1. ಸುದ್ದಿಗಳು

ಫಾರ್ಮರ್ ದ ಬ್ರ್ಯಾಂಡ್ ಕಾರ್ಯಕ್ರಮದ ಮಾಸಿಕ ಮಹೋತ್ಸವದಲ್ಲಿ ಕೃಷಿಯ ಜ್ಞಾನ ನೀಡಿದ ದೇಶದ ಖ್ಯಾತ ರೈತರು

ಕೃಷಿ ಜಾಗರಣ ಆಯೋಜಿಸಿದ ಫಾರ್ಮರ್ ದ ಬ್ರ್ಯಾಂಡ್ ಮಾಸಿಕ ಮಹೋತ್ಸವ ಸೆಪ್ಟೆಂಬರ್ 5 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳ ಪ್ರಗತಿಪರ ರೈತರು ತಮ್ಮ ಉತ್ಪನ್ನಗಳ ಬಗ್ಗೆ ಮತ್ತು  ಅವುಗಳನ್ನು ಬೇಗೆ ಮಾರಾಟ ಮಾಡಬೇಕೆಂಬುದರ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸೆಪ್ಟೆಂಬರ್ 5 ರಂದೇ ಕೃಷಿ ಜಾಗರಣದ ಸಂಸ್ಥಾಪನಾ ದಿನವಾಗಿದ್ದರಿಂದ ದೇಶದ 10 ಜನ ಫಾರ್ಮರ್ ದ ಬ್ರ್ಯಾಂಡ್ ನ ಪ್ರಸಿದ್ಧ ಪ್ರಗತಿಪರ ರೈತರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಯಿತು. ಈ ಕಾರ್ಯಕ್ರಮದ ಮೂಲಕ ರೈತರು ತಾವು ಉತ್ಪಾದಿಸುವ ಉತ್ಪನ್ನಗಳ ಬಗ್ಗೆ ಹಾಗೂ ಮಾರುಕಟ್ಟೆಯ ಬಗ್ಗೆ ವಿವರಿಸಿದರು.

ಉತ್ತರ ಪ್ರದೇಶದ ನೈಸರ್ಗಿಕ ಕೃಷಿಕ ಹಾಗೂ ಸ್ವದೇಶ್ ಬ್ರಾಂಡ್ ಸಂಸ್ಥಾಪಕ ಪದ್ಮಶ್ರೀ ಪುರಸ್ಕೃತ ಶ್ರೀ ಭರತ್ ಭೂಷಣ ತ್ಯಾಗಿ(Padma Shri Bharat Bhushan Tyagi) ಯವರು  ಸಾವಯವ ಕೃಷಿ, ಸಾವಯವ ಬೆಳೆಗಳಿಂದ ರೈತರಿಗೆ ಹೇಗೆ ಲಾಭ ಸಿಗುತ್ತದೆ ಹಾಗೂ ಎಫ್.ಪಿ.ಓ ಗಳ ಮಹತ್ವದ ಬಗ್ಗೆ ವಿವರಿಸಿದರು.

ಮಧ್ಯಪ್ರದೇಶದ ಅವಿನಾಶ ಸಿಂಗ್ ( Avinash Singh) ರವರು ಸ್ವತ ಸಾವಯವ ತರಕಾರಿಗಳನ್ನು ಬೆಳೆಸುತ್ತಾರೆ. ಸಾವಯವ ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನದ ಕೊಡುಗೆ ಮತ್ತು ಅದರ ಮೂಲಕ ಲಭ್ಯವಿರುವ ಅವಕಾಶಗಳ ಬಗ್ಗೆ ತಿಳಿಸಿದರು.

ತಮಿಳುನಾಡಿನ ಮಂಜಾರಿ ಹನಿ ಪ್ರೊಡಕ್ಷನ್ ಕಂಪನಿಯ ಮಂಜುಳಾ ಮತ್ತು ಪ್ರತಿಭನ್(Manjula and Partiban) ದಂಪತಿ ಈ ಸಂದರ್ಭದಲ್ಲಿ ತಮ್ಮ ಜೇನು ಉತ್ಪನ್ನಗಳ ಬಗ್ಗೆ ವಿವರಿಸಿದರು. ಸುಮಾರು 33 ಬಗೆಯ ಜೇನು ಆಧಾರಿತ ಮೌಲ್ಯವರ್ಧಿತ  ಉತ್ಪನ್ನಗಳನ್ನು ಮಂಜರಿ ಜೇನುತುಪ್ಪ ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಾರೆ. ಏಕೆಂದರೆ ಬ್ರಾಂಡ್ ಇಲ್ಲದೆ ಮಾರುಕಟ್ಟೆ ಮಾಡುವುದು ಕಷ್ಟವಾಗುತ್ತದೆ ಎಂದು ಪಾರ್ತಿಬಾನ್ ಹೇಳಿದರು. ರೈತರು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು. ಅದಕ್ಕೆ ಶ್ರಮ, ಬಂಡವಾಳ, ತಾಳ್ಮೆ ಬೇಕಾಗುತ್ತದೆ. ಪ್ರಸ್ತುತ ವರ್ಷಕ್ಕೆ 20 ಲಕ್ಷ ನಿವ್ವಳ ಲಾಭ ಗಳಿಸುತ್ತಿದ್ದೇನೆ ಎಂದರು.

ಗುಜರಾತಿನ ದವೇಶ ಪಟೇಲ(Devesh Patel) ರವರು ಸಾತ್ವಾ ಆರ್ಗಾನಿಕ್  ಸಂಸ್ಥಾಪಕರಾಗಿದ್ದಾರೆ. ಅವರು ನವೀನ ತಂತ್ರಜ್ಞಾನ, ಪ್ಯಾಕಿಂಗ್, ಹನಿ ನೀರಾವರಿ, ಗ್ರೀನ್ ಹೌಸ್, ಪಾಲಿಹೌಸ್, ವೈಜ್ಞಾನಿಕ ಕೃಷಿ ತಂತ್ರಜ್ಞಾನಗಳ ಬಗ್ಗೆ ವಿವರಿಸಿದರು.

ರೈತರು ತಮ್ಮ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಹೇಗೆ ಸಹಾಯ ಮಾಡುತ್ತವೆ ಎಂದು ವಿವರಿಸಿದರು.

ಮಹಾರಾಷ್ಟ್ರದ ಗೋಪಾಲ್ ನಂದನ್ ಬ್ರಾಂಡ್ ನ ಮಾಲಿಕ ಸುಹಾಸ್ ಪಾಟೀಲ್ (Suhas Patil) ಮಾತನಾಡಿ, ಮೌಲ್ಯವರ್ಧನೆಯ ಪ್ರಾಮುಖ್ಯತೆ ಮತ್ತು ಪ್ರಿಮಿಯಂ ಗುಣಮಟ್ಟದ ಮಹತ್ವದ ಬಗ್ಗೆ ತಿಳಿಸಿದರು. ಮರುಬಳಕೆ ಮಾಡಬಹುದಾದ ವಸ್ತುಗಳ ಮೌಲ್ಯವರ್ಧನೆ ಕುರಿತು ಕೇರಳದ ಪ್ರೀತಾ ಪ್ರತಾಪ್ (Preetha Prathap) ಹೇಳಿದರು.

 ಮಹಾರಾಷ್ಟ್ರದ ನವನಾಥ್ ಮಲ್ಹಾರಿ ಕಪ್ಸೇಟ್ (Navnath Malhari Kapsate) ಅವರು ತಮ್ಮ ಉತ್ಪನ್ನಗಳಿಗೆ ಬ್ರ್ಯಾಂಡ್ ಮಾಡಿ ಮಾರಾಟ ಮಾಡುತ್ತಿರುವ ಕುರಿತು ವಿವರಿಸಿದರು. ಉತ್ಪಾದನೆ ಹೆಚ್ಚಿಸಿ ಸ್ವತಃ ರೈತರೇ ಬ್ರ್ಯಾಂಡ್ ಮಾಡಿ ಮಾರಾಟ ಮಾಡಿದರೆ ಲಾಭ ಗಳಿಸಬಹುದೆಂಬುದುರ ಕುರಿತು ತಿಳಿಸಿದರು.

ಜಗದೀಶ್ ರೆಡ್ಡಿ ( Jagdeesh Reddy) ಆಂಧ್ರಪ್ರದೇಶದ ಪ್ರಸಿದ್ಧ ನೈಸರ್ಗಿಕ ಕೃಷಿಕರಾಗಿದ್ದು, ಜಗದೀಶ್ ನ್ಯಾಚುರಲ್ ಫಾರ್ಮಿಂಗ್ ಮತ್ತು ಯಾವುದೇ ರಾಸಾಯನಿಕಗಳನ್ನು ಬಳಸದೆ ತಯಾರಿಸಿದ ನೈಸರ್ಗಿಕ ಉತ್ಪನ್ನಗಳ ಮಹತ್ವವನ್ನು ವಿವರಿಸಿದರು. ಇವರು ಸಹ ಮೌಲ್ಯವರ್ಧನೆಗೆ ಒತ್ತು ನೀಡಿದರು, ಇದು ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಹಾಯ ಮಾಡುತ್ತದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲು ಪ್ರೋತ್ಸಾಹಿಸಬೇಕು  ಎಂದರು.

ಛತ್ತಿಸಗಢ ರಾಜ್ಯದ ಮಂಜೀತ್ ಸಿಂಗ್ ಸುಲಜಾ(Manjeet Singh Saluja) ರವರು ತರಕಾರಿಗಳನ್ನು ಸ್ವಂತ ಬ್ರ್ಸಾಂಡ್ ಮಾಡಿ ಮಾರಾಟ ಮಾಡುತ್ತಿರುವ ಕುರಿತು ಹೇಳುತ್ತಾ ಸ್ವಂತ ಬ್ರ್ಸಾಂಡ್ ಮಾಡಿ ವ್ಯವಹಾರ ಮಾಡಬೇಕು. ಗುಣಮಟ್ಟ ಕಾಪಾಡಿಕೊಂಡರೆ ಇನ್ನೂ ಹೆಚ್ಚು ಆದಾಯ ಗಳಿಸಬಹದು. ತಾವು ಇದನ್ನೇ ಮಾಡುತ್ತಿದ್ದೇನೆ ಎಂದರು.

Him Apple ಬ್ರ್ಯಾಂಡ್ ಸಂಸ್ಥಾಪಕ ಹಾಗೂ  ಕುಲ್ಲು ಮತ್ತು ಲಾಹೌಲ್ ಸ್ಪಿತಿಯ ಎಪಿಎಂಸಿ ಮಾಜಿ ನಿರ್ದೇಶಕ ರಾಯ್ ನವನೀಲ್ ಶಂಕರ್ ಸೂದ್ (Rai Navneet Shankar Sood) ರವರು ಸಾವಿರಾರು ಗ್ರಾಹಕರ ಮನೆಗಳಿಗೆ ಹೋಗಿ ಸೇಬು ಮಾರಾಟ ಮಾಡುತ್ತಾರೆ. ಗುಣಮಟ್ಟದ ಉತ್ಪನ್ನಗಳಿದ್ದರೆ ಗ್ರಾಹಕರು ಹುಡುಕಿಕೊಂಡು ಬರುತ್ತಾರೆ ಎಂದರು.

ಶಿಕ್ಷಕರ ದಿನಾಚರಣೆಯಂದೇ ವಿವಿಧ ರಾಜ್ಯಗಳಲ್ಲಿ ಖ್ಯಾತಿ ಪಡೆದ ಪ್ರಗತಿಪರ ರೈತರು ಪಾರ್ಮರ್ ದ ಬ್ರ್ಯಾಂಡ್ ಮಾಸಿಕ ಮಹೋತ್ಸವದಲ್ಲಿ ವ್ಯವಸಾಯದ ಕುರಿತು ಶಿಕ್ಷಣ ನೀಡಿದರು. ಕೃಷಿ ಜಾಗರಣದ ಬೈರುಗಳು ದೇಶಾದ್ಯಂತ ಹರಡಿ ರೈತರಿಗೆ ಕೇಂದ್ರ ಬಿಂದುವಾಗಲಿ ಎಂದು ಶುಭ ಹಾರೈಸಿದರು.

Published On: 06 September 2020, 09:54 PM English Summary: Farmer The Brand Mahotsav 2020

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.