1. ಸುದ್ದಿಗಳು

ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಉಚಿತ ಮರಳು; ಶೀಘ್ರವೇ ಹೊಸ ಮರಳು ನೀತಿ ಜಾರಿ: ನಿರಾಣಿ

sand

ರಾಜ್ಯದಲ್ಲಿ ಎಲ್ಲರಿಗೂ ಸುಲಭವಾಗಿ ಮರಳು ಸಿಗುವಂತಾಗಲು ಹೊಸ ಮರಳು ನೀತಿಯನ್ನು ಶೀಘ್ರದಲ್ಲೇ ಜಾರಿಗೆ ತರುವುದಾಗಿ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರು ಸ್ವಂತ ಬಳಕೆಗೆ ಉಚಿತವಾಗಿ ಮರಳು ತೆಗೆಯಲು ಅವಕಾಶ ನೀಡುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಆಶ್ರಯ ಮತ್ತು ಇತರ ಸಣ್ಣಪುಟ್ಟ ವಸತಿ ಯೋಜನೆಗಳಿಗೆ ಅನುಕೂಲವಾಗುತ್ತದೆ ಎಂದರು.

ಮರಳು ತೆಗೆಯುವಾಗ ನೈಸರ್ಗಿಕವಾಗಿಯೂ ಅಪಾಯ ಆಗಬಾರದು ಹಾಗೆ ಟೆಕ್ನಿಕಲಿ ಹೇಗೆ ಮಾಡಬಹುದು ಎಂಬ ಬಗ್ಗೆ ನಿಯಮ ವೈಜ್ಙಾನಿಕವಾಗಿ ಮರಳು ತೆಗೆಯುವ ಬಗ್ಗೆ ನೀತಿಯಲ್ಲಿರಲಿದೆ, ಎಷ್ಟು ಮರಳು ತೆಗೆಯಬಹುದು ಎಂಬುದು ಹೊಸ ಮರಳು ನೀತಿಯಲ್ಲಿರಲಿದೆ. ಗಣಿ, ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಂದ ಆಗು ತ್ತಿರುವ ಕಿರುಕುಳವನ್ನು ತಪ್ಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.

ಮರಳು ಪಡೆಯಲು ಸಾಮಾನ್ಯ ಜನ ಪಡಬಾರದ ಕಷ್ಟ ಪಡುತ್ತಿದ್ದರು. ಇದರಿಂದಾಗಿ ಈಗ ನೆಮ್ಮದಿಯ ಉಸಿರು ಬಿಟ್ಟತಂದಈ ರೀತಿ ತೆಗೆದ ಮರಳನ್ನು ಸ್ವಂತ ಮನೆ ಅಥವಾ ಕಟ್ಟಡಗಳಿಗೆ ಮಾತ್ರ ಉಪಯೋಗಿಸಬೇಕು. ಅದನ್ನು ಮಾರಾಟ ಮಾಡುವಂತಿಲ್ಲ. ಜಿಲ್ಲೆಯ ವ್ಯಾಪ್ತಿಯಲ್ಲಿ ಎತ್ತಿನ ಬಂಡಿ, ದ್ವಿಚಕ್ರ ವಾಹನ ಮತ್ತು ಕತ್ತೆಗಳ ಮೇಲೆ ಮಾತ್ರ ಸಾಗಿಸಬಹುದು. ಹೊರ ಜಿಲ್ಲೆಗಳಿಗೆ ಸಾಗಿಸುವುದಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಸಣ್ಣ ರೈತರು, ಜನಸಾಮಾನ್ಯರಿಗೆ ಮರಳು ಸಿಗುತ್ತಿರಲಿಲ್ಲ. ಗ್ರಾಮೀಣ ಭಾಗದಲ್ಲಿ ಆಶ್ರಯ ಮನೆಗಳಿಗೂ ಸಿಗುತ್ತಿರಲಿಲ್ಲ. ಇಲ್ಲಿಯವರೆಗೆ ಎಲ್ಲದಕ್ಕೂ ಕಡಿವಾಣವಿತ್ತು. ಇದನ್ನು ತಪ್ಪಿಸುವುದಕ್ಕಾಗಿ ಸರಳ ನೀತಿ ತರಲಾಗುತ್ತಿದೆ ಎಂದರು. 183 ಬ್ಲಾಕ್‌ಗಳಲ್ಲಿ ಮರಳು ತೆಗೆಯಲು ಅವಕಾಶ: ರಾಜ್ಯದಲ್ಲಿ ಒಟ್ಟು 183 ಬ್ಲಾಕ್‌ಗಳಲ್ಲಿ ಮರಳು ತೆಗೆಯಲು ಅವಕಾಶ ನೀಡಲಾಗುವುದು. ಪ್ರತಿ ಟನ್‌ ಮರಳು ತೆಗೆಯಲು 300 ರು. ನಿಗದಿ ಮಾಡಲಾಗುವುದು. ಟಿಪ್ಪರ್‌, ಲಾರಿ ಸೇರಿದಂತೆ ಮತ್ತಿತರ ವಾಹನಗಳಲ್ಲಿ ಸಾಗಣೆ ಮಾಡಬಹುದು. ಇದರ ಮೇಲೆ ರಾಜಧನ ವಿಧಿಸಲಾಗುವುದು. ತಮ್ಮ ಜಿಲ್ಲೆಯಲ್ಲೇ ಮಾರಾಟ ಮಾಡಬಹುದು. ಆದರೆ, ಹೊರ ದೇಶಗಳಿಗೆ ಸಾಗಿಸುವಂತಿಲ್ಲ ಎಂದರು.

ಮರಳು ಗಣಿಗಾರಿಕೆಗೆ ನಿಗದಿ ಮಾಡಿದ ಪ್ರದೇಶ ಬಿಟ್ಟು ಬೇರೆ ಕಡೆಯಲ್ಲಿ ಮರಳು ತೆಗೆಯಬಹುದು. ಹಳ್ಳ, ತೊರೆ ಗಳಿಂದಲೂ ಮರಳು ತೆಗೆಯಬಹುದು. ಆದರೆ ಮರಳನ್ನು ಸಂಗ್ರಹಿಸಿಡುವಂತಿಲ್ಲ ಮತ್ತು ಮಾರುವುದಕ್ಕೆ ಅವಕಾಶವಿಲ್ಲ. ಮರಳು ತೆಗೆಯುವವರು ಗ್ರಾಮಪಂಚಾಯ್ತಿಗೆ 100 ಪಾವತಿಸಬೇಕು ಎಂದರು.

ಜನಸಮಾನ್ಯರಿಗೆ ಸುಲಭವಾಗಿ ಮರಳು ದೊರಕುವಂತೆ ಮಾಡಲಾಗುವುದು. ಈ ಸಂಬಂಧ ಕರಡು ಪ್ರತಿ ಸಿದ್ಧವಾಗಿದೆ. ಶೀಘ್ರದಲ್ಲೆ ಇದಕ್ಕೆ ಅಂತಿಮ ಸ್ವರೂಪ ಕೊಡಲಾಗುವುದು. ಉತ್ತರ ಕರ್ನಾಟಕ, ಕರಾವಳಿ, ಮಧ್ಯ ಕರ್ನಾಟಕ ಸೇರಿದಂತೆ ಪ್ರತಿ ವಿಭಾಗಗಳಿಗೆ ಹೊಂದುವ ಮರಳು ನೀತಿ ಇದಾಗಿರಲಿದೆ ಎಂದರು.

Published On: 12 February 2021, 02:49 PM English Summary: free sand for villagers own use

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.