News

ಮೀಸಲಾತಿ ಕಡಿತದ ವಿರುದ್ಧ Forestry Studentsಗಳ ಪ್ರತಿಭಟನೆ!

14 April, 2022 2:09 PM IST By: Kalmesh T
Forestry Students protest against reservation cuts

ರಾಜ್ಯ ಸರ್ಕಾರ ACF ಮತ್ತು RFO ಹುದ್ದೆಗೆ ನೇರ ನೇಮಕಾತಿಗಾಗಿದ್ದ ಮೀಸಲಾತಿಯನ್ನು ಶೇ. 75ರಿಂದ ಶೇ.50ಕ್ಕೆ ಇಳಿಕೆ ಮಾಡಿದೆ. ಇದರಿಂದ ಅರಣ್ಯ ವಿಜ್ಞಾನ ಪದವೀಧರ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಸಿದ್ದಾರೆ.

ಇದನ್ನು ಓದಿರಿ:

ನೀವು Job ಬಿಟ್ಟಿದ್ದೀರಾ? ನಿಮ್ಮ Gratuity Fund ಬಗ್ಗೆ ಚಿಂತೆ ಆಗಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ.

NABARDನಲ್ಲಿ ಮತ್ತೊಂದು ನೇಮಕಾತಿ ಆರಂಭ.. 1ಲಕ್ಷ ಸಂಬಳ..!

ರಾಜ್ಯ ಸರ್ಕಾರ ACF ಮತ್ತು RFO ಹುದ್ದೆಗೆ ನೇರ ನೇಮಕಾತಿಗಾಗಿದ್ದ ಮೀಸಲಾತಿಯನ್ನು (Reservation) ಶೇ. 75ರಿಂದ ಶೇ.50ಕ್ಕೆ ಇಳಿಕೆ ಮಾಡಿ ಅಧಿಸೂಚನೆ ಹೊರಡಿಸಿದೆ. ಇದರಿಂದ ಅರಣ್ಯ ವಿಜ್ಞಾನ ಪದವೀಧರ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದು, ಮೀಸಲಾತಿಯಲ್ಲಿ ಸರಕಾರ‌ ತಮಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದ್ದಾರೆ. 

ಅಲ್ಲದೇ, ತರಗತಿಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ (Protest) ಮುಂದುವರಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಶಿರಸಿ ಮತ್ತು ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಅರಣ್ಯ ವಿಜ್ಞಾನ ವಿದ್ಯಾರ್ಥಿಗಳು ಕಾಲೇಜು ಬಹಿಷ್ಕರಿಸಿ ಪ್ರತಿಭಟನೆಗೆ ಇಳಿದಿದ್ದಾರೆ.

6% ಬಡ್ಡಿ ದರದಲ್ಲಿ ಸ್ವಯಂ ಉದ್ಯೋಗಕ್ಕೆ ಸಾಲ ಪಡೆಯುವುದು ಹೇಗೆ..? ಯಾರು ಅರ್ಹರು..?

ಇನ್ಮುಂದೆ Aadhaar-Pan Link ಫ್ರೀ ಇಲ್ಲ..ಸ್ವಲ್ಪ ಯಾಮಾರಿದ್ರೆ 1 ಸಾವಿರ Fine..!

ಸರ್ಕಾರ ಹೊರಡಿಸಿದ ಹೊಸ ಅಧಿಸೂಚನೆ ಅನ್ವಯ ಅರಣ್ಯವಿಜ್ಞಾನ ಪದವೀಧರರಿಗೆ ಶೇ 50ರಷ್ಟು, ಉಳಿದ ಅರ್ಧದಷ್ಟು ಅನ್ಯ ವಿಜ್ಞಾನ ಸಂಬಂಧಿತ ವಿಷಯಗಳ ಪದವೀಧರರಿಗೆ ಆದ್ಯತೆ ನೀಡಲಾಗುತ್ತಿದೆ.

POULTRY Farming ತುಂಬಾ ಲಾಭದಾಯಕ ಉದ್ಯೋಗ! ಮತ್ತು ಸರ್ಕಾರದಿಂದ ಸಹಾಯ?

ಹೈನುಗಾರಿಕೆಯಲ್ಲಿ ಯಾರಿಗೆ 'ಡಬಲ್' ಲಾಭ ಬೇಕು!

ಇದು ಅರಣ್ಯ ಶಾಸ್ತ್ರ ಓದುತ್ತಿರುವ ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕಾರಣದಿಂದ ಶಿರಸಿಯ ಬನವಾಸಿ ರಸ್ತೆಯಲ್ಲಿರುವ ಅರಣ್ಯ ಕಾಲೇಜು ಮುಂಭಾಗದಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಅನಿರ್ದಿಷ್ಟಾವಧಿ‌ ಮುಷ್ಕರ ನಡೆಸುತ್ತಿದ್ದಾರೆ. ಪ್ರತೀ ವರ್ಷ ಶಿರಸಿಯ ಅರಣ್ಯ ವಿಜ್ಞಾನ ಕಾಲೇಜಿನಿಂದ 120 ವಿದ್ಯಾರ್ಥಿಗಳು ಪದವೀಧರರರಾಗಿ ಹೊರಬರುತ್ತಿದ್ದಾರೆ. ಆದರೆ,  ಅರಣ್ಯ ಶಾಸ್ತ್ರ ಓದಿದ ಪದವಿಧರರಿಗೆ ಉದ್ಯೋಗಾವಕಾಶಗಳು ದೊರೆಯುತ್ತಿಲ್ಲ ಎಂಬುದು ಈ ವಿದ್ಯಾರ್ಥಿಗಳ ಅಳಲು.

ಸುಸ್ಥಿರ ಕೃಷಿಯಲ್ಲಿ ಸಲ್ಫರ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಏಕೆ ಬೇಕು?

PM ಕಿಸಾನ್‌  ರೈತರಿಗೆ  ಬಿಗ್‌ ನ್ಯೂಸ್‌: OTP ಮೂಲಕ ಆಧಾರ್‌ ಕಾರ್ಡ್‌ e-KYC ರದ್ದು..