ರೈತರು ಸಾಕಷ್ಟು ಕಷ್ಟು ಪಟ್ಟು ಬೆಳೆಗಳನ್ನು ಬೆಳೆದಿರುತ್ತಾರೆ. ಆದರೆ ಬಂಗಾರದಂತ ಬೆಳೆ ಕೈಗೆ ಬರುವ ಮುನ್ನವೇ ಸಾಕಷ್ಟು ಕಾರಣಗಳಿಂದ ಹಾಳಾಗುತ್ತವೆ. ಅದರಲ್ಲಿ ಪ್ರಮುಖವಾಗಿ ಅತಿವೃಷ್ಟಿಯಿಂದ ಬೆಳೆ ಹಾಳಾಗುತ್ತದೆ.
ಕಾಳುಮೆಣಸಿನಲ್ಲಿ ಬರುವ ರೋಗಗಳು ಮತ್ತು ಅದರ ಸಮಗ್ರ ನಿರ್ವಹಣೆ
ಭತ್ತದ ಕೃಷಿಯಲ್ಲಿ ಮೀನುಗಾರಿಕೆ: ಈಗ ರೈತರು ಎರಡೆರಡು ಲಾಭ ಪಡೆಯಬಹುದು!
ಇನ್ನು ಹೀಗೆ ಉತ್ತಮ ರೀತಿಯಲ್ಲಿ ಬಂದ ಬೆಳೆಯನ್ನು ಕಾಪಾಡಿಕೊಳ್ಳುವುದು ಕೂಡ ಸಾಕಷ್ಟು ಸವಾಲಿನ ಕೆಲಸವೇ ಸರಿ ಎನ್ನಬಹುದು. ಹೌದು ಯಾಕಂದರೆ ಕಾಡು ಪ್ರಾಣಿಗಳು ಹೊಲ, ಗದ್ದೆಗಳಿಗೆ ಲಗ್ಗೆ ಇಟ್ಟು ಬೆಳೆಗಳನ್ನು ಹಾಳು ಮಾಡುವ ಸುದ್ದಿಯನ್ನು ನಾವು ದಿನ ನಿತ್ಯ ಕೇಳುತ್ತಲೇ ಇರುತ್ತವೆ.
ಸದ್ಯ ಕಾಡು ಪ್ರಾಣಿಗಳಿಂದ ತನ್ನ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತನೋರ್ವ ಕರಡಿಯ ಮೊರೆ ಹೋಗಿದ್ದಾನೆ. ಯೆಸ್ ಇದು ನಂಬಲು ಚೂರು ಸಾಧ್ಯವಾಗದೇ ಇದ್ದರು ಕೂಡ, ನೀವು ಪೂರ್ಣ ಸುದ್ದಿ ಓದಿದರೆ ಇದು ಹೇಗೆ ಎಂಬುದು ನಿಮಗೆ ಗೊತ್ತಾಗುತ್ತದೆ.
ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ರೈತರೊಬ್ಬರ ಹೊಲದಲ್ಲಿನ ಬೆಳೆಗಳನ್ನು ಕೋತಿಗಳು ಗುಂಪು ಹಾಳು ಮಾಡಿದೆ. ನಿತ್ಯ ಕೋತಿಗಳ ಕಾಟದಿಂದ ಬೇಸತ್ತ ಈ ರೈತ ಹೊಸ ಉಪಾಯ ಮಾಡಿದ್ದಾನೆ. ಕಾಡುಪ್ರಾಣಿಗಳಿಂದ ಬೆಳೆಗಳಿಗೆ ಬೆದರಿಕೆಯೊಡ್ಡಿದ ರೈತ ಭಾಸ್ಕರ್ ರೆಡ್ಡಿ ಕಾಡು ಪ್ರಾಣಿಗಳನ್ನು ಹೆದರಿಸಲು ಕರಡಿ ವೇಷ ಧರಿಸಿದ ವ್ಯಕ್ತಿಯೋರ್ವನನ್ನು ಕಾವಲು ಕಾಯಲು ನೇಮಿಸಿದ್ದಾರೆ.
ಉತ್ತಮ ಕೃಷಿ ಮತ್ತು ಆದಾಯಕ್ಕಾಗಿ ಹೂಕೋಸು ಕೃಷಿ! ಇಲ್ಲಿದೆ ಹೂಕೋಸು ಬೆಳೆಯ ಸಮಗ್ರ ಮಾಹಿತಿ…
Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…
ಇದಕ್ಕಾಗಿ ಕರಡಿ ವೇಷ ಧರಿಸಿ ಕಾವಲಿಗೆ ನಿಂತ ವ್ಯಕ್ತಿಗೆ ರೈತ 10,000 ರೂ. ಸಂಬಳ ಕೂಡ ನೀಡುತ್ತಿದ್ದಾನೆ ಎನ್ನಲಾಗಿದೆ. ಇದರಿಂದ ಕಾಡು ಪ್ರಾಣಿಗಳು ಗದ್ದೆಗೆ ಬರಲು ಧೈರ್ಯ ಮಾಡುತ್ತಿಲ್ಲವಂತೆ. ಹಾಗೂ ಈ ಉಪಾಯ ಮಾಡಿದ ನಂತರ ಸಾಕಷ್ಟು ಕೋತಿಗಳ ಹಾವಳಿ ಕಡಿಮೆಯಾಗಿದೆ ಎನ್ನುತ್ತಾರೆ ರೈತ ಭಾಸ್ಕರ್ ರೆಡ್ಡಿ.
“ನನ್ನ ಬೆಳೆಯನ್ನು ರಕ್ಷಿಸಲು ಒಬ್ಬ ವ್ಯಕ್ತಿಗೆ ಕರಡಿಯ ವೇಷಭೂಷಣವನ್ನು ಧರಿಸಲು ನಾನು ದಿನಕ್ಕೆ 500 ರೂಪಾಯಿಗಳನ್ನು ಪಾವತಿಸುತ್ತಿದ್ದೇನೆ. ನಷ್ಟ ತಪ್ಪಿಸಲು ನನಗೆ ಬೇರೆ ದಾರಿಯಿಲ್ಲ' ಎಂದು 10 ಎಕರೆ ಜಮೀನಿನಲ್ಲಿ ಜೋಳ, ತರಕಾರಿ ಬೆಳೆದಿರುವ ಭಾಸ್ಕರ್ ರೆಡ್ಡಿ ಹೇಳಿದರು.
ಸೀಮೆ ಹಂದಿಗಳು ಮತ್ತು ಕಾಡಾನೆಗಳ ದಾಳಿಯಿಂದ ರೈತ ಅಪಾರ ನಷ್ಟ ಅನುಭವಿಸುತ್ತಿದ್ದ. ಅವರು ಸ್ಟಫ್ಡ್ ಹುಲಿ ಆಟಿಕೆಗಳನ್ನು ಇರಿಸುವುದು ಮತ್ತು ತನ್ನ ಬೆಳೆಗಳನ್ನು ರಕ್ಷಿಸಲು ಸೌರ ಬೇಲಿಗಳಂತಹ ವಿಭಿನ್ನ ವಿಧಾನಗಳನ್ನು ಪ್ರಯತ್ನಿಸಿದರು. ಅವರು ಅಂತಿಮವಾಗಿ ಪರಿಣಾಮಕಾರಿ ಪರಿಹಾರವನ್ನು ಕಂಡುಕೊಂಡರು ಎನ್ನಲಾಗಿದೆ.
ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!
ಶ್ರೀಗಂಧ ಬೆಳೆದು 6 ಲಕ್ಷ ರೂಪಾಯಿ ಗಳಿಸಬಹುದು..ಮಾರುಕಟ್ಟೆಯಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್