರಿಂದ ಅಭೂತಪೂರ್ವವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ಸಮಸ್ಯೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ಬಂದಿದ್ದು,

ಇದೆಲ್ಲವನ್ನೂ ಮುಂದಿನ ಜನತಾ ದರ್ಶನ ಒಳಗಾಗಿ ಪರಿಹರಿಸಬೇಕು ಇಲ್ಲವದರೆ ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಯಾವುದೇ ಮುಲಾಜಿಲ್ಲದೆ ಕ್ರಮ ವಹಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. 

ಜನತಾದರ್ಶನದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು

ಜನತಾದರ್ಶನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,  ಜನಸ್ಪಂದನಾ ಕಾರ್ಯಕ್ರಮಕ್ಕೆ

ನಮ್ಮ ನಿರೀಕ್ಷೆಗೂ ಮೀರಿ ಜನ ಆಗಮಿಸಿ ತಮ್ಮ ಅಹವಾಲು ಸಲ್ಲಿಸಿದ್ದಾರೆ. 

ನಮ್ಮದು ನುಡಿದಂತೆ ನಡೆವ ಸರ್ಕಾರ; ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು?

ಈ ವೇಳೆ ಅಂದಾಜು 950 ಜನರಿಂದ ನಾನೇ ನೇರವಾಗಿ ಅಹವಾಲು ಸ್ವೀಕರಿಸಿದ್ದೇನೆ. ಕಾಲ ಮಿತಿಯೊಳಗೆ ಎಲ್ಲರ ಸಮಸ್ಯೆ ಬಗೆಹರಿಸಿ ನಮ್ಮ

ಸರ್ಕಾರದ ಮೇಲೆ ಜನರಿಗಿರುವ ವಿಶ್ವಾಸವನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸ್ಥಳೀಯ ಸಮಸ್ಯೆಗಳನ್ನು ಆಯಾ ವ್ಯಾಪ್ತಿಯಲ್ಲೇ  ಪರಿಹರಿಸಿ,

ಜನರು ಕರ್ನಾಟಕದ ದೂರದ ಊರುಗಳಿಂದ ಬೆಂಗಳೂರಿಗೆ ಬಂದು ನನ್ನಲ್ಲಿ ಅಹವಾಲು ಸಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗದಂತೆ ತಡೆಯಬೇಕು

ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.  

ಜನರೇ ನನಗೆ ಜನಾರ್ಧನರು, ಜನರಿಂದಲೇ ನನಗೆ ದೊರೆತಿರುವ ಈ ಅಧಿಕಾರ ಅವರ ಬದುಕನ್ನು ಉತ್ತಮಗೊಳಿಸಲು ಬಳಕೆಯಾದರೆ

ಅದಕ್ಕಿಂತ ಸಂತಸದ ವಿಷಯ ಬೇರೇನಿದೆ ಎಂದು ಸಂತಸವನ್ನೂ ಇದೇ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ. 

ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ : ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಂದಿನ ಜನತಾದರ್ಶನ ಯಾವಾಗ ?

ಇನ್ನು ಈ ಬಾರಿಯ ಜನತಾದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಮೇಲೆ ಮುಂದಿನ ಜನತಾದರ್ಶನ ಯಾವಾಗ ಎನ್ನುವ ಪ್ರಶ್ನೆಯೂ ಎದುರಾಗಿದೆ.

ಮುಂದಿನ ಜನತಾದರ್ಶನ ಯಾವಾಗ ಎನ್ನುವುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ.

ಅಲ್ಲದೇ ಇದೇ ಸಂದರ್ಭದಲ್ಲಿ ಅವರು ಒಂದು ಷರತ್ತನ್ನೂ ಸಹ ವಿಧಿಸಿದ್ದಾರೆ. ಮುಂದಿನ ಜನತಾದರ್ಶನವನ್ನು ಇನ್ನು ಮೂರು ತಿಂಗಳ ನಂತರ ಆಯೋಜಿಸಲಾಗುವುದು.

ಆದರೆ, ಆ ಸಂದರ್ಭದಲ್ಲಿ ಇಷ್ಟು ಪ್ರಮಾಣದಲ್ಲಿ ಜನ ಬರಬಾರದು. ಅದಕ್ಕೆ ಆಯಾ ಜಿಲ್ಲಾ ಮಟ್ಟದಲ್ಲಿಯೇ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.

ಒಂದೊಮ್ಮೆ ಮುಂದಿನ ಬಾರಿಯೂ ಇಷ್ಟೇ ಜನ ಬಂದರೆ, ಸ್ಥಳೀಯ ಮಟ್ಟದಲ್ಲಿ ಸಮಸ್ಯೆ ಪರಿಹಾರ ಆಗುತ್ತಿಲ್ಲ ಎಂದೇ ಅರ್ಥ.

ಈ ರೀತಿ ಆಗುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಜನತಾದರ್ಶನದಲ್ಲೇ ಊಟ ಮಾಡಿದ ಸಿ.ಎಂ

ಜನತಾ ದರ್ಶನದಲ್ಲಿ ಅಹವಾಲು ಹೊತ್ತು ಬಂದವರ ಸಂಖ್ಯೆ ಬಹಳಷ್ಟಿದ್ದ ಕಾರಣ ದೂರದ ಊರುಗಳಿಂದ ಬಂದ ಪ್ರತಿಯೊಬ್ಬರ ಸಮಸ್ಯೆಗಳನ್ನು ಆಲಿಸಿ,

ಪರಿಹರಿಸಿಕೊಡಬೇಕಾದುದ್ದು ನನ್ನ ಕರ್ತವ್ಯ. ಹೀಗಾಗಿ ಊಟಕ್ಕೆ ಹೋಗಿ ಬರುವ ಸಮಯವನ್ನು ಉಳಿಸಿ, ಆ ಸಮಯವು ಮತ್ತಷ್ಟು ಜನರ

ಕಷ್ಟ ಕೇಳಲು ಸದ್ಬಳಕೆಯಾಗಬೇಕು ಎನ್ನುವ ಉದ್ದೇಶದಿಂದ ಜನತಾದರ್ಶನ ಸ್ಥಳದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಊಟ ಮಾಡಿ ಜನರ ಗಮನ ಸೆಳೆದರು.

ಅರ್ಜಿಗಳ ವಿವರ   

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವೀಕರಿಸಿದ ಅರ್ಜಿಗಳು
950

2862 ಅರ್ಜಿಗಳು ಐಪಿಜಿಆರ್‌ಎಸ್‌ ತಂತ್ರಾಂಶದಲ್ಲಿ ನೋಂದಣಿ