ಈಗಾಗಲೇ ನಾವೆಲ್ಲ 2022ರ ಕೊನೆಯಲ್ಲಿದ್ದೇವೆ. ಇನ್ನೇನು 2023ನ್ನು ಪ್ರವೇಶಿಸುವ ಸಮಯದಲ್ಲಿ ಸರ್ಕಾರದಿಂದ ನೌಕರರಿಗೆ ಸಿಹಿಸುದ್ದಿಯೊಂದು ಹೊರ ಬಿದ್ದಿದೆ. ಇಲ್ಲಿದೆ ಈ ಕುರಿತಾದ ಮಹತ್ವದ ಮಾಹಿತಿ
ಮುಖ್ಯಮಂತ್ರಿ ಜಾನುವಾರು ಅಭಿವೃದ್ಧಿ ಯೋಜನೆ: ಈ ರಾಜ್ಯದ ರೈತರಿಗೆ ಶೇ.90% ಸಹಾಯಧನ!
ಸದ್ಯಕ್ಕೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಇರುವ ತುಟ್ಟಿಭತ್ಯೆ 38 ಪ್ರತಿಶತವನ್ನು ಮುಂದಿನ ದಿನಗಳಲ್ಲಿ ಮತ್ತೆ 4% ಶೇಕಡಾ ಹೆಚ್ಚಳದೊಂದಿಗೆ 42 ಶೇಕಡಾಕ್ಕೆ ಏರಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಹೊಸ ವರ್ಷದಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. ತುಟ್ಟಿಭತ್ಯೆಯನ್ನು ಸರ್ಕಾರವು ಜನವರಿ ಮತ್ತು ಜುಲೈನಲ್ಲಿ ವರ್ಷಕ್ಕೆ ಎರಡು ಬಾರಿ ಘೋಷಿಸುತ್ತದೆ.
ಈ ಬಾರಿ ಜನವರಿಯಲ್ಲಿ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಿಸಲು ಸಿದ್ಧತೆ ನಡೆದಿದೆ ಎಂದು ತಿಳಿದು ಬಂದಿದೆ.
ಗುಡ್‌ನ್ಯೂಸ್: ಕಳಸಾ ಬಂಡೂರಿ ಯೋಜನೆಗೆ ಕೇಂದ್ರದ ಒಪ್ಪಿಗೆ– ಸಿಎಂ ಬಸವರಾಜ ಬೊಮ್ಮಾಯಿ
ಡಿಎ (DA) ಹೆಚ್ಚಳವನ್ನು ಮಾರ್ಚ್‌ನಲ್ಲಿ ಪ್ರಕಟಿಸಲಾಗುವುದು. ಮಾರ್ಚ್ ಮೊದಲ ವಾರದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಒಮ್ಮತ ಹೊರಬೀಳುವ ನಿರೀಕ್ಷೆ ಇದೆ.
ಫಿಟ್‌ಮೆಂಟ್ ಅಂಶದ ಬಗ್ಗೆ ಚರ್ಚೆ ಸಾಧ್ಯತೆ
ಫಿಟ್‌ಮೆಂಟ್ ಅಂಶ ಪರಿಷ್ಕರಣೆ ಮಾಡಬೇಕೆಂಬ ಬೇಡಿಕೆ ಕೇಂದ್ರ ಸರ್ಕಾರಿ ನೌಕರರಿಂದ ತುಂಬಾ ದಿನಗಳಿಂದ ವ್ಯಕ್ತವಾಗುತ್ತಲ್ಲೇ ಇತ್ತು. ಇದೀಗ ನೌಕರರ ವೇತನ ಹೆಚ್ಚಳ ಕುರಿತು ಪ್ರತ್ಯೇಕ ಕಾರ್ಯಕ್ರಮ ರೂಪಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ನಿರೀಕ್ಷಿಸಲಾಗಿದೆ.
2024ರ ಲೋಕಸಭೆ ಚುನಾವಣೆಗೂ ಮುನ್ನ ಕರಡು ಸಿದ್ಧಪಡಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ದೊರೆಯಲಿದೆ ಬರೋಬ್ಬರಿ 2 ಲಕ್ಷ ಮಾಸಿಕ ಪಿಂಚಣಿ!
ವೇತನ ಆಯೋಗದ ರಚನೆಯ ಮೇಲೆ ಫಿಟ್‌ಮೆಂಟ್ ಅಂಶದ ಪರಿಷ್ಕರಣೆ ಮಾಡಲಾಗುತ್ತದೆ. ಆದರೆ, ಈ ಬಾರಿ ವೇತನ ಆಯೋಗದ ಬದಲು ಬೇರೆ ರೀತಿಯಲ್ಲಿ ನೌಕರರ ವೇತನ ಹೆಚ್ಚಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ಡಿಎ ಸೂತ್ರದ ಮೇಲೆಯೇ ಸಾಮಾನ್ಯವಾಗಿ ವೇತನವನ್ನು ಹೆಚ್ಚಿಸಲಾಗುವುದು. ಅಂದರೆ ಡಿಎ ಹೆಚ್ಚಳದ ಜೊತೆಗೆ ಸಂಬಳವೂ ಹೆಚ್ಚುತ್ತಲೇ ಇತ್ತು.
2023ರ ಮಾರ್ಚ್ 1ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಈ ಕುರಿತು ಘೋಷಣೆಯಾಗುವ ಸಾಧ್ಯತೆಗಳು ಇವೆ.