News

pan card update online ಇನ್ಮುಂದೆ ಸರ್ಕಾರಿ ಸಂಸ್ಥೆಗಳ ಡಿಜಿಟಲ್ ವ್ಯವಸ್ಥೆಗೆ ಸಾಮಾನ್ಯ ಗುರುತಿನ ಚೀಟಿಯಾಗಿ ಪ್ಯಾನ್ ಕಾರ್ಡ್ !

02 February, 2023 3:30 PM IST By: Hitesh
From now on, PAN card as a common identity card for the digital system of government institutions!

ದೇಶದಲ್ಲಿ ಆಧಾರ್‌ ಕಾರ್ಡ್‌ ಪರಿಚಯಿಸಿದ ನಂತರದಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಆಧಾರ್‌ ಕಾರ್ಡ್‌ ಅನ್ನು ಪ್ರಧಾನವಾಗಿ ಬಳಸಲಾಗುತ್ತಿದೆ. ಇದೀಗ ಪಾನ್‌ ಕಾರ್ಡ್‌ಅನ್ನು ಇದೇ ಮಾದರಿಯಾಗಿ ಬಳಸಿಕೊಳ್ಳಬಹುದಾಗಿದೆ. 

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡು, ಕೇರಳದಲ್ಲಿ ಭಾರೀ ಮಳೆ, ರಾಜ್ಯದಲ್ಲಿ ಹವಾಮಾನ ಹೇಗಿದೆ ?

ಇನ್ಮುಂದೆ ವ್ಯಾಪಾರಸ್ಥರು ಡಿಜಿಟಲ್ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್‌ಅನ್ನು ಸಾಮಾನ್ಯ ಗುರುತಿನ ಚೀಟಿ ಆಗಿ ಪರಿಗಣನೆಗೆ ತೆಗೆದುಕೊಳ್ಳಬಹುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಬುಧವಾರ ಕೇಂದ್ರ ಸರ್ಕಾರದ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಅವರು, ಸರ್ಕಾರಿ ಸಂಸ್ಥೆಗಳ ಎಲ್ಲಾ ಡಿಜಿಟಲ್ ವ್ಯವಸ್ಥೆಗಳಿಗೆ ಸಾಮಾನ್ಯ ಗುರುತಿನ ಚೀಟಿಯಾಗಿ ಪ್ಯಾನ್ ಕಾರ್ಡ್ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.

ಪ್ಯಾನ್ ಕಾರ್ಡ್‌ ಸಾಮಾನ್ಯ ಕಾರ್ಡ್ ಆಗಿ ಬಳಕೆ ಮಾಡುವುದರಿಂದ ಬಂಡವಾಳದಾರರಿಗೆ ಮತ್ತಷ್ಟು ಸಹಕಾರಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ. 

Kisan Credit Card: ಕಿಸಾನ್ ಕ್ರೆಡಿಟ್ ಕಾರ್ಡ್‌ ಎಂದರೇನು, ಯಾರೆಲ್ಲ ಇದಕ್ಕೆ ಅರ್ಹರು ಇಲ್ಲಿದೆ ಸಂಪೂರ್ಣ ಮಾಹಿತಿ! 

ಪ್ರಸ್ತುತ, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸರಕು ಮತ್ತು ಸೇವಾ ತೆರಿಗೆ ಗುರುತಿನ ಸಂಖ್ಯೆ (GSTIN), ತೆರಿಗೆದಾರರ ಗುರುತಿನ ಸಂಖ್ಯೆ (TIN), ತೆರಿಗೆ ಕಡಿತ ಖಾತೆ ಸಂಖ್ಯೆ (TDA), ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ನಂತಹ ಗುರುತಿನ ಚೀಟಿಗಳನ್ನು ಬಳಸಲಾಗುತ್ತದೆ.

ಇದೆಲ್ಲವನ್ನು ಸರಳೀಕೃತಗೊಳಿಸುವ ಉದ್ದೇಶದಿಂದ ಪ್ಯಾನ್‌ ಕಾರ್ಡ್ ಸಾಮಾನ್ಯ ಗುರುತಿನ ಚೀಟಿಯಾಗಿ ಬಳಸಬಹುದು ಎಂದು ಹೇಳಿದರು.

ಬಜೆಟ್ 2023: ಮಹಿಳೆಯರಿಗೆ ಉಳಿತಾಯ ಖಾತೆಯ ಮೂಲಕ 7.5% ಬಡ್ಡಿ! 

ಆಧಾರ್‌ ಕಾರ್ಡ್‌ನೊಂದಿಗೆ ಪಾನ್‌ ಕಾರ್ಡ್‌ ಜೋಡಣೆ ಕಡ್ಡಾಯ: ಮತ್ತೊಮ್ಮೆ ಗಡುವು!

ಆಧಾರ್ ಕಾರ್ಡ್‌ನೊಂದಿಗೆ ಪಾನ್‌ಕಾರ್ಡ್‌ ಜೋಡಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹಲವು ಆದೇಶಗಳು ಬರುತ್ತಲ್ಲೇ ಇವೆ.

ಇದೀಗ ಸಾರ್ವಜನಿಕರಿಗೆ ಮತ್ತೊಮ್ಮೆ ಗಡುವು ವಿಸ್ತರಿಸಲಾಗಿದೆ. 2023ರ ಮಾರ್ಚ್ 31ರ ಒಳಗೆ ಆಧಾರ್‌ ಕಾರ್ಡ್‌ನೊಂದಿಗೆ ಪಾನ್‌ಕಾರ್ಡ್‌ನೊಂದಿಗೆ  ಲಿಂಕ್‌ ಮಾಡಿಕೊಳ್ಳಬೇಕು ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಒಂದೊಮ್ಮೆ ಈ ಅವಧಿಯ ಒಳಗಾಗಿ ಪಾನ್‌ ಕಾರ್ಡ್‌ ಲಿಂಕ್‌ ಆಗದೆ ಇದ್ದರೆ, ನಿಷ್ಕ್ರಿಯವಾಗಲಿದೆ ಎಂದು ಸೂಚನೆ ನೀಡಲಾಗಿದೆ.

ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿದೇನು,ಬಜೆಟ್‌ ಹೈಲೆಟ್ಸ್‌ ಇಲ್ಲಿದೆ!  

ಅದಾಯ ತೆರಿಗೆ ಇಲಾಖೆ ಕಾಯ್ದೆ 1961ರ ಅನ್ವಯ ಆಧಾರ್ ಜೊತೆಗೆ ಪಾನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಎಂದು ಈಗಾಗಲೇ ಹೇಳಲಾಗಿದೆ. ಆದರೆ, ಇಲ್ಲಿಯವರೆಗೆ ಹಲವರು ಆಧಾರ್ ಕಾರ್ಡ್‌ನೊಂದಿಗೆ ಪಾನ್ ಕಾರ್ಡ್‌ ಲಿಂಕ್ ಮಾಡಿಕೊಂಡಿಲ್ಲ.

ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದ್ದು, ಈ ಬಾರಿ ಖಡಕ್‌ ಎಚ್ಚರಿಕೆಯನ್ನು ನೀಡಲಾಗಿದೆ. 2023ರ ಮಾರ್ಚ್ 31ರ ಒಳಗಾಗಿ ಆಧಾರ್ ಮತ್ತು ಪಾನ್ ಲಿಂಕ್ ಮಾಡಿಕೊಳ್ಳದಿದ್ದರೆ, ಅವಧಿ ಮುಗಿದ ಬಳಿಕ ಏಪ್ರಿಲ್ 1ರಿಂದ ಪಾನ್ ಕಾರ್ಡ್ ನಿಷ್ಕ್ರೀಯಗೊಳ್ಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. 

ಈಗಾಗಲೇ ಹಲವು ಬಾರಿ ಗಡುವು ನೀಡಿದ್ದ ಆದಾಯ ತೆರಿಗೆ ಇಲಾಖೆ ಇದೀಗ ಒಂದು ಸಾವಿರ ಪಾವತಿಸಿ ಆಧಾರ್ ಜೊತೆ ಪಾನ್ ಕಾರ್ಡ್ ಲಿಂಗ್ ಮಾಡಲು ಅವಕಾಶ ನೀಡಿದೆ.

ಸರ್ಕಾರದ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳದಿದ್ದರೆ, ಪಾನ್ ಕಾರ್ಡ್ ನಿಷ್ಕ್ರೀಯಗೊಳಿಸಲು ಇಲಾಖೆ ತೀರ್ಮಾನಿಸಿದೆ. ಪಾನ್ ಕಾರ್ಡ್ ನಿಷ್ಕ್ರೀಯಗೊಂಡರೆ ಬ್ಯಾಂಕ್ ಜೊತೆಗೆ ವಹಿವಾಟು ನಡೆಸುವುದು ಸೇರಿದಂತೆ ಎಲ್ಲ ಹಣಕಾಸು ವಹಿವಾಟಿಗೆ ಸಮಸ್ಯೆ ಆಗಲಿದೆ. 

ಆಧಾರ್ ಜೊತೆಗೆ ಪಾನ್ ಲಿಂಕ್ ಮಾಡಿಕೊಳ್ಳಲು ಆದಾಯ ತೆರಿಗೆ ಇಲಾಖೆ ಅಧಿಕೃತ ಜಾಲತಾಣ(ಇ-ಪೋರ್ಟಲ್) www.eportal.incometax.gov.in ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಆಧಾರ್ ಕಾರ್ಡ್ ಹಾಗೂ ಪಾನ್ ನಂಬರ್ ನಮೂದಿಸಿ ಅಲ್ಲಿನ ಪ್ರಕ್ರಿಯೆ ಪೂರ್ಣಗೊಳಿಸಿ ಲಿಂಕ್‌ ಮಾಡಿಕೊಳ್ಳಬಹುದಾಗಿದೆ. 

ಕೇಂದ್ರ ಬಜೆಟ್‌ 2023 ಮಹಿಳೆಯರಿಗೆ ಕಹಿಸುದ್ದಿ: ಚಿನ್ನ, ಬೆಳ್ಳಿ ದರ ತುಟ್ಟಿ! ಯಾವೆಲ್ಲ ವಸ್ತುಗಳ ಬೆಲೆ ಏರಿಕೆ, ಇಳಿಕೆ ಇಲ್ಲಿದೆ ವಿವರ