1. ಸುದ್ದಿಗಳು

ಪಂಜಾಬ್‌ನಲ್ಲಿ ಕಳೆ ಸುಡುತ್ತಿರುವ ರೈತರು; ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳ!

Hitesh
Hitesh
Farmers burning weeds in Punjab; Increase in air pollution in Delhi!

ದೆಹಲಿಯಲ್ಲಿ ಮತ್ತೆ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಪಂಜಾಬ್‌ನಲ್ಲಿ ರೈತರು ಕೈಗೊಂಡ ಈ ಕೆಲಸವೇ ಕಾರಣ ಆ ಕೆಲಸವಾದರೂ ಏನು ಇಲ್ಲಿದೆ ವಿವರ.

ಇದನ್ನೂ ಓದಿರಿ: Delhi Air Pollution: ಪಂಜಾಬ್‌ ಕಳೆ ಸುಡುವಿಕೆ ದೆಹಲಿ ವಾಯು ಮಾಲಿನ್ಯ ತೀವ್ರ ಏರಿಕೆ! ಶಾಲೆ ಬಂದ್‌, ಮನೆಯಿಂದ ಕೆಲಸ ಮಾಡಲು ಸೂಚನೆ..

ಪಂಜಾಬ್‌ನಾದ್ಯಂತ ಬುಧವಾರ ಒಂದೇ ದಿನದಲ್ಲಿ 3,634 (ಕೋಲು ಸುಡುವ) ಕಳೆ ಸುಡುವ ಪ್ರಕರಣಗಳು ವರದಿಯಾಗಿದೆ.

ಇದು ಸಹಜವಾಗಿಯೇ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಳವಾಗಲು ಕಾರಣವಾಗಿದೆ.  

ಈ ಋತುವಿನಲ್ಲೇ ಒಂದೇ ದಿನ ಅತಿಹೆಚ್ಚು ಹುಲ್ಲು ಸುಟ್ಟ ಪ್ರಕರಣ ಇದಾಗಿದೆ.   

Rbi: ಆರ್‌ಬಿಐ: ದೇಶದ 9 ಬ್ಯಾಂಕ್‌ಗಳಲ್ಲಿ ಡಿಜಿಟಲ್‌ ಕರೆನ್ಸಿ ಲಭ್ಯ!  

ಕಳೆ ಸುಟ್ಟ ಪ್ರಕರಣಗಳಲ್ಲಿ 677 ಪ್ರಕರಣಗಳು ಅತಿ ಹೆಚ್ಚಾಗಿದ್ದು, ಇದರ ಬೆನ್ನಲ್ಲೇ ಪಟಿಯಾಲ ವ್ಯಾಪ್ತಿಯಲ್ಲಿ 395 ಪ್ರಕರಣ ದಾಖಲಾಗಿವೆ. 

ಇನ್ನು ಫಿರೋಜ್‌ಪುರಭಾಗದಲ್ಲಿ 342, ಬಟಿಂಡಾದಲ್ಲಿ 317, ಬರ್ನಾಲಾ 278, ಲುಧಿಯಾನ 198, ಮಾನ್ಸಾದಲ್ಲಿ 191,

ಮೊಗಾ ಮತ್ತು ಮುಕ್ತಸರ್‌ ವ್ಯಾಪ್ತಿಯಲ್ಲಿ ತಲಾ 173 ಮತ್ತು ಫರೀದ್‌ಕೋಟ್‌ನಲ್ಲಿ 167 ಪ್ರಕರಣಗಳು ದಾಖಲಾಗಿವೆ.

ಲುಧಿಯಾನ ಮೂಲದ ಪಂಜಾಬ್ ರಿಮೋಟ್ ಸೆನ್ಸಿಂಗ್ ಸೆಂಟರ್‌ ನೀಡಿರುವ ಮಾಹಿತಿಯ ಅನ್ವಯ,

ಸೆಪ್ಟೆಂಬರ್ 15 ರಿಂದ ನವೆಂಬರ್ 2ರವರೆಗೆ ಒಟ್ಟು 21,480 ಪ್ರದೇಶದ ಹೊಲಗಳಲ್ಲಿ ಹುಲ್ಲನ್ನು ಸುಟ್ಟಿರುವ ಪ್ರಕರಣಗಳು ವರದಿಯಾಗಿವೆ.

ಕಳೆದ 2020 ಇದೇ ಅವಧಿಯಲ್ಲಿ ಪಂಜಾಬ್‌ನಲ್ಲಿ 36,765 ಮತ್ತು 2021ರಲ್ಲಿ 17,921 ಪ್ರಕರಣಗಳು ದಾಖಲಾಗಿದ್ದವು. 

 ವಾಟ್ಸಪ್‌ನಲ್ಲೂ ಲಭ್ಯ ಮೆಟ್ರೋ ಟಿಕೆಟ್‌; ಈ ಸೇವೆ ಪ್ರಾರಂಭಿಸಿದ ದೇಶದ ಮೊದಲ ಮೆಟ್ರೋ!  

ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳ !

ಪಂಜಾಬ್ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿ ಹುಲ್ಲು, ಕಳೆ ಸುಡಲು ಪ್ರಾರಂಭಿಸಿದ ನಂತರ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗಲಿದೆ.

ದೆಹಲಿ-ಎನ್‌ಸಿಆರ್‌ನಲ್ಲಿ ಮಾಲಿನ್ಯ ಪ್ರಮಾಣ ಮಿತಿಮೀರಲು ಇದು ಸಹ ಪ್ರಮುಖ ಕಾರಣವಾಗಿದೆ.

ಬುಧವಾರ, ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು(AQI) 376 ರಷ್ಟಿತ್ತು, ಮಂಗಳವಾರ 424 ರಿಂದ ಸುಧಾರಿಸಿದೆ.

ದೆಹಲಿಯ ಗಾಳಿಯ ಗುಣಮಟ್ಟ ಇಳಿಕೆಗೆ ಇದೂ ಒಂದು ಕಾರಣವಾಗಿದೆ.

ಇದೀಗ ಇದು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಪಂಜಾಬ್‌ನಲ್ಲಿ 2021ಕ್ಕೆ ಹೋಲಿಸಿದರೆ ಈ ಬಾರಿ ಕೃಷಿ ತ್ಯಾಜ್ಯ, ಕಳೆಗೆ ಬೆಂಕಿ ಹಚ್ಚುವ ಪ್ರಕರಣದಲ್ಲಿ ಶೇಕಡಾ 19 ರಷ್ಟು ಏರಿಕೆಯಾಗಿದೆ.

ಆಮ್‌ಆದ್ಮಿ ಪಕ್ಷವು ಪಂಜಾಬ್‌ನಲ್ಲಿ ಅಧಿಕಾರ ನೀಡಿದರೆ, ಕಳೆ ಸುಡುವ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದಾಗಿ ಭರವಸೆ ನೀಡಿತ್ತು.

ಆದರೆ, ಎರಡೂ ರಾಜ್ಯಗಳಲ್ಲಿಯೂ ಪಂಜಾಬ್‌ ಮತ್ತು ದೆಹಲಿಯಲ್ಲಿ ಎಎಪಿಯೇ ಅಧಿಕಾರದಲ್ಲಿಯೇ ಇದೆ.

ಇದೀಗ ಸಮಸ್ಯೆ ಉಲ್ಪಣಿಸಿರುವುದು ಎಎಪಿಯನ್ನೂ ಸಂಕಷ್ಟಕ್ಕೆ ದೂಡಿದೆ. 

ಮನೆಯಿಂದಲೇ ಕೆಲಸ ಮಾಡಲು ಸಚಿವ ಗೋಪಾಲ್ ರೈ ಸೂಚನೆ!

ರಾಜಧಾನಿಯಲ್ಲಿ ವಾಯು ಮಾಲಿನ್ಯಕ್ಕೆ ಪ್ರಮುಖ ಕೊಡುಗೆ ನೀಡುವ ವಾಹನ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮನೆಯಿಂದಲೇ ಕೆಲಸ ಮಾಡಲು ಮತ್ತು ಸಮೂಹ ಸಾರಿಗೆಯನ್ನು ಬಳಸುವಂತೆ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಬುಧವಾರ ಹೇಳಿದರು.

ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರು ಈ ಹಿಂದೆ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಹುಲ್ಲು ಸುಡುವಿಕೆಗೆ ಪಂಜಾಬ್‌ನಲ್ಲಿನ ರೈತರನ್ನು ಬಿಜೆಪಿ ಗುರಿಯಾಗಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಆದಾಗ್ಯೂ, ಕೆಲವು ವರ್ಗಗಳಿಗೆ ಷರತ್ತುಗಳೊಂದಿಗೆ ವಿನಾಯಿತಿ ನೀಡಲಾಗಿದೆ.

ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ಅಕ್ಟೋಬರ್ 31 ಮತ್ತು ನವೆಂಬರ್ 1 ರ ನಡುವೆ ಮಾಲಿನ್ಯದ ಮಟ್ಟವು ರೆಡ್‌ ಜೋನ್‌ ತಲುಪಬಹುದು ಎಂದು ಅಂದಾಜಿಸಲಾಗಿತ್ತು. ಈಗ ಅದು ಖಚಿತವಾಗಿದೆ.

ನೆರೆಯ ಹಾಗೂ ಪಕ್ಕದ ಪಂಜಾಬ್‌ ರಾಜ್ಯದಲ್ಲಿ ಗೋಧಿ ಬೆಳೆಯ ಅವಶೇಷಗಳನ್ನು ಈ ಸಮಯದಲ್ಲಿ ಸುಡಲಾಗುತ್ತದೆ. ಆ ಕಾರಣದಿಂದಾಗಿ ದೆಹಲಿ-ಎನ್‌ಸಿಆರ್‌ನಲ್ಲಿ (NCR) ಮಾಲಿನ್ಯದ ಮಟ್ಟವು ಅಪಾಯಕಾರಿ ಮಟ್ಟವನ್ನು ತಲುಪಿದೆ.
ಚಿಕ್ಕಮಕ್ಕಳು ಮತ್ತು ವೃದ್ಧರು ಬೆಳಗ್ಗೆ ಹೊರಗೆ ಹೋಗದಂತೆ, ಓಡಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ.

ಇದರೊಂದಿಗೆ, ಉಸಿರಾಟದ ರೋಗಿಗಳಿಗೆ ವಿಶೇಷವಾಗಿ ಜಾಗರೂಕರಾಗಿರಲು ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿರಿ: 1.4 ಕೋಟಿಗೂ ಹೆಚ್ಚು PF ಚಂದಾದರರಿಗೆ ಸಿಗಲಿದೆ ಬಡ್ಡಿ ಮೊತ್ತ! 

Published On: 03 November 2022, 09:59 AM English Summary: Farmers burning weeds in Punjab; Increase in air pollution in Delhi!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.