News

ನೌಕರರಿಗೆ Good News: EPFO ವೇತನ 15 ಸಾವಿರದಿಂದ 21 ಸಾವಿರಕ್ಕೆ ಹೆಚ್ಚಳ!

19 April, 2022 4:00 PM IST By: Kalmesh T
Good news for employees: EPFO wages increase from 15 thousand to 21 thousand!

ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಉದ್ಯೋಗಿಗಳಿಗೆ (Employees) ಪಿಂಚಣಿ (Pension) ಪಡೆಯಲು ಇರುವ ವೇತನ ಮಿತಿಯನ್ನು 15000 ರೂ.ನಿಂದ 21,000 ರೂ.ಗೆ ಹೆಚ್ಚಿಸಲು ಚಿಂತನೆ ನಡೆಸಿದೆ. 

ಇಪಿಎಫ್ಒ (EPFO) ಪಿಂಚಣಿ ಪಡೆಯಲು ಉದ್ಯೋಗಿಗಳ (Employees) ವೇತನ ಮಿತಿಯನ್ನು ಹೆಚ್ಚಿಸುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಇಪಿಎಫ್ಒ (EPFO) ಸದಸ್ಯರು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂಬುದನ್ನು ವರದಿಗಳು ದೃಢಪಡಿಸಿವೆ. ಸರ್ಕಾರ ಪಿಎಫ್ (PF) ವೇತನ ಮಿತಿಯನ್ನು ಕೊನೆಯದಾಗಿ 2014ರಲ್ಲಿ ಹೆಚ್ಚಳ ಮಾಡಿದ್ದು, 6,500 ರೂ.ನಿಂದ 15,000ರೂ.ಗೆ ಏರಿಕೆ ಮಾಡಿತ್ತು.

ಇಪಿಎಫ್ ಪಿಂಚಣಿ (Pension) ವೇತನ ಮಿತಿ ಹೆಚ್ಚಳದಿಂದ 75 ಲಕ್ಷ ಉದ್ಯೋಗಿಗಳಿಗೆ (Employees) ಪ್ರಯೋಜನವಾಗಲಿದೆ ಎಂದು ಹೇಳಲಾಗಿದೆ. 

ಇದನ್ನು ಓದಿರಿ:

ಪಿಎಂ ಕಿಸಾನ್: 11ನೇ ಕಂತು ಶೀಘ್ರದಲ್ಲೆ ಬಿಡುಗಡೆ! ಫಲಾನುಭವಿಗಳ ಪಟ್ಟಿಯಲ್ಲಿ ಈಗಲೇ ನಿಮ್ಮ ಹೆಸರು ಪರಿಶೀಲಿಸಿ

7th Pay Commision: ಈ ತಿಂಗಳ ಅಂತ್ಯದೊಳಗೆ ಹೆಚ್ಚುತ್ತಾ ಕೇಂದ್ರ ಸರ್ಕಾರಿ ನೌಕರರ HRA..?

EPFO ಪಿಂಚಣಿ ಹೊಸ ವೇತನ (Salary) ಮಿತಿಯಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆ ಬೀಳಲಿದೆ. ಈ ನಿರ್ಧಾರದಿಂದ ಸರ್ಕಾರ 6,750 ಕೋಟಿ ರೂ.ವೆಚ್ಚ ಭರಿಸಲು ವ್ಯವಸ್ಥೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಹೀಗಾಗಿ ಈ ಪ್ರಸ್ತಾವನೆಗೆ ಸರ್ಕಾರ ಇನ್ನೂ ಹಸಿರು ನಿಶಾನೆ ನೀಡಿಲ್ಲ.

ಉನ್ನತ ಮಟ್ಟದ ಸಮಿತಿ ಇಪಿಎಫ್ಒ ಪಿಂಚಣಿ ವೇತನ ಮಿತಿ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಅದರ ಅನುಷ್ಠಾನಕ್ಕೆ ಸರ್ಕಾರದ ಅನುಮತಿ ಅಗತ್ಯ. ಪ್ರಸ್ತುತ ಇಪಿಎಫ್ಒ ಚಂದಾದರರ ಮೂಲ ವೇತನದ (Basic Salary) ಶೇ. 1.16ರಷ್ಟನ್ನು ಸರ್ಕಾರ ಇಪಿಎಫ್ ಗೆ (EPF) ಕೊಡುಗೆಯಾಗಿ ನೀಡುತ್ತಿದೆ. ಪ್ರಸ್ತುತ ತಿಂಗಳಿಗೆ 15,000ರೂ. ವೇತನ ಪಡೆಯುತ್ತಿರುವವರು ಮಾತ್ರ ಇಪಿಎಫ್ಒ ಯೋಜನೆ ಪ್ರಯೋಜನ ಪಡೆಯಬಹುದಾಗಿದೆ.

PMAGY: ಬುಡಕಟ್ಟು ಹಳ್ಳಿಗಳ ಸುಧಾರಣೆಗೆ ಗುರಿ

ಏಪ್ರಿಲ್ ಕೊನೆಯ15 ದಿನಗಳಲ್ಲಿ ಈ ಬೆಳೆಗಳನ್ನು ಬೆಳೆಸಿ, ಬಂಪರ್‌ ಇಳುವರಿ ಪಡೆಯಿರಿ

ರೂ.15,000 ಕ್ಕಿಂತ ಹೆಚ್ಚು ಮೂಲ ವೇತನವನ್ನು ಪಡೆಯುತ್ತಿರುವವರಿಗೆ ಮತ್ತು ನೌಕರರ ಪಿಂಚಣಿ ಯೋಜನೆ-1995 (ಇಪಿಎಸ್-95) ಅಡಿಯಲ್ಲಿ ಕಡ್ಡಾಯವಾಗಿ ಒಳಪಡದವರಿಗೆ ಹೊಸ ಪಿಂಚಣಿ ತರಲು ಇಪಿಎಫ್‌ಒ ಯೋಚಿಸುತ್ತಿದೆ.

ಹೆಚ್ಚಿನ ಕೊಡುಗೆಯ ಮೇಲೆ ಹೆಚ್ಚಿನ ಪಿಂಚಣಿಗಾಗಿ ನೌಕರರು ಬೇಡಿಕೆಯಿಟ್ಟಿರುವ ಕಾರಣ  ಮಾಸಿಕ ಮೂಲ ವೇತನ 15,000 ರೂ.ಗಿಂತ ಹೆಚ್ಚು ಇರುವವರಿಗೆ ಹೊಸ ಪಿಂಚಣಿ ಉತ್ಪನ್ನ ಅಥವಾ ಯೋಜನೆಯನ್ನು ತರಲು ಇಪಿಎಫ್ಒ (EPFO) ಸಕ್ರಿಯವಾಗಿ ಚಿಂತನೆ ನಡೆಸುತ್ತಿದೆ ಎಂದು ಫೆಬ್ರವರಿಯಲ್ಲಿ ವರದಿಯಾಗಿತ್ತು.

POULTRY Farming ತುಂಬಾ ಲಾಭದಾಯಕ ಉದ್ಯೋಗ! ಮತ್ತು ಸರ್ಕಾರದಿಂದ ಸಹಾಯ?

ಹೈನುಗಾರಿಕೆಯಲ್ಲಿ ಯಾರಿಗೆ 'ಡಬಲ್' ಲಾಭ ಬೇಕು!

EPF ನಿಯಮಗಳೇನು?

ಪ್ರತಿ ತಿಂಗಳು ನೌಕರರ ಮೂಲ ವೇತನದಿಂದ (Basic Salary) ಶೇ. 12ರಷ್ಟು ಮೊತ್ತವನ್ನು ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ.ಹಾಗೆಯೇ ಕಂಪನಿ (Company) ಕೂಡ ಶೇ.12 ರಷ್ಟು ಪಾಲನ್ನು ತನ್ನ ನೌಕರನ ಪಿಎಫ್ ಖಾತೆಗೆ ಜಮೆ ಮಾಡುತ್ತದೆ. ಕಂಪನಿಯ ಶೇ. 12%ರಷ್ಟು ಕೊಡುಗೆಯಲ್ಲಿ 3.67% EPF ಮತ್ತು 8.33% EPS ಅನ್ನು ಒಳಗೊಂಡಿದೆ. ಕಂಪನಿಯು ನೀಡಿದ ಒಟ್ಟು ಕೊಡುಗೆಯನ್ನು ನೌಕರರ ಪಿಂಚಣಿ ಯೋಜನೆಗೆ 8.33% ಮತ್ತು ನೌಕರರ ಭವಿಷ್ಯ ನಿಧಿಗೆ 3.67% ರಂತೆ ವಿತರಿಸಲಾಗಿದೆ.

ಉದ್ಯೋಗಿ ನೀಡಿದ ಕೊಡುಗೆ ಸಂಪೂರ್ಣವಾಗಿ ಕಾರ್ಮಿಕರ ಭವಿಷ್ಯ ನಿಧಿಗೆ ಹೋಗುತ್ತದೆ. ಈ ಕೊಡುಗೆಯ ಜೊತೆಗೆ, EDLI ಗಾಗಿ ಹೆಚ್ಚುವರಿ 0.5% ಅನ್ನು ಕಂಪನಿಯು ಪಾವತಿಸಬೇಕು. EDLI ಮತ್ತು EPF ನ ಕೆಲವು ಆಡಳಿತಾತ್ಮಕ ವೆಚ್ಚಗಳನ್ನು ಕಂಪನಿಯು ಕ್ರಮವಾಗಿ 1.1% ಮತ್ತು 0.01% ದರದಲ್ಲಿ ಭರಿಸುತ್ತದೆ. ಇದರರ್ಥ ಕಂಪನಿಯು ಈ ಯೋಜನೆಗೆ ಒಟ್ಟು 13.61% ಸಂಬಳವನ್ನು ನೀಡಬೇಕಾಗುತ್ತದೆ. ಉದ್ಯೋಗಿಗೆ ಕೊಡುಗೆ ದರವನ್ನು ಸಾಮಾನ್ಯವಾಗಿ 12%ಕ್ಕೆ ನಿಗದಿಪಡಿಸಲಾಗುತ್ತದೆ.

TOMATO FARMING AT HOME! ಮನೆಯಲ್ಲಿ ಟೊಮೇಟೊ ಬೆಳೆಯುವುದು?

Green Peas: ʻಹಸಿರು ಬಟಾಣೆʼ ಸೇವನೆಯ ಅದ್ಭುತ ಪ್ರಯೋಜನಗಳೇನು..? ಇಲ್ಲಿದೆ ಮಾಹಿತಿ