ಸಂಚಾರ ನಿಯಮ ಉಲ್ಲಂಘನೆ ಮಾಡಿ ಶೇ 50ರಷ್ಟು ದಂಡ ಪಾವತಿಯ ಅವಧಿಯನ್ನು ವಿಸ್ತರಿಸುವ ಬಗ್ಗೆ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದೆ.
Pf withdrawal ಪಿಎಫ್ ಹಣ ಹಿಂಪಡೆಯಲು ಹೊಸ ನಿಯಮ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಪ್ಯಾನ್ ಕಾರ್ಡ್ ಹೊಂದಿರುವವರು ಇದನ್ನು ಮಾಡಲೇಬೇಕು!
ಹೌದು ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಪಾವತಿಯ ಅವಧಿಯನ್ನು ವಿಸ್ತರಿಸುವ ಸಂಬಂಧ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾಗಿರುವ ಹೈಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ವಿರಪ್ಪ ತಿಳಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ಸಂಚಾರ ಪೊಲೀಸ್ ಇಲಾಖೆ ನೀಡಿದ್ದ ದಂಡ ಪಾವತಿಯಲ್ಲಿನ ಶೇ.50 ರಿಯಾಯಿತಿ ಅವಧಿಯಲ್ಲಿ ದಂಡ ಪಾವತಿಸಲು ಸಾಧ್ಯವಾಗಿಲ್ಲ.
ಹೀಗಾಗಿ, ಅವಧಿ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಮತ್ತೆ ಎರಡು ವಾರಗಳ ಕಾಲ ದಂಡ ವಿನಾಯಿತಿಗೆ ಅವಕಾಶ ಲಭ್ಯವಾಗಲಿದೆ.
ನಿಯಮ ಉಲ್ಲಂಘಿಸಿದವರಿಗೆ ಡಿಸ್ಕೌಂಟ್; ಓಡೋಡಿ ಬಂದು ದಂಡ ಕಟ್ತಿದ್ದಾರೆ ಜನ: 13.18 ಕೋಟಿ ವಸೂಲಿ!
ಈ ಸಂಬಂಧ ಮಾತನಾಡಿದ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ಸಂಚಾರಿ ಪೊಲೀಸ್ ಇಲಾಖೆ ಮತ್ತು ವಾಹನ ಸವಾರರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ವರದಿ ಆಗಿದೆ.
ಈ ಹಿನ್ನೆಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡ ಕಡಿಮೆ ಮಾಡುವ ಉದ್ದೇಶದಿಂದ ನಿರಂತರವಾಗಿ 3 ತಿಂಗಳು ಹೋರಾಟ ಮಾಡಬೇಕಾಯಿತು.
ಸರ್ಕಾರವನ್ನು ಒಪ್ಪಿಸಲು ಸಾಕಷ್ಟು ಹೋರಾಟ ನಡೆಸಿದ್ದೇವೆ. ಹಣಕಾಸು ಇಲಾಖೆ ದಂಡ ಕಡಿಮೆ ಮಾಡಲು ಮೊದಲು ಒಪ್ಪಿರಲಿಲ್ಲ.
ಅಂತಿಮವಾಗಿ ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿ ಕಚೇರಿ ಅವರನ್ನು ಒಪ್ಪಿಸಿ ದಂಡ ಪಾವತಿಯಲ್ಲಿ ಶೇ.50 ಕಡಿಮೆ ಮಾಡಲಾಯಿತು ಎಂದರು.
ಇದೀಗ ರಿಯಾಯಿತಿ ದಂಡ ಸಂಗ್ರಹವನ್ನು ಮತ್ತೆ ವಿಸ್ತರಿಸಲಾಗಿದ್ದು, ಫೆ.14 ರಿಂದ 24ರವರೆಗೂ ಕಾಲಾವಕಾಶವಿದೆ.
ಈ ಕುರಿತು ನಾಳೆ (ಮಂಗಳವಾರ) ಅಧಿಕೃತ ಆದೇಶ ನೀಡಲಾಗುತ್ತದೆ ಎಂದಿದ್ದಾರೆ.
ಇನ್ನು ಹೋರಾಟಕ್ಕೆ ಪ್ರತಿಫಲವಾಗಿ ಸಂಚಾರ ನಿಯಮ ಉಲ್ಲಂಘನೆಗೆ ದಂಡದಲ್ಲಿ 50% ವಿನಾಯಿತಿಯನ್ನು ಘೋಷಣೆ ಮಾಡಿದ ಅವಧಿಯಲ್ಲಿ ಜನರು ಕೂಡ ಉತ್ತಮವಾಗಿ ಸ್ಪಂದಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ; ದಂಡ ರಿಯಾಯಿತಿ: ಅವಧಿ ವಿಸ್ತರಿಸಲು ಸಂಚಾರ ಪೊಲೀಸರಿಂದಲೇ ಮನವಿ!
ಒಟ್ಟಾರೆ ಇಲ್ಲಿಯವರೆಗೆ 2 ಕೋಟಿಗೂ ಅಧಿಕ ಸಂಚಾರ ದಂಡ ಬಾಕಿ ಇದ್ದವು. ಅದರಲ್ಲಿ ವಿಯಾಯಿತಿ ಘೋಷಣೆಯ ಅವಧಿಯಲ್ಲಿ ಬರೋಬ್ಬರಿ 1.1 ಕೋಟಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಗೆಹರಿದಿವೆ.
120 ಕೋಟಿ ರೂ.ಗಿಂತ ಅಧಿಕ ದಂಡ ಸಂಗ್ರಹವಾಗಿದೆ. ಆದರೆ, ಸುಮಾರು ಇನ್ನೂ ಒಂದು ಕೋಟಿ ಜನರು ದಂಡ ಪಾವತಿ ಮಾಡುವುದು ಬಾಕಿಯಿದೆ.
ಹೀಗಾಗಿ, ದಂಡದ ಮೊತ್ತ ವಿನಾಯಿತಿ ಅವಧಿಯನ್ನು ವಿಸ್ತರಣೆ ಮಾಡುವಂತೆ ಮನವಿ ಮಾಡಲಾಗಿದೆ. ಇನ್ನು ದಂಡದ ಶೇ.50 ವಿನಾಯಿತಿ ಅವಧಿಯನ್ನು ವಿಸ್ತರಣೆ ಮಾಡುವಂತೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರದ ಮನವಿ ಮೇರೆಗೆ ನಾಳೆ ಸಭೆ ಕರೆಯಲಾಗಿದೆ.
ಸಭೆಯಲ್ಲಿ ಈ ಕುರಿತು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಸಾವಿನ ನಂತರವೂ ಆತ್ಮೀಯರೊಂದಿಗೆ ಗೊಬ್ಬರ ರೂಪದಲ್ಲೂಳಿವ ಪರಿಕಲ್ಪನೆ!